ಬಿಎಜೆಎಸ್‌ಎಸ್ ಬಿ. ಇಡಿ ಕಾಲೇಜು: ವಿಶ್ವ ಜನಸಂಖ್ಯಾ ದಿನಾಚರಣೆ
BAJSS B. ED College: World Population Day Celebration
ರಾಣೇಬೆನ್ನೂರು 17: ಸಮಾಜದಲ್ಲಿ ಇಂದು ಸಮಾನತೆಗಾಗಿ ಪ್ರತಿಯೊಬ್ಬರು ಹೋರಾಟ ಮಾಡಬೇಕಾದ ಇಂದಿನ ಅಗತ್ಯವಿದೆ ಎಂದು ಬಿ. ಎ. ಜೆ. ಎಸ್.ಎಸ್. ಬಿ.ಇಡಿ ಕಾಲೇಜು ಪ್ರಾಚಾರ್ಯ ಎಂ. ಎಂ. ಮೃತ್ಯುಂಜಯ ಕರೆ ನೀಡಿದರು.
ಅವರು ಕಾಲೇಜು ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ದೇಶ, ಸಕಲ ಸಂಪನ್ಮೂಲಗಳನ್ನು ಹೊಂದಿರುವ ಸಮೃದ್ಧ ದೇಶ ಜನಸಂಖ್ಯಾ ಸ್ಫೋಟದಿಂದಾಗಿ ಅನೇಕ ಸಮಸ್ಯೆಗಳು, ಎದುರಾಗುವ ಸಂಭವಿದೆ. ಆದರೂ, ಯಾವುದೇ ಕೊರತೆ ಇಲ್ಲದೆ ಅತ್ಯಂತ ಜಾಗೃತಯಿಂದ ನಿಭಾಯಿಸುವ ಶಕ್ತಿ ಮತ್ತು ಯುಕ್ತಿ ದೇಶಕ್ಕಿದೆ ಎಂದರು
ವಿವಿಧತೆಯಲ್ಲಿ ಏಕತೆ ಕಾಣುವ ಭಾವೈಕ್ಯತೆಯ ಭಾರತದಲ್ಲಿ ಯುವ ಸಮುದಾಯ ಹೆಚ್ಚಾಗಿದೆ ಯುವಕರಿಂದ ದೇಶದ ಭವಿಷ್ಯ ನಿರ್ಮಾಣವಾಗಬೇಕಾದಅಗತ್ಯವಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ ದೂರದೃಷ್ಟಿಯಿಂದ ಮುನ್ನಡೆಯಬೇಕು ಎಂದರು.
ದೇಶದ ಸಂರಕ್ಷಣೆ ಮತ್ತು ಯುವ ಸಮುದಾಯ ವಿಷಯವಾಗಿ, ಕಾಲೇಜಿನ ಶಿಕ್ಷಣ ಸಲಹೆಗಾರ, ಸಾಹಿತಿ ಹೆಚ್.ಎ. ಭಿಕ್ಷಾವರ್ತಿಮಠ ಅವರು ಉಪನ್ಯಾಸ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರ ಮಾಧಿಕಾರಿ, ಪರಶುರಾಮ ಪವಾರ ಅವರು, ಮಾತನಾಡಿದರು. ದಿನಾಚರಣೆ ನಿಮಿತ್ತ ಪ್ರಶಿಕ್ಷಣಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಾದ ಪ್ರಿಯಾಂಕಾ ದ್ಯಾವಪ್ಪನವರ, ( ಪ್ರಥಮ) ಯುವರಾಜ್ (ದ್ವಿತೀಯ) ಹಾಗೂ ಆರ್ಶಿಯಾ ಡಿ, ಮತ್ತು ಸುನಿತಾ ತೃತಿಯ ಸ್ಥಾನ ಪಡೆದ ಇವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಉಪನ್ಯಾಸಕರಾದ ಎ ಶಂಕರ ನಾಯಕ, ಶ್ರೀಕಾಂತ್ ಗೌಡ ಶಿವಣ್ಣನವರ, ಅಶೋಕ ಬಣಕಾರ, ಅನಿತಾ, ಯುವರಾಜ ಜಿ, ಪವನ ಕುಮಾರ ಲಮಾಣಿ, ಶಾರದಾ ವಾಲಿ, ಮುತ್ತುರಾಜ ಸಿದ್ದಣ್ಣನವರ, ಶ್ರೀಮತಿ ಚಂದನ ಕಿಚಡಿ, ಮೊದಲಾದವರು ಉಪಸ್ಥಿತರಿದ್ದರು. ಅನಿತಾ ಸಂಗಡಿಗರು ಪ್ರಾರ್ಥಿಸಿದರು. ಯುವರಾಜ್ ಜಿ, ಸ್ವಾಗತಿಸಿ ಲಕ್ಷ್ಮಿ ಹಣಚಿಕ್ಕಿ ನಿರೂಪಿಸಿ, ಪವನಕುಮಾರ ಲಮಾಣಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 