ಬೆಂಗಳೂರು, ನ 9 : ರಾಮಮಂದಿರ ಹಾಗೂ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀಪು ಹೊರಹೊಮ್ಮಲಿದ್ದು, ಸರ್ವೋಚ್ಛ ನ್ಯಾಯಾಲಯ ಪ್ರಕಟಿಸುವ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವಾಗತಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಡಿನ ಜನತೆಗೆ ಸಂದೇಶ ನೀಡಿದ್ದಾರೆ. ಪಕ್ಷದ ಮುಖಂಡರೊಂದಿಗೆ ಕೆ.ಆರ್.ಪೇಟೆಯಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತೆರಳುವ ಮುನ್ನ ಡಾಲರ್ಸ್ ಕಾಲೋನಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯಾದ್ಯಂತ ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ತೀಪು ಯಾರ ಪರವೇ ಬರಲಿ, ಯಾರ ವಿರುದ್ಧವೇ ಬರಲಿ ನ್ಯಾಯಾಲಯದ ತೀರ್ಪುಗೆ ಗೌರವ ಕೊಡಬೇಕು ಎಂದರು. ಇತ್ಯ ಅಯೋಧ್ಯೆ ತೀಪು ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆಯ ಆರ್ ಎಸ್ ಎಸ್ ಕಚೇರಿ ಕೇಶವ ಕೃಪಾ ಸುತ್ತಮುತ್ತ ಬಿಗಿ ಪೋಲಿಸ್ ಭದ್ರತೆ ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ವ್ಕಾರ್ಡ್ ನಿಂದ ಕೇಶವ ಕೃಪಾದಲ್ಲಿ ಭದ್ರತಾ ಪರಿಶೀಲನೆ ನಡೆಸಿತು. ನಗರದಲ್ಲಿನ ಸಂಘ ಪರಿವಾರದದ ಯಾವುದೇ ಪ್ರಮುಖರು ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಲಾಗಿದ್ದು, ಸಂಘದ ಪ್ರಮುಖ ಮೋಹನ್ ಭಗವತ್ ಒಂದು ಗಂಟೆ ಸುದ್ದಿ ಗೋಷ್ಠಿ ನಡೆಸಲಿದ್ದಾರೆ. ಅವರು ನೀಡುವ ಪ್ರತಿಕ್ರಿಯೇ ಎಲ್ಲಾ ಸಂಘ ಪರಿವಾರದ ನಾಯಕರ ಪ್ರತಿಕ್ರಿಯೆ ಎಂಬ ನಿರ್ದೇಶನ ನೀಡಲಾಗಿದೆ. ಮೇಲ್ಮನೆ ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಎಲ್ಲಾ ಪ್ರಮುಖರು ಕ್ಷೇತ್ರದಲ್ಲಿ ಇದ್ದು, ಪರಿಸ್ಥಿತಿಯನ್ನು ಪೂರ್ಣ ಶಾಂತಿಯುತವಾಗಿ ನಿಭಾಯಿಸಬೇಕು. ತೀಪು ಬಂದ ನಂತರ ಪ್ರಧಾನಮಂತ್ರಿಗಳು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಹೇಳಿಕೆಗಳ ನಂತರ ಅದೇ ರೀತಿಯಲ್ಲಿ ನಮ್ಮ ಅಭಿಪ್ರಾಯಗಳು ರೂಪಿತವಾಗಬೇಕು. ಸೂಕ್ಷ್ಮಪ್ರದೇಶಗಳಲ್ಲಿ, ಕಾರ್ಯಾಲಯ ಮತ್ತಿತರ ಕಡೆಗಳಲ್ಲಿ ಎಚ್ಚರ ವಹಿಸಬೇಕು. ಯಾವುದೇ ರೀತಿಯಲ್ಲಿ ಮೆರವಣಿಗೆ ಹಾಗೂ ವಿಜಯೋತ್ಸವಗಳನ್ನು ಮಾಡಬಾರದು. ಸಾಮಾಜಿಕ ಜಾಲತಾಣ ಪ್ರಕಟಣೆಗಳ ಮೇಲೆ ವಿಶೇಷ ಗಮನವಿರಬೇಕು ಎಂದರು. ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕವಿರಿಸಿಕೊಂಡು ಸಂಪೂರ್ಣ ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಸೊರಬ ಕ್ಷೇತ್ರದ ಶಾಸಕ ಕುಮಾರ್ ಎಸ್.ಬಂಗಾರಪ್ಪ, ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ನಡೆಯಲು ಅವಕಾಶ ನೀಡಬಾರದು. ನ್ಯಾಯಾಲಯದ ತೀಪರ್ಿಗೆ ಬೆಲೆ ಗೌರವ ಕೊಟ್ಟು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನ ಚಾಮರಾಜಪೇಟೆ ಶಾಸಕ ಹಾಗೂ ಮುಸ್ಲಿಂ ಮುಖಂಡ ಜಮೀರ್ಅಹ್ಮದ್, ಶಾಂತಿ ಸೌಹಾರ್ದತೆ ಕಾಪಾಡಿಬೇಕು. ಯಾರೂ ಸಹ ಅಹಿತಕರ ಘಟನೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಕಾಡೋ ಸಹ ಶಾಂತಿ ಸೌಹಾರ್ದತೆ ಕಾಪಾಡುವಂತೆ ಸಂದೇಶ ರವಾನಿಸಿದ್ದಾರೆ.