ಆತ್ಮಹತ್ಯೆ ಕುಟುಂಬಕ್ಕೆ ರೂ25 ಲಕ್ಷ ಪರಿಹಾರ ನೀಡಲು: ಬಿ ಡಿ ಪಾಟೀಲ ಆಗ್ರಹ

ಆತ್ಮಹತ್ಯೆ ಕುಟುಂಬಕ್ಕೆ ರೂ25 ಲಕ್ಷ ಪರಿಹಾರ ನೀಡಲು: ಬಿ ಡಿ ಪಾಟೀಲ ಆಗ್ರಹ  B.D. Patil demands Rs 25 lakh compensation for the family of the suicide victim

ಲೋಕದರ್ಶನ ವರದಿ  

ಇಂಡಿ 24 : ತಾಲೂಕಿನ ತಡವಲಗಾ ಗ್ರಾಮದಲ್ಲಿ ಜುಲೈ 17, 2026ರಂದು ನಾಗಪ್ಪ ಭೀಮಣ್ಣ ಹತ್ತರಕಿ   ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದುಃಖಕರವಾಗಿದೆ. ಮೃತ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕಿನಿಂದ ಟ್ರ್ಯಕ್ಟರ್ ಖರೀದಿಗಾಗಿ ಸಾಲ ಪಡೆದಿದ್ದರು. ಈ ವರ್ಷ ಉಂಟಾದ ತೀವ್ರ ಬರಗಾಲದಿಂದ ಬೆಳೆ ಸಂಪೂರ್ಣ ಹಾನಿಗೊಳಗಾಗಿ, ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟದಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲ ಅವರು ಮೃತ ರೈತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, ರೈತನ ಸಾವಿಗೆ ಸರ್ಕಾರ ಗಂಭೀರವಾಗಿ ಸ್ಪಂದಿಸಿ, ಮೃತ ರೈತನ ಕುಟುಂಬಕ್ಕೆ ರೂ25 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಅಲ್ಲದೆ, ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಂಡು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ, ನಾಗಪ್ಪ ಮಕಣಿ, ಶೇಕುಗೌಡ ಬಿರಾದಾರ, ರೇವಣ್ಣ ಎಳಮೇಲಿ, ವಿಶ್ವನಾಥ್ ಕುಂಬಾರ, ಶಾಂತಪ್ಪ ಖಸ್ಕಿ,ರಾಮನಗೌಡ ಪಾಟೀಲ, ರಾಮಣ್ಣ ತಳವಾರ, ಸಚಿನ ಇಂಡಿ, ಬಸವರಾಜ ಹಳ್ಳಿ, ಚಂದು ಹಿರೇ ಕುರುಬರು, ಬಸವರಾಜ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.