ದೊಡ್ಡಮ್ಮ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶಿವಕುಮಾರ್ ಹಿರೇಮಠರನ್ನು ಸನ್ಮಾನಿಸಿದ - ಬಿ. ಟಿ.ಚಂದ್ರಶೇಖರ್

ದೊಡ್ಡಮ್ಮ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶಿವಕುಮಾರ್ ಹಿರೇಮಠರನ್ನು ಸನ್ಮಾನಿಸಿದ - ಬಿ. ಟಿ.ಚಂದ್ರಶೇಖರ್  B. T. Chandrashekhar felicitated Shivakumar Hiremath in the presence of Doddamma Chamundeshwari

 

ಲಕ್ಷ್ಮೇಶ್ವರ "  16 : ಮೀಸಲು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ಮುಂಬರುವ 2028ರ ಚುನಾವಣೆಯ ಹಿನ್ನೆಲೆಯಲ್ಲಿ ಸುಮಾರು-8- 10 ತಿಂಗಳಿನಿಂದ ಕ್ಷೇತ್ರದಲ್ಲಿ ಇರುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ರೈತರ ಸಮಸ್ಯೆಗಳಾದ ಜಮೀನಿಗೆ ತೆರಳುವ ರಸ್ತೆ ಗ್ರಾಮಗಳಲ್ಲಿರುವ ರಸ್ತೆ ಚರಂಡಿ ಕುಡಿಯುವ ನೀರು ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆಲಿಸುತ್ತಾ ಅವುಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ 1008 ಬಡವರ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಶಿರಹಟ್ಟಿ ಮತಕ್ಷೇತ್ರದ ಸೇವಾ ಆಕಾಂಕ್ಷಿ ಯಾದ ಬಿ.ಟಿ. ಚಂದ್ರಶೇಖರ್ ಅವರು ತಮ್ಮ ಹುಟ್ಟೂರಾದ ಚಿಕ್ಕಮಂಗಳೂರು ತಾಲೂಕಿನಲ್ಲಿ ಬರುವ ತಮ್ಮ ಗ್ರಾಮದಲ್ಲಿ ತಾವೇ ನಿರ್ಮಿಸಿರುವ ದೊಡ್ಡಮ್ಮ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಅನೀರೀಕ್ಷಿತವಾಗಿ ಭೇಟಿ ನೀಡಿದ ಶಿರಹಟ್ಟಿ ಮತಕ್ಷೇತ್ರದ ಯುವ ನಾಯಕರಾದ ಶಿವಕುಮಾರ್ ಹಿರೇಮಠ ಅವರನ್ನು ದೇವಸ್ಥಾನದ ಅರ್ಚಕರ ಮೂಲಕ ಸನ್ಮಾನಿಸಿ ಅವರನ್ನು ಗೌರವಿಸಿದರು  ಈ ಸಮಯದಲ್ಲಿ ಭೋವಿ ವಡ್ಡರ ಸಮಾಜದ ಮುಖಂಡರಾದ ಹನುಮಂತಪ್ಪ ವಡ್ಡರ ತಿರುಪತಿ ವಡ್ಡರ ತಿಮ್ಮಪ್ಪ ವಡ್ಡರ ಸಿದ್ದಣ್ಣ ವಡ್ಡರ ಸೇರಿದಂತೆ ಇನ್ನೂ ಅನೇಕರು ಇದ್ದರು