ಆಯುರ್ವೇದ ಚಿಕಿತ್ಸಾ ಪದ್ಧತಿ ಆಹಾರ ಕ್ರಮದಿಂದ ಆರೋಗ್ಯ ವೃದ್ಧಿ: ಶಾಸಕ ಓಲೇಕಾರ
ಹಾವೇರಿ: ಆಯುರ್ವೇದ ಚಿಕಿತ್ಸಾ ಪದ್ಧತಿ ಮತ್ತು ಆಹಾರ ಕ್ರಮದಿಂದ ಉತ್ತಮ ಜೀವನ ಹಾಗೂ ಆರೋಗ್ಯ ವೃದ್ಧಿಯಾಗಲಿದೆ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ನಗರದ ಶ್ರೀ ಸಿಂದಗಿ ಶಾಂತವೀರೇಶ್ವರ ಆಯುವರ್ೇದ ಮಹಾವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಆಯುವರ್ೇದ ದಿನಾಚರಣೆ(ಧನ್ವಂತರಿ ಜಯಂತಿ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ದೇಶಿಯ ಆಹಾರ ಪದ್ಧತಿ ಹಾಗೂ ಆಯುವರ್ೇದ ಚಿಕಿತ್ಸೆ ಅಳವಡಿಸಿಕೊಂಡು ಉತ್ತಮ ಆರೋಗ್ಯ ಹೊಂದುವ ಮೂಲಕ ಶತಾಯುಷಿಗಳಾಗಿದ್ದರು. ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮದುಮೇಹ, ಬಿಪಿ ಅಂತಹ ಕಾಯಿಲೆಗಳು ಸಾಮಾನ್ಯವಾಗಿವೆ. ದುಬಾರಿ ವೆಚ್ಚದ ಅಲೋಪತಿ ಸೇವೆಗಿಂತ ಕಡಿಮೆ ವೆಚ್ಚದ ಆಯುವರ್ೇದ ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಎ.ಎಸ್.ಶಿರೋಳ ಅವರು ಪ್ರಾಸ್ತಾವಿಕವಾಗಿ, ನಮ್ಮ ಹಿರಿಯು ಆಯುವರ್ೇದವನ್ನು ಬಳುವಳಿಯಾಗಿ ನೀಡಿದ್ದಾರೆ. ಪ್ರಕೃತಿಯಲ್ಲಿ ಋತುಮಾನಕ್ಕುಸಾರವಾಗಿ ಆಹಾರ ಸೇವಿಸಬೇಕು.
ಒತ್ತಡದ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳು ಬರುತ್ತವೆ. ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಆಯುವರ್ೇದಕ್ಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಕರಿಯಪ್ಪ ಮಲ್ಲಪ್ಪ ಉಂಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಬಸಪ್ಪ ಸಂಗೂರ, ಶ್ರೀ ಸಿಂದಗಿ ಶಾಂತವಿರೇಶ್ವರ ಆಯುವರ್ೇದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಎಸ್.ಎಸ್.ಅಂಗಡಿ, ಡಾ.ಸುನೀಲ ಹಿರೇಮಠ ಉಪಸ್ಥಿತರಿದ್ದರು. ಡಾ.ಜಿ.ಸಿ.ನಿಡಗುಂದಿ ನಿರೂಪಿಸಿದರು. ಡಾ. ಬಾಬಾಸಾಹೇಬ ಸ್ವಾಗತಿಸಿದರು. ಡಾ.ಸಂಗೇಶ ದೊಡ್ಡಗೌಡ್ರ ವಂದಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 