ಸಮರ್ಥನಂ ಸಂಸ್ಥೆಯ ಕಾರ್ಯವೈಖರಿಗೆ ಬಿ.ಇ.ಒ ಕಾಂಬಳೆ ಶ್ಲಾಘನೆ
Awareness workshop on Empowerment of Persons with Disabilities - Inclusive Education
ಲೋಕದರ್ಶನ ವರದಿ
ವಿಕಲಚೇತನರ ಸಬಲೀಕರಣ- ಸಮನ್ವಯ ಶಿಕ್ಷಣ ಕುರಿತು ಜಾಗೃತಿ ಕಾರ್ಯಾಗಾರ
ರಾಮದುರ್ಗ 31: ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್‌ಬಿಐಎಫ್ (ಖಃಋ) ಯೋಜನೆಯ ಅಡಿಯಲ್ಲಿ ರಾಮದುರ್ಗ ತಾಲೂಕಿನ ಶಿಕ್ಷಕರು ಮತ್ತು ಸಹಪಾಠಿಗಳಿಗಾಗಿ ವಿಶೇಷ "ವಿಕಲಚೇತನರ ಮತ್ತು ಸಮನ್ವಯ ಶಿಕ್ಷಣ ಕಾರ್ಯಾಗಾರ"ವನ್ನು ದಿ. 30ರಂದ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಬಿ.ಇ.ಒ ಎಸ್.ಆರ್. ಕಾಂಬಳೆ ಅವರಿಂದ ಶ್ಲಾಘನೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮದುರ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಃಇಓ) ಎಸ್.ಆರ್. ಕಾಂಬಳೆ ಅವರು ಸಮರ್ಥನಂ ಸಂಸ್ಥೆಯ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿ ಮಾತನಾಡಿ, "ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮರ್ಥನಂ ಸಂಸ್ಥೆಯು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅವರ ಶೈಕ್ಷಣಿಕ ಅಭಿವೃದ್ಧಿ ಮತ್ತು ಜೀವನೋಪಾಯಕ್ಕಾಗಿ ಹಮ್ಮಿಕೊಂಡಿರುವ ಯೋಜನೆಗಳು ಮಾದರಿಯಾಗಿವೆ. ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಶಿಕ್ಷಕರಿಗೆ ಇಂತಹ ಸಮನ್ವಯ ಶಿಕ್ಷಣ ತರಬೇತಿ ನೀಡುತ್ತಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮರ್ಥನಂ ಸಂಸ್ಥೆಯ ಬಹುಮುಖಿ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಶಾಖ ಮುಖ್ಯಸ್ಥರು ಅರುಣಕುಮಾರ್ ಎಂ.ಜಿ ಅವರು, "ಸಂಸ್ಥೆಯು ವಿಕಲಚೇತನರಿಗೆ ಸ್ವಾವಲಂಬಿ ಬದುಕು ನೀಡಲು ಜೀವನೋಪಾಯ (ಐತಜಟಠರಜ) ತರಬೇತಿ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ (ಖಛಿಠಚಿಢಿಠಿ), ಮತ್ತು ಅರ್ಹತೆಗೆ ತಕ್ಕಂತೆ ಉದ್ಯೋಗ (ಇಟಠಿಟಠಟಜಟಿಣ) ಅವಕಾಶಗಳನ್ನು ಒದಗಿಸುತ್ತಿದೆ. ಅಲ್ಲದೆ, ಅವರಿಗೆ ಸಹಾಯಕ ಸಾಧನಗಳನ್ನು (ಣತಜ ಆಜತಛಿ) ವಿತರಿಸಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಅಂಧರ ಕ್ರಿಕೆಟ್ (ಃಟಟಿಜ ಅಡಿಛಿಞಜಣ) ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿಕಲಚೇತನರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗುತ್ತಿದೆ" ಎಂದು ವಿವರಿಸಿದರು.
ಶಿವಕುಮಾರ್ ಎಚ್ (ಯೋಜನಾ ಸಂಯೋಜಕರು) ಅವರ ಮಾಹಿತಿ: ಎಸ್‌ಬಿಐಎಫ್ (ಖಃಋ) ಯೋಜನಾ ಸಂಯೋಜಕ ಶಿವಕುಮಾರ್ ಎಚ್ ಅವರು 2016ರ ಆರ್‌ಪಿಡಬ್ಲ್ಯೂಡಿ (ಖಕತಿಆ) ಕಾಯಿದೆಯ ಪ್ರಕಾರ ಗುರುತಿಸಲಾಗಿರುವ 21 ವಿಧದ ವಿಕಲಚೇತನಗಳ ಬಗ್ಗೆ ಶಿಕ್ಷಕರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಈ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಅವರಿಗೆ ಸೂಕ್ತ ಶೈಕ್ಷಣಿಕ ನೆರವು ನೀಡುವುದು ಈ ಕಾರ್ಯಾಗಾರದ ಮುಖ್ಯ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಬೆಳಗಾವಿ ಡಯಟ್ ಉಪನ್ಯಾಸಕ ಬಿ.ಎಫ್. ಮುನವಳ್ಳಿ, ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ನಿಜಗುಲ್ಲಿ, ದಾಸೋಹ ಅಧಿಕಾರಿ ರಾಜಶೇಖರ್ ಹಿರೇಮಠ್, ಬಿ.ಆರ್.ಸಿ ಕೋಆರ್ಡಿನೇಟರ್ ಎಸ್.ಐ. ಚಹಾಪ್ಪಗೂಲ, ಬಿ.ಆರ್.ಪಿ ಗಳಾದ ಜೆ.ಬಿ. ಲಮಾಣಿ, ಕೆ.ವೈ. ಪಾಟೀಲ್, ಐ.ಎ. ಶೇಕ್, ಮತ್ತು ಬಿ.ಐ.ಇ.ಆರ್.ಟಿ ಎ.ಎಸ್.ಎಂ ಬಡಿಗೇರ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಿವಕುಮಾರ ಹಲ್ಯಾಳಿ (ಜಿಲ್ಲಾ ಯೋಜನಾ ಸಂಯೋಜಕರು, ಸಮನ್ವಯ ಶಿಕ್ಷಣ ಎಸ್‌ಬಿಐಎಫ್), ದೀಪಾ ಇಟಿ, ಪಂಡಿತ ಬಿ, ಸತ್ಯಪ್ಪ ರಾಚಪ್ಪನವರ್, ಗೀತಾ ಸಿದ್ದುಮನಿ ಮತ್ತು ಬಸವರಾಜ ಪಾಟೀಲ (ಸಿಬ್ಬಂದಿಗಳು) ಉಪಸ್ಥಿತರಿದ್ದರು. ವಿಶೇಷ ಶಿಕ್ಷಕರು ಅನೀಲ ಶಿಂದೋಳಿ ಮತ್ತು ಶುಭಂ ಕಿತ್ತೂರ (ಎಸ್‌ಬಿಐಎಫ್) ಅವರು ಕಾರ್ಯಕ್ರಮವನ್ನು ಸಂಘಟಿಸಿದರು ಹಾಗೂ ಶಿವಕುಮಾರ ಹಲ್ಯಾಳಿ ಅವರು ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 