ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಕುರಿತು ಜಾಗೃತಿ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಕುರಿತು ಜಾಗೃತಿ ಕಾರ್ಯಕ್ರಮ Awareness program on children's rights for students

ಕೊಪ್ಪಳ 04: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ,ಪಾಲಿಟೆಕ್ನಕ್ ಕಾಲೇಜ್‌ದ ದೇಗಲ್‌ಎನ್‌.ಎಸ್‌.ಎಸ್‌. ಶಿಬಿರದ ವಿದ್ಯಾರ್ಥಿ ಮತ್ತು  ವಿದ್ಯಾರ್ಧಿನಿಯರಿಗೆ ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆಯಜಾಗೃತಿಕಾರ್ಯಕ್ರಮದಲ್ಲಿ ಶರಣಪ್ಪ ಸಿಂಗನಾಳ ಸಂಯೋಜಕರು ಮಕ್ಕಳ ಸಹಾಯವಾಣಿ-1098/112 ಜಿಲ್ಲಾ ಮಕ್ಕಳ ರಕ್ಷಣಾಘಟಕದವರು ಮುಖ್ಯಅತಿಥಿಸ್ಥಾನವನ್ನು ವಹಿಸಿ ಮಾತನಾಡಿದರು. ಮಕ್ಕಳ ರಕ್ಷಣೆಗೆಒಂದು ಹಿನ್ನೆಲೆಇದೆ.ಪ್ರಥಮಜಾಗತಿಕ ಮಹಾಯುದ್ದದಿಂದ 1914-18 ಹಾಗೂ 1939-45 ಆದ ಅನರ್ಥಗಳಿಂದಾಗಿ ಲಕ್ಷಾಂತರ ಮಕ್ಕಳು ಅನಾಥರಾದರು, ನಿರ್ವಸಿತರಾದರು, ಆಹಾರ ಮತ್ತು ಓಷಧಗಳಿಲ್ಲದೆ ಅಸುನೀಗಿದರು.ಇಂತಹ ಅನರ್ಥಗಳು ಆಗಬಾರದು ಮತ್ತು ಮಕ್ಕಳ ಕುರಿತುಜಗತ್ತಿನಎಲ್ಲ ವಯಸ್ಕರು, ಕುಟುಂಬಗಳು,ಜನಪ್ರತಿನಿಧಿಗಳು, ಸಂಸ್ಥೆಗಳು, ಸರ್ಕಾರಗಳು, ವ್ಯಾಪಾರಿ ಉದ್ದಿಮೆಗಳು, ನ್ಯಾಯಾಲಯಗಳು, ಮಾಧ್ಯಮಗಳು, ಎಲ್ಲರೂ ಮಕ್ಕಳ ರಕ್ಷಣೆಗೆಜವಾಬ್ದಾರಿತಯಿಂದ ನಡೆದುಕೊಳ್ಳಬೇಕು.ಮಕ್ಕಳ ಮೇಲೆ ಎಂತಹದೇ ದೌರ್ಜನ್ಯಗಳನ್ನು ಮಾಡದಂತೆ ವಿಶ್ವಮಟ್ಟದಲ್ಲಿತಡೆಯಬೇಕೆಂದು ವಿಶ್ವಸಂಸ್ಥೆ ಹುಟ್ಟಿಕೊಂಡು 1989ರ ನವೆಂಬರ್ 20ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನುಜಾರಿಗೆತಂದಿದೆ.1992ರಲ್ಲಿ ಭಾರತ ಸರ್ಕಾರವು ಈ ಒಡಂಬಡಿಕೆಗೆ ಸಹಿ ಮಾಡುವ ಮೂಲಕ ಮಕ್ಕಳ ಹಕ್ಕುಗಳಿಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ ಎಂದರು. 

ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತುರಕ್ಷಣೆ)ಕಾಯಿದೆ-2000/2015 ತಪ್ಪು ಮಾಡಿದ ಮಕ್ಕಳು, ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ. ಬಾಲ್ಯ ವಿವಾಹ ನಿಷೇಧ ಕಾಯಿದೆ-2006 ಇತ್ತಿಚೀನಕರ್ನಾಟಕತಿದ್ದುಪಡೆ ಕಾಯಿದೆ-2016 ಈ ಕಾಯಿದೆಯು ಕೇವಲ 18 ವರ್ಷದೊಳಗಿನ ಹೆಣ್ಣುಮಗುವಿಗೆ 21 ವರ್ಷದೊಳಗಿನ ಗಂಡುವಿಗೆ ವಿವಾಹವಾದಲ್ಲಿ ಹಾಗೂ ಇಬ್ಬರಲ್ಲಿಒಬ್ಬರೂಅಪ್ರಾಪ್ತರಾಗಿದ್ದರೆಅದು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುವುದು. ಲೈಂಗಿಕ ಶೋಷಣೆಗಳ ವಿರುದ್ಧ ಮಕ್ಕಳ ರಕ್ಷಣೆ ಕಾಯಿದೆ-2012 ಕಾಯಿದೆಅಡಿಯಲ್ಲಿಜೀವಾವಧಿ ಮತ್ತು ಗಲ್ಲುಶಿಕ್ಷೆಯವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬಹುದಾದಂತ ಕಲಂಗಳು ಇವೆ. ಮಕ್ಕಳ ಮತ್ತುಕಿಶೋರಕಾರ್ಮಿಕ ಪದ್ಧತಿ(ನಿಷೇಧ ಮತ್ತು ನಿಯಂತ್ರಣ)ಕಾಯಿದೆ -1986 (ತಿದ್ದುಪಡೆ 2016) 18 ವರ್ಷದೊಳಗಿನ ಮಕ್ಕಳನ್ನು ಯಾವುದೇಅಪಾಯಕಾರಿದುಡಿಮೆಗೆ ನೇಮಿಸಿಕೊಳ್ಳಬಾರದು ಮಕ್ಕಳು ಪೂರ್ಣಾವಧಿ ಶಾಲೆಗಳಲ್ಲಿ ದಾಖಲಾಗಿಕಲಿಯಬೇಕುಎನ್ನುವುದುಇದರಆಶಯಎಂದು ವಿವರಣೆ ನೀಡಿದರು. 

ಶ್ರೀದೇವಿ ಬಿ.ಜಿಲ್ಲಾ ಮಿಷನ್ ಸಂಯೋಜಕರುಜಿಲ್ಲಾ ಮಹಿಳಾ ಸಬಲಿಕರಣಘಟಕ ಹಾಗೂ ಮಹಿಳೆ ಮತ್ತು ಮಕ್ಕಳ ರಕ್ಷಣೆ ಪುನರ್ವಸಿತಿಗಾಗಿ ಇರುವಂತಹ ಸಖಿ ಒನ್ ಸ್ಟಾಫ್ ಸೆಂಟರ್ ಹಾಗೂ ಮಕ್ಕಳ ಸಹಾಯವಾಣಿ-1098 ಮತ್ತು ಮಹಿಳಾ ಸಹಾಯವಾಣಿ 181 ಪೊಲೀಸ್‌ತುರ್ತು ಸಹಾಯವಾಣಿ 112 ಹಾಗೂ ವೈಯಕ್ತಿಕ ಸ್ವಚ್ಛತೆ ವಿಚಾರಗಳ ಕುರಿತುಅರಿವು ಮೂಡಿಸಿದರು.ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ವೀರೇಶ್‌ಕುಮಾರ ಕೆ. ಮಹಿಳಾ ಘಟಕದ ಸದಸ್ಯರಾದಅನುಪಮ ಆರ್‌.ಟಿ. ನಂದಿನಿ ಬಿ.ಎಂ. ಹಾಗೂ ಎನ್‌ಎಸ್‌ಎಸ್ ಸಂಯೋಜಕರಾದ ಸುರೇಶ ಬಿ ಇವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಶಶಿಧರ ಪೂಜಾರಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.