ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಏರಿ​‍್ಡಸಿದ್ದ ಜಾಗೃತಿ ಶಿಬಿರ

 ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಏರಿ​‍್ಡಸಿದ್ದ ಜಾಗೃತಿ ಶಿಬಿರ Awareness camp organized at Dr. Prabhakar Kore Hospital and Medical Research Centre

ಲೋಕದರ್ಶನ ವರದಿ

ಬೆಳಗಾವಿ 15: ಜೀವವನ್ನು ಉಳಿಸುವ ಹಾಗೂ ಇತರರಿಗೆ ಸಹಾಯ ಮಾಡುವ ಮಾನವೀಯ ಸೇವೆಗಾಗಿ ಮುಂದೆ ಬರಬೇಕು. ಅದರಲ್ಲಿಯೂ ಮುಖ್ಯವಾಗಿ ರಕ್ತದಾನ, ಅಂಗದಾನ, ದೇಹದಾನ ಕಾರ್ಯಗಳು ಸಮಾಜದ ಸೇವೆಗಳಾಗಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಬೆಳಗಾವಿಯಲ್ಲಿ ನಾನು ನೋಡಿದ ಸ್ವಯಂಸೇವಾ ಮನೋಭಾವ ಬಹಳ. ಶಿಕ್ಷಕರ ಸಂಘದ ಸುಮಾರು 30 ಜನರು ತಮ್ಮ ಮರಣಾನಂತರ ದೇಹದಾನ ಮಾಡಲು ನೊಂದಾಯಿಸಿಕೊಂಡಿದ್ದಾರೆ. ಸ್ವಯಂಪ್ರೇರಿತ ಮನೋಭಾವ ಸಮಾಜದಲ್ಲಿ ಬೆಳೆಯಬೇಕು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.  

ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಏರಿ​‍್ಡಸಿದ್ದ ಜಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈನ್ ಸಂಸ್ಥೆಯಂತ ಸಂಘಟನೆಗಳ ಕಾರ್ಯ ಮಾನವೀಯ ಸೇವೆಯಿಂದ ಕೂಡಿದೆ.  ಸಂಘಟನೆಗಳು ಸಹಕರಿಸುತ್ತಿರುವದರಿಂದಲೇ ಸಾಕಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಸದಾ ರಕ್ತದ ಕೊರತೆ ಇರುತ್ತದೆ. ಆದರೆ ಬೆಳಗಾವಿಯಲ್ಲಿ ವಿದ್ಯಾರ್ಥಿಗಳು ತಕ್ಷಣ ರಕ್ತದಾನ ಮಾಡುತ್ತಾರೆ. ರಕ್ತದಾನವು ಮಹತ್ತರ ಜೀವ ರಕ್ಷಕ ಕಾರ್ಯವಾಗಿದೆ. ಎಸ್ ವಿ ವಿರಗಿ ಮತ್ತು ಅವರ ತಂಡದ ಶ್ರಮ ಶ್ಲಾಘನೀಯ. ಅವರ ಸಮರೆ​‍್ಣ ಅತ್ಯಂತ ಪ್ರೇರಣಾದಾಯಕವಾಗಿದೆ.  ಇದು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.