ಕನ್ನಡ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಳ್ಳಲು ಯುವ ಪೀಳಿಗೆಗೆ ಜಾಗೃತಿ ಅವಶ್ಯ : ಅಧ್ಯಕ್ಷ ನಾಗಪ್ಪ ಬೆಂತೂರ
Awareness among the younger generation is essential for Kannada literature to become further enriche
ಶಿಗ್ಗಾವಿ 30: ಕನ್ನಡಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿಗಳ ಹೋರಾಟದ ಮಧ್ಯೆ ಕನ್ನಡವನ್ನು ಮತ್ತು ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಇಂದಿನ ಯುವ ಪೀಳಿಗೆಗೆ ಮತ್ತು ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅವಶ್ಯವಾಗಿದೆ ಎಂದು ಕಸಾಪ ತಾಲೂಕಾ ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ ಹೇಳಿದರು. ತಾಲೂಕಿನ ಜಕ್ಕನಕಟ್ಟಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಘಟಕ ಶಿಗ್ಗಾವಿ ವತಿಯಿಂದ 70ನೇ ಕರ್ನಾಟಕ ರಾಜೋತ್ಸವ ಸಂಭ್ರಮ ಕಾರ್ಯಕ್ರಮ,
ಕನ್ನಡ ಜಾಗೃತಿ ಅಭಿಯಾನ ಮತ್ತು ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರುಕನ್ನಡದ ಭಾಷೆ ಮತ್ತು ನೆಲ ತನ್ನದೇಯಾದ ವೈಶಿಷ್ಟತೆಯನ್ನು ಹೊಂದಿದ್ದು, ಕನ್ನಡ ನಾಡನ್ನು ಅನೇಕ ಮಹನೀಯರ ಹೋರಾಟದ ಫಲವಾಗಿ ಇಂದು 70ನೇ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಸಂಭ್ರಮ ನಮ್ಮದಾಗಿದೆ. ಕನ್ನಡ ಕನ್ನಡ ಎಂದರೇ ಸಾಲದು ಕನ್ನಡ ಉಸಿರಾಗಬೇಕು,
ಕನ್ನಡ ನಮ್ಮ ಜೀವ, ಜೀವನವಾಗಬೇಕು, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳ ಅಧ್ಯಯನ ಮಾಡಬೇಕು ಮತ್ತು ಕವನ-ಕಥೆ ರಚನೆಗೆ ಮುಂದಾಗಬೇಕು. ಕಸಾಪ ಶಿಗ್ಗಾವಿ ಈಗಾಗಲೇ ಮಕ್ಕಳು ಬರೆದ ಕವನಗಳ ಎರಡು ಸಂಪಾದಿತ ಕವನ ಸಂಕಲನಗಳನ್ನುಲೋಕಾರರೆ್ಣಗೊಳಿಸಿದ್ದು, ಮುಂದೆಯೂ ಸಹ ಇನ್ನಷ್ಟು ಕವನ ಸಂಕಲನಗಳನ್ನು ಬಿಡುಗಡೆ ಮಾಡುವ ಸಿದ್ಧತೆ ನಡೆಸಿದೆ ಎಂದರು.
ವಿಶೇಷ ಉಪನ್ಯಾಸ ಸರ್ಕಾರಿ ಪ್ರೌಢಶಾಲೆ ಹಿರೇಮಣಕಟ್ಟಿ ಶಿಕ್ಷಕ ಪ್ರಭು ಬಂಗೇರ ಮಾತನಾಡಿ ಕನ್ನಡ, ನಾಡು, ನುಡಿ, ಚಿಂತನೆ ಕುರಿತು ಕನ್ನಡ ನಾಡಿನ ಭವ್ಯ ಪರಂಪರೆ, ಪುರಾತನತೆ, ವೈವಿಧ್ಯತೆ, ಕನ್ನಡಿಗರ ಹೃದಯ ವೈಶ್ಯಾಲ್ಯತೆ, ಭಾಷಾ ಪ್ರೌಢಮೆ, ರಾಜಮನೆತನಗಳ ಗತವೈಭವ, ಕನ್ನಡದ ಕವಿಗಳು ಬರೆದ ವಿವಿಧ ಗ್ರಂಥಗಳು ಮತ್ತು ಕವಿತೆಗಳನ್ನು ವಿವರಿಸುವ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಭಾಷಾಭಿಮಾನವನ್ನು ಹಾಗೂಇಮ್ಮಡಿಗೊಳಿಸಿದರು.ಜಕ್ಕನಕಟ್ಟಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ರಾಘವೇಂದ್ರ ಓ.ಬಿ. ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಎಚ್.ಡಿ. ಕುಂಕೂರ, ಎನ್. ಎಸ್. ಬರದೂರ, ಎಸ್. ಎಷ್ಟೇವತಿ, ಪ್ರಭು ಬಂಗೇರ, ಭಾರತಿ ಛಬ್ಬಿ, ಲಲಿತಾ ಹಿರೇಮಠ, ರಾಘವೇಂದ್ರ, ವರ್ಧಮಾನ ಛಬ್ಬಿ ಅವರಿಗೆ ಸನ್ಮಾನಿಸಲಾಯಿತು. ನಾಗರಾಜ ಲಮಾಣಿ, ವಿ.ಶಿ. ಮರಿಗೌಡರ, ಮಹಾಂತೇಶ ನಾಯ್ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ಪಾಟೀಲ, ರಮೇಶ ಅಲೂರ, ರಾಚಪ್ಪ ಉಪಾಸಿ. ಬಸವರಾಜ, ವಿದ್ಯಾ ಮುಂಡಗೋಡ, ಸುಮಾ ಕೆ. ಮೇನಿಕಾ ಕೆ, ಲತಾ ರಜಪೂತ, ಗಂಗಮ್ಮ ಸುಣಗಾರ, ರೇಣುಕಾ ಶಿವಪ್ಪನವರ ಹಾಗೂ ಶಾಲೆಯ ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 