ಮನೆಮನೆ ಗೂ ತೆರಳಿ ರಂಗೋಲಿ ಬಿಡಿಸಿ ಗ್ಯಾರಂಟಿ ಯೋಜನೆ ಕುರಿತು ಜಾಗೃತಿ
Awareness about the guarantee scheme by going door to door and drawing rangolis
ಮುದ್ದೇಬಿಹಾಳ 11: ಪಂಚ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರವು ಬಡವರ ಜೀವನ ಸುಧಾರಣೆ ಮತ್ತುಬಡವರ ಸ್ಪಂದಿಸುವ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಸಿದ್ದರಾಮಯ್ಯನವರು ಬಡವರ ಮೇಲಿನ ಕಾಳಜಿಯಿಂದ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ ಜನಪರ ಧ್ವನಿಯಾಗಿ ಆಡಳಿತ ನೀಡುತ್ತಿರುವುದು ಹೆಮ್ಮೇಯ ಸಂಗತಿ ಯಾಗಿದೆ ಎಂದು ಸರಕಾರದ ಗ್ಯಾರಂಟಿ ಯೋಜನೆಯ ಸಮೀತಿ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಹೇಳಿದರು.
ಸರಕಾರದ ಗ್ಯಾರಂಟಿ ಯೋಜನೆಯ ಸಮೀತಿಯ ಸದಸ್ಯರ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ವಿನಾಯಕ ನಗರ, ಗಣೇಶ ನಗರ, ಮಹಾಂತೇಶ ನಗರ, ಮಾರುತಿ ನಗರ, ನೇತಾಜಿ ನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿನ ಪ್ರತಿ ಮನೆಮನೆಗೆ ತೆರಳಿ ರಂಗೋಲಿ ಬೀಡಿಸಿ ಗ್ಯಾರಂಟಿ ಯೋಜನೆ ಕುರಿತು ಜನರಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆ ಕೇವಲ ಬಡವರಿಗೆ ಹಾಗೂ ದಲಿತರಿಗೆ ಸಿಮಿತವಾದದ್ದಲ್ಲ, ರಾಜ್ಯದಲ್ಲಿನ ಎಲ್ಲಾ ಸಮುದಾಯದವರಿಗಾಗಿ ರೂಪಿತವಾಗಿರುವುದೇ ಪಂಚ ಗ್ಯಾರಂಟಿ ಯೋಜನೆಯಾಗಿದ್ದು. ಪ್ರತಿ ಸಮುದಾಯದವರಿಗೂ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿದೆ ಎಂದರು.ಪಂಚ ಗ್ಯಾರಂಟಿ ಅನುಷ್ಟಾನದ ನಂತರ ಸರ್ಕಾರ ಕೊರತೆ ಇಲ್ಲದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈ ಯೋಜನೆ ಸ್ಫೂರ್ತಿಯಾಗಿದೆ ಮತ್ತು ದೇಶದಲ್ಲಿಯೇ ಕರ್ನಾಟಕದ ತಲಾ ಆದಾಯ ನಂಬರ್ ಒನ್ ಸ್ಥಾನ ಪಡೆದಿದೆ. ಐದು ವರ್ಷಗಳ ಕಾಲ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ಸರ್ಕಾರ ಕೆಲಸ ನಿರ್ವಹಿಸುತ್ತದೆ. ಎಂದಿಗೂ ಕೊಟ್ಟ ಮಾತನ್ನ ತಪ್ಪುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಸ್ಥಳಿಯ ಶಾಸಕರು ಹಾಗೂ ಕರ್ನಾಟಿಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ನಿರ್ಧೇಶನದಂತೆ ಪ್ರತಿ ತಿಂಗಳು ಒಂದೊಂದು ಪಟ್ಟಣ ಗ್ರಾಮ ಎಂಬುವಂತೆ ಜನ ಸಾಮಾನ್ಯರ ಗ್ಯಾರಂಟಿ ಸಮಸ್ಯೆ, ಶಿಕ್ಷಣ, ಆರೋಗ್ಯ ಹಾಗೂ ಇತರ ಸಮಸ್ಯೆಗಳನ್ನು ಆಲಿಸಲು ಪಂಚಾಯಿತಿ ಮಟ್ಟದಲ್ಲಿ ಜನ ಸ್ಪಂದನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟದಲ್ಲಿ ಏನಾದರೂ ಅಭಿವೃದ್ಧಿ ಕಾಣಬೇಕಾದರೇ ಬಡವರ ಬಾಳು ಹಸನಾಗಬೇಕೇಂದರೆ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರ ಮಹತ್ವವಾದದ್ದು,
ಈ ಹಿಂದೆ ಉಳುವವನಿಗೆ ಭೂಮಿ ನೀಡುವುದು, ಪಡಿತರ ವೇತನ, ವೃದ್ದಾಪ್ಯವೇತನ, ರೈತರಿಗಾಗಿ ಕರೆಂಟ್ ಸೌಲಭ್ಯ, ಅನ್ನಭಾಗ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ ಹೀಗೆ ಹತ್ತು ಹಲವು ಸೌಲಭ್ಯ ಮತ್ತು ಯೋಜನೆಗಳನ್ನು ರಾಜ್ಯ ಸರ್ಕಾರ ಕೊಡುಗೆಯಾಗಿ ನೀಡಿದೆ ಎಂದರು.ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಯಲ್ಲಿ ನಾಲ್ಕು ಗ್ಯಾರಂಟಿಗಳು ಮಹಿಳೆಯರ ಪರವಾಗಿವೆ ಸಧ್ಯ ಈ ಗ್ಯಾರಂಟಿ ಯೋಜನೆ ನಿಲ್ಲಬೇಕು ಎಂಬ ವಿರೋಧ ಪಕ್ಷದವರ ಮಾತಿಗೆ ನೀವು ಎಲ್ಲ ಮಹಿಳೆಯರು ಕಾಂಗ್ರೇಸ್ ಸರಕಾರದ ಹಾಗೂ ಯೋಜನೆಯ ಧ್ವನಿಯಾಗಬೇಕು ಎಂದರಲ್ಲದೇ. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಫಲಾನುಭವಿಗಳಿಗೆ ಇದುವರೆಗೆ 57,500 ಸಾವಿರ ಕೋಟಿ ಹಣವನ್ನು ಸರ್ಕಾರ ನೀಡಿದೆ.
ಶಕ್ತಿ ಯೋಜನೆಯ ಕೋಟ್ಯಾಂತರ ಜನ ಮಹಿಳೆಯರು ಟಿಕೆಟ್ ಪಡೆದು ಉಚಿತ ಪ್ರಯಾಣ ಮಾಡು ತ್ತಿದ್ದಾರೆ ಅನ್ನಭಾಗ್ಯ ಯೋಜನೆ, ಯುವನಿಧಿ ಗೃಹಲಷ್ಮಿ ಶಕ್ತಿ ಗೃಹಜ್ಯೋತಿ ಯೋಜನೆ ಹೀಗೇ ಈ ಪಂಚ ಗ್ಯಾರಂಟಿ ಯೋಜನೆ ಬಡ ಜನರ ಬದುಕಿಗೆ ಆಶ್ರಯವಾಗಿದೆ ಎಂದರು.ಈ ವೇಳೆ ಲಕ್ಮಣ್ಣ ಲಮಾಣಿ, ಬುಡ್ಡೇಸಾ ಚಪ್ಪರಬಂದ, ಸಂಗಮೇಶ ಚಲವಾದಿ, ಸುಜಾತಾ ಶಿಂಧೆ, ಭಾಗ್ಯಾಶ್ರೀ ಪಾಟೀಲ, ಲಲೀತಾ ಇಲಕಲ್ಲ,ಸಂಗಣ್ಣ ಮೇಲಿನಮನಿ, ಪ್ರೀತಿ ದೇಗಿನಾಳ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 