ಲೋಕದರ್ಶನವರದಿ
ಬ್ಯಾಡಗಿ22: ಪಟ್ಟಣದ ಸ್ವಚ್ಚತೆ ವಿಚಾರದಲ್ಲಿ ನಿಮ್ಮ ಸಲಹೆಗಳನ್ನು ಪುರಸಭೆಯು ಮುಕ್ತವಾಗಿ ಸ್ವಾಗತಿಸುತ್ತದೆ, ಹೀಗಾಗಿ ನಿಮ್ಮಗಳ ಹೊಣೆಗಾರಿಕೆ ಶೇ.100 ರಷ್ಟು ಕಸ ನಿರ್ವಹಣೆ ಮತ್ತು ವಿಲೇವಾರಿಗಳ ಮೇಲಿರಲಿ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹಸಿಕಸ ಮತ್ತು ಒಣಕಸವನ್ನು ಮನೆಯಲ್ಲಿಯೇ ಬೇರ್ಪಡಿಸುವುದರಿಂದ ಪುರಸಭೆಗೆ ಇನ್ನಷ್ಟು ಆದಾಯ ಹೆಚ್ಚಲಿದೆ ಎಂದು ಪಟ್ಟಣದ ಎಸ್ಜೆಜೆಎಂ ಪ್ರೌಢಶಾಲೆಯ ಆವರಣದಲ್ಲಿ ಸ್ವಚ್ಚ ಭಾರತ ಅಭಿಯಾನದಡಿ ಹಸಿಕಸ ಮತ್ತು ಒಣಕಸ ಬೇರ್ಪಡಿಸುವ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಅಭಿಪ್ರಾಯ ವ್ಯಕ್ತಪಡಿಸಿದರು.
ಬಹುತೇಕ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಕಸ ವಿಲೇವಾರಿ ಮತ್ತು ಅದರ ನಿರ್ವಹಣೆ ಒಂದು ದೊಡ್ಡ ತಲೇ ನೋವಾಗಿ ಪರಿಣಮಿಸಿದೆ, ಇದಕ್ಕಾಗಿ ಹತ್ತು ಹಲವು ವಿಧಾನಗಳನ್ನು ಅಳವಡಿಸಿದರೂ ನಿಯಂತ್ರಣಕ್ಕೆ ಬರದಂತಾಗಿದ್ದು ಸೂಕ್ತ ನಿರ್ವಹಣೆ ಬಗ್ಗೆ ಯಾರ ಬಳಿಯಾದರೂ ತಾಂತ್ರಿಕ ಮಾಹಿತಿಗಳಿದ್ದರೇ ಅದನ್ನು ಅಳವಡಿಸಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದರು.
ಕಸ ಚೆಲ್ಲುವವರ ವಿರುದ್ಧ ಕ್ರಮ: ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುವವರ ಬಗ್ಗೆ ಹದ್ದಿನ ಕಣ್ಣುಗಳನ್ನಿಟ್ಟಿದ್ದು, ಅದಕ್ಕಾಗಿ ಪಟ್ಟಣದೆಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಕಸವನ್ನು ಚೆಲ್ಲಿ ತಪ್ಪು ಮಾಡುವವರ ವಿರುದ್ಧ ಕ್ರಮ ಅನಿವಾರ್ಯವಾಗಿದ್ದು, ಸಾರ್ವಜನಿಕರು ಇದಕ್ಕೆ ಅವಕಾಶ ಕೊಡದೇ ಪಟ್ಟಣವನ್ನು ಸ್ಚಚ್ಚವಾಗಿಡುವಲ್ಲಿ ಪುರಸಭೆಯ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.
ಪ್ರತಿದಿನ 9 ಟನ್: ಪುರಸಭೆಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 9 ಟನ್ಗಳಷ್ಟು ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ, ಇದಕ್ಕಾಗಿ ನಮ್ಮೆಲ್ಲಾ ಸಿಬ್ಬಂದಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ, ಆದರೆ ಅದರಲ್ಲಿನ ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸುವುದು ತಲೆನೋವಾಗಿ ಪರಿಣಮಿಸುತ್ತಿದ್ದು ಸಾರ್ವಜನಿಕರಿಗೆ ತಿಳಿ ಹೇಳಿದರೂ ಪದೇಪದೇ ತಪ್ಪು ಮಾಡುತ್ತಿದ್ದಾರೆ ಎಂದರು.
ಹಸಿಕಸ ಲಾಭದಾಯಕ: ಆರೋಗ್ಯಾಧಿಕಾರಿ ರವಿಕೀತರ್ಿ ಮಾತನಾಡಿ, ಪಟ್ಟಣದ ಪ್ರತಿಯೊಂದು ಮನೆಗೂ ಹಸಕಸ ಮತ್ತು ಒಣಕಸ ಬೇರ್ಪಡಿಸುವದಕ್ಕಾಗಿಯೇ ಎರಡೆರಡು ಡಸ್ಟಬಿನ್ಗಳನ್ನು ನೀಡಲಾಗಿದೆ, ಆದರೆ ಪುರಸಭೆಯು ಯಾವ ಉದ್ದೇಶಕ್ಕೆ ಕೊಟ್ಟಿದೆಯೋ ಅದನ್ನು ಸಮರ್ಪಕವಾಗಿ ಸಾರ್ವಜನಿಕರು ನಿಭಾಯಿಸುತ್ತಿಲ್ಲ, ಹೆಚ್ಚಿದ ತರಕಾರಿ ಇನ್ನಿತರ ಹಸಿಕಸದಿಂದ ಘನತ್ಯಾಜ್ಯ ವಿಲೇವಾರಿ ಜಾಗದಲ್ಲಿ ನಿಮರ್ಿಸಿರುವ ಎರೆಹುಳುವಿನ ತೊಟ್ಟಿಗೆ ಹಾಕಲಾಗುವುದು ಇದರಿಂದ ಬರುವ ಗೊಬ್ಬರವು ಪುರಸಭೆಗೆ ಲಾಭದಾಯಕವಾಗಲಿದ್ದು ಅಪ್ರತ್ಯಕ್ಷವಾಗಿ ಸಾರ್ವಜನಿಕರಿಗೂ ಇದರ ಲಾಭ ತಲುಪಲಿದೆ ಎಂದರು.
ಇದಕ್ಕೂ ಮುನ್ನ ಶಾಲಾ ಮಕ್ಕಳೊಂದಿಗೆ ಪಟ್ಟಣದ ವಿವಿಧೆಡೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು, ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ದುಗರ್ೇಶ ಗೋಣೆಮ್ಮನವರ, ಶಿಕ್ಷಕರಾದ ಎಸ್.ಬಿ.ಇಮ್ಮಡಿ,ವಿದ್ಯಾಶೆಟ್ಟಿ, ಬಡಿಗೇರ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.