ರಾಣೇಬೆನ್ನೂರಲ್ಲಿ ಪ್ರಶಸ್ತಿ ಪುರಸ್ಕೃತ ಅಂಗೂರರ ಛಾಯಾಚಿತ್ರ ಪ್ರದರ್ಶನ
Award-winning photography exhibition of Angoor in Ranebennur
ರಾಣೇಬೆನ್ನೂರ 27: ಸ್ಥಳೀಯ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರಲ್ಲಿ 89ನೇಯ ವರ್ಷದ ನಾಡಹಬ್ಬದ ಅಂಗವಾಗಿ ಹಾವೇರಿಯ ಪತ್ರಕರ್ತ, ಸಾಹಿತಿ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ ಅಂಗೂರ ಅವರ ವನ್ಯಜೀವಿ-ಪ್ರಕೃತಿ ಛಾಯಾಚಿತ್ರ ಪ್ರದರ್ಶನವನ್ನು ವಿದ್ಯುಕ್ತವಾಗಿ ಆಯೋಜಿಸಲಾಗಿದೆ.
ಪರಿಸರ, ವನ್ಯಜೀವಿ, ಜಾತ್ರೆ, ರಥೋತ್ಸವ, ಗೋಲಿಬಾರ, ವ್ಯಕ್ತಿಗಳ, ಸಮಾರಂಭಗಳು, ಕೃಷಿ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವೈವಿಧ್ಯಮಯ, ಸುಂದರ ಮತ್ತು ವರ್ಣಮಯ ಚಿತ್ರಗಳು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಅ. 1ರವರೆಗೆ ಸಂಜೆ6.30ರಿಂದ ಈ ಛಾಯಾಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಛಾಯಾಚಿತ್ರ ಪ್ರದರ್ಶನದಲ್ಲಿ ಮಾಲತೇಶ ಅಂಗೂರ ಸೆರೆಹಿಡಿದ ಬರೋಬರಿ 100 ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಒಂದಕ್ಕಿಂತ ಒಂದು ಛಾಯಾಚಿತ್ರಗಳು ಆಕರ್ಷಣೀಯ ಹಾಗೂ ಅರ್ಥಪೂರ್ಣವಾಗಿವೆ ಎಂದು ಪ್ರದರ್ಶನಕ್ಕೆ ಸಹಕರಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಕಾರ್ಯದರ್ಶಿ ಕೆ.ಎನ್ ಷಣ್ಮುಖ, ಸಹ ಕಾರ್ಯದರ್ಶಿ ಶ್ರೀನಿವಾಸ ಏಕಬೋಟೆ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ನಿವೃತ್ತ ಶಿಕ್ಷಕ ಎಸ್. ಸಿ ಷಡಕ್ಷರಿಮಠ ಮತ್ತಿತರರು ಅಭಿನಂದಿಸಿ ಅಭಿಪ್ರಾಯಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 