ಪ್ರಶಸ್ತಿ ಪುರಸ್ಕೃತ ಡಾ, ಮುಲ್ಲಾ ದಂಪತಿಗಳಿಗೆ ಸಾಹಿತ್ಯೋತ್ಸವ ಸಮಿತಿಯಿಂದ ವಿಶೇಷ ಸನ್ಮಾನ

ಪ್ರಶಸ್ತಿ ಪುರಸ್ಕೃತ ಡಾ, ಮುಲ್ಲಾ ದಂಪತಿಗಳಿಗೆ ಸಾಹಿತ್ಯೋತ್ಸವ ಸಮಿತಿಯಿಂದ ವಿಶೇಷ ಸನ್ಮಾನ  Award-winning Dr.Mulla couple honored by the Literary Festival Committee

ಕೊಪ್ಪಳ 04: ಮುಗ್ಧ ನಗುವಿನ ಹಸನ್ಮುಖಿ ವೈದ್ಯ ನಿವೃತ್ತ ಡಿ ಎಚ್ ಓ ಡಾ, ಟಿ ಹೆಚ್ ಮುಲ್ಲಾ ಮತ್ತು ಅವರ ಪತ್ನಿ ಶಾಕಿರಾ ಬೇಗಮ್ ಮುಲ್ಲಾ ರವರಿಗೆ ಅವರ ನಿವಾಸದಲ್ಲಿ ರಾಜ್ಯೋತ್ಸವದ ದಿನದಂದು ವಿಶೇಷ ಸನ್ಮಾನ ಮಾಡಿ ಸತ್ಕರಿಸಲಾಯಿತು.

ಕೊಪ್ಪಳದಲ್ಲಿ ಇತ್ತೀಚಿಗೆ ಜರುಗಿದ ದಿ, ಕವಿ ಗವಿಸಿದ್ದ, ಎನ್, ಬಳ್ಳಾರಿ ಯವರ ಸ್ಮರಣಾರ್ಥ ವಾಗಿ ಜರುಗಿದ ಗವಿಸಿದ್ ಎನ್ ಬಳ್ಳಾರಿ ಅವರ ಸಾಹಿತ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಅಂಡಮಾನ್ ಪ್ರವಾಸದಲ್ಲಿದ್ದ ಡಾ, ಟಿ, ಎಚ್  ಮುಲ್ಲಾ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾದ ಕಾರಣಕ್ಕಾಗಿ ಕಾರ್ಯ ಕ್ರಮ ಸಂಘಟಕರ ತಂಡ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಶುಭ ಕೋರಿದರು,ಡಾ, ಟಿ,ಎಚ್, ಮುಲ್ಲಾ ರವರ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ  ಪ್ರತಿಷ್ಠಿತ ಹೆಲ್ತ್‌ ಕೇರ್ ಎಕ್ಸ್‌ ಲೆನ್ಸ್‌ ಅವಾರ್ಡ್‌ ಲಭಿಸಿರುವ ಪ್ರಯುಕ್ತ ಅವರನ್ನು ಕೊಪ್ಪಳದ ಹಿರಿಯ ಸಾಹಿತಿ ದಿ, ಗವಿಸಿದ್ದ ಎನ್ ಬಳ್ಳಾರಿ ಅವರ ಸಾಹಿತ್ಯೋತ್ಸವ ಸಮಾರಂಭದ ಸಂಘಟಕರ ಸಮಿತಿ ವತಿಯಿಂದ ಡಾ. ಟಿ .ಎಚ್‌. ಮುಲ್ಲಾ ಮತ್ತು ಅವರ ಪತ್ನಿ ಶಾಕೀರಾ ಬೇಗಮ್ ಮುಲ್ಲಾ ರವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು