ಕು.ಅವನಿ ಮಹೀಂದ್ರಕರ್ ಪ್ರಾದೇಶಿಕ ವಿಜೇತೆ
Avani Mahindrakar is the regional winner
ಧಾರವಾ 27: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ಕು. ಅವನಿ ಮಹೀಂದ್ರಕರ್ 2024 ರ ನವೆಂಬರ್ ಇನ್‌ಟ್ಯಾಕ್ ನಡೆಸಿದ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ ಪ್ರಾದೇಶಿಕ ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಇದು ದೆಹಲಿಯ ಇನ್‌ಟ್ಯಾಕ್ ಆಶ್ರಯದಲ್ಲಿ ನಡೆದ ಅಖಿಲ ಭಾರತ ಪೋಸ್ಟರ್ ತಯಾರಿಕೆ ಸ್ಪರ್ಧೆಯಾಗಿದ್ದು, ವಿದ್ಯಾರ್ಥಿಗಳು ನಮ್ಮ ಪ್ರದೇಶದ ಯಾವುದೇ ಅಮೂರ್ತ ಸಂಸ್ಕೃತಿ ಪರಂಪರೆಯನ್ನು ಬರೆಯುವ ಘೋಷಣೆಯೊಂದಿಗೆ ಚಿತ್ರಿಸಬೇಕೆಂದು ನೀರೀಕ್ಷಿಸಲಾಗಿತ್ತು. ಕುಮಾರಿ. ಅವನಿ ಮಹೀಂದ್ರಕರ್ ನಮ್ಮ ಜೆ.ಎಸ್.ಎಸ್ ಕ್ಯಾಂಪಸ್‌ನ ಭಾಗವಾಗಿರುವ ಶ್ರೀ ಮೈಲಾರ ಲಿಂಗ ಸ್ವಾಮಿಯ ಕಥೆಯನ್ನು ಚಿತ್ರಿಸುವ ಮೂಲಕ ಸ್ಪರ್ಧೆಯನ್ನು ಗೆದ್ದಿದ್ದಾರೆ.
ಇನ್‌ಟ್ಯಾಕ್ ಧಾರವಾಡ ಸಂಚಾಲಕ ಕರ್ನಲ್ ಮೋಹನ್ ಮಠ ಮತ್ತು ಇನ್‌ಟ್ಯಾಕ್ ಧಾರವಾಡದ ಇತರ ಸದಸ್ಯರು ಅವನಿ ಮತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಇತರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯೆ ರೇಣು ಪಾಟೀಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 