ಸಮರ್ಥ ನ್ಯೂರೋ ಮತ್ತು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯ: ಡಾ. ರವೀಂದ್ರ ಪಾಟೀಲ..!
Available at Samartha Neuro and Superspeciality Hospital: Dr. Ravindra Patil..
ಸುರಕ್ಷಿತ, ನೋವುರಹಿತ ಮೆದುಳು ಶಸ್ತ್ರಚಿಕಿತ್ಸೆ ಮಿರಜನ
ಕಾಗವಾಡ 25: ಆಧುನಿಕ ಪದ್ಧತಿಯಿಂದ ಮೂಗಿನ ಮುಖಾಂತರ ಎಂಡೋಸ್ಕೋಪಿ ನೊಜಲ್ ಸರ್ಜರಿಯಿಂದ ತೆಲೆಯನ್ನು ತೆರೆಯದೇ ಮೆದುಳಿನ ಟ್ಯೂಮರ್ ಶಸ್ತ್ರಚಿಕಿತ್ಸೆಯು ಈಗ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಮೆದುಳು ಟ್ಯೂಮರ್ ಸಂಬಂಧಿಸಿದ ರೋಗಿಗಳಿಗೆ ಇದು ವರದಾನವಾಗಿದೆ ಎಂದು ಮಿರಜ ಪಟ್ಟಣದ
ಸಮರ್ಥ ನ್ಯೂರೋ ಮತ್ತು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರವೀಂದ್ರ ಪಾಟೀಲ ತಿಳಿಸಿದ್ದಾರೆ.
ಅವರು, ಗುರುವಾರ ದಿ. 25 ರಂದು ಸಮರ್ಥ ಆಸ್ಪತ್ರೆಯಲ್ಲಿ ಈ ತಂತ್ರಜ್ಞಾನದ ಕುರಿತು ಮಾಧ್ಯಮದವರೊಂದಿಗೆ ಮಾಹಿತಿ ನೀಡುತ್ತ ಮಾತನಾಡುತ್ತಿದ್ದರು. ಪಿಟ್ಯುಟರಿ ಟ್ಯೂಮರ್ ಇದು ಮೆದುಳಿನ ಬುಡದಲ್ಲಿರುವ ಒಂದು ಪ್ರಮುಖ ಗ್ರಂಥಿಯಲ್ಲಿ ಬೆಳೆಯುವ ಟ್ಯೂಮರ್ ಆಗಿದ್ದು, ಇದರಿಂದ ತಲೆನೋವು, ದೃಷ್ಟಿಹೀನತೆ ಮತ್ತು ಹಾರ್ಮೋನುಗಳ ಅಸಮತೋಲನದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮೊದಲೆಲ್ಲ ಈ ಟ್ಯೂಮರ್‌ಗೆ ಚಿಕಿತ್ಸೆ ನೀಡಲು ತಲೆಯನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ತೆರೆಯಬೇಕಾಗಿತ್ತು. ಮತ್ತು ಇದು ರೋಗಿಗೆ ಹೆಚ್ಚಿನ ನೋವು, ಹೆಚ್ಚಿನ ಸಮಯ ಮತ್ತು ದೀರ್ಘ ಚೇತರಿಕೆಯ ಅವಧಿ ತೆಗೆದುಕೊಳ್ಳುತ್ತಿತ್ತು. ಈಗ ಆಧುನಿಕ ಎಂಡೋಸ್ಕೋಪಿಕ್ ನೊಜಲ್ ಸರ್ಜರಿಯಿಂದ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ಮೂಗಿನ ಮೂಲಕ ನಡೆಸಲಾಗುತ್ತದೆ. ಇದರಿಂದ ತಲೆ ತೆರೆಯುವ ಅಗತ್ಯ ಮತ್ತು ತೆಲೆಗೆ ಹೊಲಿಗೆಗಳ ಅಗತ್ಯವಿರುವುದಿಲ್ಲ. ಮತ್ತು ರೋಗಿಯಲ್ಲಿ
ರಕ್ತಸ್ರಾವ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಿ, ಬೇಗನೆ ಚೇತರಿಸಿಕೊಂಡು ಮನೆಗೆ ಮರಳುವಂತಾಗುದತ್ತದೆ.
ಇದೇ ತಂತ್ರಜ್ಞಾನವನ್ನು ಸಿಎಸ್‌ಎಫ್ ರೈನೋರಿಯಾ ಚಿಕಿತ್ಸೆಗೂ ಬಳಸಲಾಗುತ್ತದೆ. ಅಲ್ಲಿ ಮೂಗಿನ ಮೂಲಕ ಮೆದುಳಿನ ದ್ರವ ಸೋರಿಕೆಯಾಗುವ ಸಮಸ್ಯೆಯನ್ನು ಸುರಕ್ಷಿತವಾಗಿ ಸರಿಪಡಿಸಲಾಗುತ್ತದೆ. ಅನುಭವಿ ನ್ಯೂರೋ ಸರ್ಜನ್, ನುರಿತ ವೈದ್ಯಕೀಯ ತಂಡ ಮತ್ತು ಅತ್ಯಾಧುನಿಕ ಉಪಕರಣಗಳೊಂದಿಗೆ, ಚಿಕಿತ್ಸೆಯು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ.
ಮೆದುಳಿನ ನೋವಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದ್ದು, ನಮ್ಮ ಆಸ್ಪತ್ರೆಯಲ್ಲಿ ಮೆದುಳಿಗೆ ಸಂಬಂಧಿಸಿದ ಎಲ್ಲ ರೋಗಗಳಿಗೆ ಆಧುನಿಕ ಪದ್ಧತಿಯ ಉಪಚಾರ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಮರ್ಥ್ ನ್ಯೂರೋ ಮತ್ತು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಮಿರಜ್ ಮೊ.ನಂ. 7378612600 ಗೆ ಸಂಪರ್ಕಿಸಿ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 