ಆಸ್ಟ್ರೇಲಿಯಾ ಓಪನ್: ಮೊದಲ ಸುತ್ತಿನಲ್ಲೇ ಸೋತ ಮರಿಯಾ ಶರಪೋವಾ
ಮೆಲ್ಬೋರ್ನ್, ಜ 21 : ಮಾಜಿ ಚಾಂಪಿಯನ್ ಮರಿಯಾ ಶರಪೋವಾ ಅವರು ಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ಸ್ ಮೊದಲನೇ ಸುತ್ತಿನಲ್ಲಿಯೇ ವೈಲ್ಡ್ ಕಾರ್ಡ್ ಆಟಗಾರ್ತಿ ಕ್ರೋವೇಷ್ಯಾದ ಡೊನ್ನಾ ವೆಕ್ಚಿಚ್ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಮಂಗಳವಾರ ನಡೆದ ಮೊದಲನೇ ಸುತ್ತಿನ ಹಣಾಹಣಿಯಲ್ಲಿ ಶರಪೋವಾ ಅವರು 3-6, 4-6 ಅಂತರದಲ್ಲಿ ನೇರ ಸೆಟ್ ಗಳಿಂದ ವೆಕಿಚ್ ವಿರುದ್ಧ ಸುಲಭವಾಗಿ ಸೋಲು ಒಪ್ಪಿಕೊಂಡರು. ಗೆಲುವಿನೊಂದಿಗೆ ಕ್ರೋವೇಷ್ಯಾ ಆಟಗಾರ್ತಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ನ ಅಲಿಝ್ ಕಾರ್ನೆಟ್ ವಿರುದ್ಧ ಸೆಣಸಲಿದ್ದಾರೆ.
ಮರಿಯಾ ಶರಪೋವಾ ಅವರು ಮೊದಲನೇ ಸುತ್ತಿನಲ್ಲಿ ಈ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಇವರು 2008ರಲ್ಲಿ ವೈಲ್ಡ್ ಕಾರ್ಡ್ ಪಡೆದು ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶ ಮಾಡಿದ್ದರು. ಅದೇ ವರ್ಷ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ವೆಕಿಚ್, " ಇಂದಿನ ಗೆಲುವು ಅತ್ಯಂತ ಹೆಚ್ಚು ಸಂತಸ ತಂದಿದೆ. ದೊಡ್ಡ ವೇದಕೆಗಳಲ್ಲಿ ಆಡುವುದನ್ನೂ ನಿಜಕ್ಕೂ ಆಹ್ಲಾದಿಸುತ್ತೇನೆ. ಇದು ಕೂಡ ಅತಿ ದೊಡ್ಡ ಟೂರ್ನಿ. ನನ್ನ ಅವಧಿಯಲ್ಲಿ ಖುಷಿಯಾಗಿ ಆಡಿದ್ದೇನೆ,'' ಎಂದು ಸಂತಸ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 