ಪುರಾಣ ಆಲಿಕೆಯಿಂದ ಸಂಸ್ಕಾರ ಪ್ರಾಪ್ತಿ: ಪ್ರಭುಸಾರಂಗ ಶ್ರೀ
Attaining Sanskar by Listening to Myths: Prabhusaranga Sri
ತಾಳಿಕೋಟೆ 29: ನಮ್ಮ ನಾಡಿನಲ್ಲಿ ಜನರು ಮೊದಲು ಸಂಸ್ಕಾರವಂತರಾಗಬೇಕು, ಸಂಸ್ಕಾರ ಸಿಗುವುದು ಪುರಾಣ ಪ್ರವಚನದಲ್ಲಿ ಪಾಲ್ಗೊಂಡಾಗ ಮಾತ್ರ ಎಲ್ಲರಲ್ಲಿ ಸಂಸ್ಕಾರ ಸಂಸ್ಕೃತಿ ಸಿಗುತ್ತದೆ ಶ್ರೀ ಜಗದ್ಗುರು ಪಕೀರೇಶ್ವರ ಈ ನಾಡಿನ ಎಲ್ಲಾ ಜನರಲ್ಲಿ ಭಾವೈಕ್ಯತೆಯ ಮೂಡಿಸುವದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಈ ಗುರುವಿನ ಶಿಷ್ಯ ಬಂಡೆಪ್ಪ ಸ್ವಾಮಿ ಇವರು ಕೂಡ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಅವರ ಶಕ್ತಿ ತಪಸ್ಸು ಎಲ್ಲರ ಮನೆ ಮಾತಾಗಿದೆ ಎಂದು ಎಂದು ಸಿಂದಗಿ ಸಾರಂಗಮಠದ ಪ್ರಭುಸಾರಂಗ ದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಾಲ್ಲೂಕಿನ ತಾಲ್ಲೂಕಿನ ಬಂಡೆಪ್ಪನಳ್ಳಿ ಗ್ರಾಮದಲ್ಲಿ ಮಹಾತಪಸ್ವಿ ಬಂಡೆಪ್ಪಸ್ವಾಮಿ ಜಾತ್ರಾ ಮಹೋತ್ಸವದಂಗವಾಗಿ ಶಿರಹಟ್ಟಿ ಜಗದ್ಗುರು ಪಕೀರೇಶ್ವರ ಮಹಾಪುರಾಣದ ಏಳನೆ ದಿನದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಪುರಾಣ ಪ್ರಚನಕಾರರಾದ ಮಹಾಂತ ದೇವರು, ವಿಭೂತಿಮಠ ತಾಳಿಕೋಟಿ ಹಾಗೂ ಕುಮಾರಸ್ವಾಮಿ ಜಾಹಗಿರದಾರ, ವಿಶ್ವನಾಥ ಜಾಹಗಿರದಾರ, ಸಂಗೀತ ಸೇವೆ, ಬಸವರಾಜ ಬಂಟನೂರ, ಈಶ್ವರ ಬಡಿಗೇರ ಉಪಸ್ಥಿತರಿದ್ದರು ಹಾಗೂ ಬಂಡೆಪ್ಪ ಸ್ವಾಮಿ ಮಠದ ಎಲ್ಲಾ ಬಂಡೆಪ್ಪನಳ್ಳಿ ಸಾಲವಾಡಗಿ ಸಮಸ್ತ ಸದ್ಭಕ್ತರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಶ್ರೀ ಜಗದಿಶ ನಾಗಯ್ಯ ಸಾಲಿಮಠ ಇವರಿಗೆ ಸನ್ಮಾನಿಸಲಾಯಿತು
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 