ನೈಜರ್ ನಲ್ಲಿ ಸೇನಾ ಶಿಬಿರದ ಮೇಲೆ ದಾಳಿ: 25 ಸೈನಿಕರು ಸಾವು

ನಿಯಾಮೆ, ಜ 10, ನೈಜರ್ ನ ಪಶ್ಚಿಮದಲ್ಲಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಟ 25 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ.  ಮಾಲಿ ಗಡಿಯಲ್ಲಿರುವ ಚಿನಾಗೊಡ್ರಾರ್ ಪಟ್ಟಣದ ಸೇನಾ ಶಿಬಿರದ ಮೇಲೆ ದಾಳಿ ನಡೆದಿದೆ. ದಾಳಿಗೆ ಯಾವುದೇ ಸಂಘಟನೆ ಹೊಣೆಯನ್ನು ಹೊತ್ತಿಲ್ಲ. ಈ ವೇಳೆ ನಡೆದ ಘರ್ಷಣೆಗಳಲ್ಲಿ 60 ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಮಧ್ಯೆ, ನೈಜೀರಿಯಾದ ಹಳ್ಳಿಯೊಂದರ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.  ಬಂದೂಕುಧಾರಿಯೊಬ್ಬ ನಿವಾಸಿಗಳ ಮೇಲೆ ಗುರುವಾರ ಭಯೋತ್ಪಾದಕ ದಾಳಿ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.      ನೈಜೀರಿಯಾದ ಮಧ್ಯ ಭಾಗದಲ್ಲಿನ ಪ್ರಸ್ಥಭೂಮಿಯ ಮಾಂಗು ಸ್ಥಳೀಯ ಸರ್ಕಾರಿ ಪ್ರದೇಶದ ಕೊಂಬುನ್ ಜಿಲ್ಲೆಯ ಕುಲ್ಬೆನ್ ಹಳ್ಳಿಯಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಶಂಕಿತರನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸ್ ವಕ್ತಾರ ಟೆರ್ನಾ ತ್ಯೋಪೆವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.      ಸಂಜೆ ನಡೆದ ಈ ದಾಳಿಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು  ದಾಳಿಕೋರರ ಉದ್ದೇಶ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.      ಶಂಕಿತ ದನಗಾಹಿಗಳು ಹಳ್ಳಿಗೆ ಪ್ರವೇಶಿಸಿ, ನಿವಾಸಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯ ಸಾಕ್ಷಿಗಳು ಹೇಳಿದರು.