ಆಪ್ಘನ್ ಸೇನಾ ಶಿಬಿರದ ಮೇಲೆ ದಾಳಿ: 10 ಯೋಧರ ಸಾವು

 ಕಾಬೂಲ್‍, ಡಿ 24,  ತಾಲಿಬಾನ್‍ ಸಂಘಟನೆಯ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಆಫ್ಘಾನಿಸ್ತಾನದ ಉತ್ತರ ಬಲ್ಕ್ ಪ್ರಾಂತದ 7 ಯೋಧರು ಹಾಗೂ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.  ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವು ಮಂಗಳವಾರ ಈ ಭಯೋತ್ಪಾದನಾ ದಾಳಿಯ ಕುರಿತು ಮಾಹಿತಿ ನೀಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಹತ್ತಿಕ್ಕುವ ಸಂಬಂಧ ಅಮೆರಿಕ ರಕ್ಷಣಾ ಪಡೆಗಳು ಸಹಕರಿಸುತ್ತಿವೆ.  ಆದಾಗ್ಯೂ ಭಯೋತ್ಪಾದಕರ ಅಟ್ಟಹಾಸವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವಾಗಿಲ್ಲ.