ಸಾ.ರೆ.ಪಾಟೀಲ ಸಹಕಾರಿ ಬ್ಯಾಂಕಿನ 19. ನೇ ಶಾಖೆಯ ಪ್ರಾರಂಭೋತ್ಸವ

ಸಾ.ರೆ.ಪಾಟೀಲ ಸಹಕಾರಿ ಬ್ಯಾಂಕಿನ 19. ನೇ ಶಾಖೆಯ ಪ್ರಾರಂಭೋತ್ಸವ Athani News: 10.07

ಅಥಣಿ 10 : ಮಹಾರಾಷ್ಟ್ರದ ಜಯಸಿಂಗಪುರದ ಡಾ.ಅಪ್ಪಸಾಹೇಬ ಉರ್ಫ ಸಾ.ರೆ.ಪಾಟೀಲ ಉದಗಾಂವ ಸಹಕಾರಿ ಬ್ಯಾಂಕಿನ 19 ನೇ ಅಥಣಿ ಶಾಖೆಯ ಉದ್ಘಾಟನಾ ಸಮಾರಂಭ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ದೇಶದಲ್ಲಿ ಶತಮಾನಕ್ಕೂ ಹೆಚ್ಚು ಕಾಲದಿಂದ ಸಹಕಾರಿ ಬ್ಯಾಂಕುಗಳು, ಸಂಘ,ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅಥಣಿ ಸಮೀಪದ ಜಯಸಿಂಗಪುರದ ಈ ಸಹಕಾರಿ ಬ್ಯಾಂಕು ಅನೇಕ ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಅಥಣಿಯಲ್ಲಿ ಈ ಬ್ಯಾಂಕಿನ19 ನೇ ಶಾಖೆ ಪ್ರಾರಂಭಗೊಂಡಿದ್ದು, ಎಲ್ಲರೂ ಠೇವಣಿ ಇಡುವ ಮತ್ತು ಅವಶ್ಯಕತೆಗೆ ತಕ್ಕಂತೆ ಸಾಲ ಸೌಲಭ್ಯ ಪಡೆಯುವ ಮೂಲಕ ಆರ್ಥಿಕ ವ್ಯವಹಾರ ಪ್ರಾರಂಭಿಸಿ ಎಂದರು.  ಬ್ಯಾಂಕಿನ ಅಧ್ಯಕ್ಷ ಮಹೇಂದ್ರ  ಬಾಗೆ ಮಾತನಾಡಿ, ನಮ್ಮ ಸಹಕಾರಿ ಬ್ಯಾಂಕು ತನ್ನ  ಗ್ರಾಹಕರಿಗೆ  ಠೇವಣಿ ಮೇಲೆ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ಮತ್ತು ಸಾಲದ ಮೇಲೂ ರಾಷ್ಟ್ರೀಕೃತ ಬ್ಯಾಂಕಿನಂತೆಯೇ ಬಡ್ಡಿ ಆಕರಿಸಲಾಗುತ್ತಿದ್ದು, ಇದರ ಲಾಭವನ್ನು ಅಥಣಿಯ ಗ್ರಾಹಕರೂ ಪಡೆದುಕೊಳ್ಳಬೇಕು ಎಂದ ಅವರು ಕೆಲವೇ ದಿನಗಳಲ್ಲಿಯೇ ಕಾಗವಾಡದಲ್ಲಿ 20 ನೇ ಶಾಖೆ ಪ್ರಾರಂಭಿಸಲಾಗುವುದು ಎಂದರು.       

ಮುಖ್ಯ ಅತಿಥಿಗಳಾಗಿ ಕಾಗವಾಡ ಶಾಸಕ ರಾಜು ಕಾಗೆ,  ಮಾಜಿ ಶಾಸಕ ಮಹೇಶ ಕುಮಠಳ್ಳಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರ​‍್ಪ ಸವದಿ, ಶಿರೋಳ ದತ್ತ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಗಣಪತರಾವ ಪಾಟೀಲ, ನ್ಯಾಯವಾದಿ ಬಿ.ಎಲ್‌.ಪಾಟೀಲ, ಅತಿಥಿಗಳಾಗಿ ಧುರೀಣರಾದ ಎಸ್‌.ಕೆ.ಬುಟಾಳಿ, ಹಿಮಾನಶು ಪಾಟೀಲ, ಪ್ರಕಾಶ ಪಾಟೀಲ, ವಿನಯ ಪಾಟೀಲ, ಪುರಸಭಾ ಸದಸ್ಯರಾದ ಭುವನೇಶ್ವರಿ ಯಕ್ಕಂಚಿ,  ದತ್ತಾ ವಾಸ್ಟರ್, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಮಲ್ಲಿಕಾರ್ಜುನ ಬುಟಾಳಿ, ನರಸು ಬಡಕಂಬಿ, ರಿಯಾಜ ಸನದಿ, ಪ್ರಮೋದ ಬಿಳ್ಳೂರ ಆಗಮಿಸಿದ್ದರು. ನೂತನ ಶಾಖೆಯನ್ನು ಶೇಗುಣಸಿಯ ಡಾ.ಮಹಾಂತ ಪ್ರಭು ಸ್ವಾಮೀಜಿ ಉದ್ಘಾಟಿಸಿದರು.       

ಬ್ಯಾಂಕಿನ  ಅಧ್ಯಕ್ಷ ಮಹೇಂದ್ರ ಅಪ್ಪಣ್ಣ ಬಾಗೆ, ಉಪಾದ್ಯಕ್ಷ ಶ್ರೇಣಿಕ್ ಆದಿನಾಥ ನಿರ್ದೇಶಕರಾದ ಕುಡಚೆ, ಮಹಾದೇವ ವಿಠಲ ಪಾಟೀಲ, ಧರ್ಮರಾಜ್ ಬಜರಂಗ್ ಹೊನ್ಮೋರ,  ಮೇಘಾ ವಿಶ್ವಾಸ ಪಾಟೀಲಅಧ್ಯಕ್ಷ ಭೂಪಾಲ ಪಾಟೀಲ್, ಉಪಾದ್ಯಕ್ಷ  ಅಪ್ಪಾಸೋ ರಾಮು ನರುತೆ, ನಿರ್ದೇಶಕರಾದ ಮಹಾದೇವ ಬಾಬು ರಾಜಮನೆ, ಮಹೇಂದ್ರ ಅಪ್ಪಣ್ಣ ಬಾಗೆ, ಅಣ್ಣಾಸಾಹೇಬ ರೇವಗೊಂಡ ಪಾಟೀಲ, ಶ್ರೇಣಿಕ್ ಆದಿನಾಥ್ ಕುಡಚೆ, ಭೂಪಾಲ್ ಗೋವಿಂದ್ ಖಮ್ಕರ, ರಾಜೇಶ ಬಸ್ಲಿಂಗಪ್ಪ ಸಾಣಿಕೋಪ, ಶಿವಾಜಿ ಶಂಕರ್ ಪೋಳ, ಅಶ್ರಫಾಲಿ ಇಸ್ಮಾಯಿಲ್ ಪಟೇಲ,  ರಮೇಶ ವಿಠ್ಠಲ್ ಪಾಟೀಲ, ದೀಲೀಪ್ ಅಪ್ಪಾಸೋ ಊರ್ಫ್‌ ಬಾಳಗೊಂಡ ಪಾಟೀಲ, ಶರದ್ ಭಾಸ್ಕರ್ ಗೋಧಾಡೆ, ಬಾಪುಸೋ ರಾಮು ಬೋರ್ಗವೆ, ಶ್ರೀಮತಿ. ವಿನಯ ರಮೇಶ ಘೋರೆ​‍್ಡ, ಅಸ್ಮಿತಾ ಸತೀಶ ಪಾಟೀಲ, ಶಂಕರ್ ರಾವು ಮಂಗಳೇಕರ,  ಸುನಿಲ್ ಶ್ರೀನಿವಾಸ ಮುಳೆ, ಜನಾರ್ಧನ್ ಮಹಾದೇವ ಬೋಟೆ, ವಿನಾಯಕ್ ಆನಂದರಾವ್ ಕದಂ ಸೇರಿದಂತೆ ಹಲವು ಮುಖಂಡರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು