ಶ್ರೀ ಘನಮಠೇಶ್ವರ ಇಂಟರನ್ಯಾಷನಲ್ ಪಬ್ಲಿಕ ಶಾಲೆಯಲ್ಲಿ(ಅಃಖಇ) ಐಐಟಿ ಫೌಂಡೇಶನ್: ಕೋಟಾ ಶೈಲಿಯ ತರಬೇತಿ
At Sri Ghanmatheshwara International Public School (SIPPS) IIT Foundation: Quota style training
ಲೋಕದರ್ಶನ ವರದಿ
ಶ್ರೀ ಘನಮಠೇಶ್ವರ ಇಂಟರನ್ಯಾಷನಲ್ ಪಬ್ಲಿಕ ಶಾಲೆಯಲ್ಲಿ(ಅಃಖಇ)
ಐಐಟಿ ಫೌಂಡೇಶನ್: ಕೋಟಾ ಶೈಲಿಯ ತರಬೇತಿ
ವಿಜಯಪುರ 03: ಭಾರತದ ಪ್ರತಿಷ್ಠಿತ ವಿದ್ಯಾ ಕೇಂದ್ರ ಕೋಟಾ ನಗರ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ದೇಶದ ನೇತೃತ್ವ ವಹಿಸಿಕೊಂಡಿದೆ. ಇದೀಗ ಇದೇ ಶೈಲಿಯ ಐಐಟಿ ಫೌಂಡೇಶನ್ ತರಬೇತಿಯು ಶ್ರೀ ಘನಮಠೇಶ್ವರ ಇಂಟರನ್ಯಾಷನಲ್ ಪಬ್ಲಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ ಎಂಬುದು ಹೆಮ್ಮೆಪಡುವ ಸಂಗತಿ.
7ನೇ, 8ನೇ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿ. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ಮಾತನಾಡಿ ರಾಜಸ್ಥಾನದ ಕೋಟಾದಿಂದ ಆಯ್ದ ಮಟ್ಟದ ಪುಸ್ತಕಗಳು ಹಾಗೂ ಅಧ್ಯಯನ ಸಾಮಗ್ರಿಗಳನ್ನು ತರಿಸಿ, ಸ್ಥಳೀಯ ವಿದ್ಯಾರ್ಥಿಗಳಿಗೆ ಅತಿದೊಡ್ಡ ಸ್ಪರ್ಧಾತ್ಮಕ ಪಠ್ಯಾನುಭವವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಐಐಟಿ, ಜೆಇಇ, ನಿಟ್, ಓಖಿಖಇ, ಮತ್ತು ಒಲಂಪಿಯಾಡ್ ಪರೀಕ್ಷೆಗಳ ಪೂರ್ವ ತಯಾರಿ ಹಾಗೂ ವಿಜ್ಞಾನ ಮತ್ತು ಗಣಿತ ವಿಷಯಗಳ ಆಳವಾದ ತರಬೇತಿ ನೀಡಲಾಗುವದು. ಆಂದ್ರ ಮತ್ತು ಕೇರಳ ಅನುಭವಿ ಶಿಕ್ಷಕರಿಂದ ಬೋಧಿಸಲಾಗುವದು.
ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಸಿಬಿಎಸ್‌ಇ ಪ್ರಾಚಾರ್ಯರಾದ ಜಯಚಂದ್ರ, ಮುಖ್ಯಗುರುಮಾತೆಯರಾದ ಆರ್ ಎಸ್ ದೇಸಾಯಿ, ವಿಜ್ಞಾನ ಹಾಗೂ ಗಣಿತ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 