ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ: ಬೌದ್ಧಿಕ ಸಾಮಥ್ರ್ಯದ ಅಳತೆಗೋಲು ರಸಪ್ರಶ್ನೆ ಸ್ಪರ್ಧೆ: ಕರಲಟ್ಟಿ

ಬೌದ್ಧಿಕ ಸಾಮಥ್ರ್ಯದ ಅಳತೆಗೋಲು ರಸಪ್ರಶ್ನೆ ಸ್ಪಧರ್ೆ: ಕರಲಟ್ಟಿ

ಕಾಗವಾಡ 01: ಆಧುನಿಕ ಯುಗ ವಿಕಸನ ಹೊಂದಿದ ವ್ಯಕ್ತಿಯ ಸರ್ವತೋಮುಖ ಕೌಶಲ್ಯ, ಜ್ಞಾನ ಹಾಗೂ ಸ್ಪಧರ್ಾತ್ಮಕ ಪ್ರತಿಭೆಯನ್ನು ಒಳಗೊಂಡಿದೆ. ತಾಂತ್ರಿಕ ಹಾಗೂ ವೈಜ್ಞಾನಿಕ ಯುಗದಲ್ಲಿ ಪರಿಣತಿ ಹೊಂದಿದ ಮತ್ತು ಯಾವುದೇ ಸ್ಪಧರ್ೆಯನ್ನು ಎದುರಿಸುವ ಮನೋಸ್ಥೈರ್ಯ, ಕಾರ್ಯಕ್ಷಮತೆ ಹಾಗೂ ಸತತ ಪ್ರಯತ್ನದಿಂದ ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಧನೆಗೈಯಲು ಕಾರಣೀಭೂತವಾಗಬಹುದೆಂದು ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿಯವರು ಹೇಳಿದರು.

ಸೋಮವಾರ ದಿ. 1ರಂದು ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಡಾ. ಜಿ.ಜಿ.ಕರಲಟ್ಟಿ ಮಾತನಾಡಿ, ವಿಶೇಷವಾಗಿ ವಿದ್ಯಾಥರ್ಿಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭೌದ್ಧಿಕ ಸಾಮಥ್ರ್ಯದ ಅಳತೆಗೋಲಾದ ರಸಪ್ರಶ್ನೆ ಸ್ಪಧರ್ೆ ನಿಜಕ್ಕೂ ಅತ್ಯವಶ್ಯವಾದದ್ದು ಎಂದರು.

ಆಧ್ಯಕ್ಷತೆ ಪ್ರೊ.ಜೆ.ಕೆ.ಪಾಟೀಲ ವಹಿಸಿದರು. ರಸಪ್ರಶ್ನೆ ಸ್ಪಧರ್ೆಯು ಮಹಾಭಾರತದಲ್ಲಿ ಯಕ್ಷನು ಪಾಂಡವರಿಗೆ ಕೇಳಿದ ಪ್ರಶ್ನಾವಳಿಯಿಂದ ಪ್ರಾರಂಭವಾಗಿರಬಹುದು.ಪ್ರತಿವರ್ಷ ದೂರದರ್ಶನ ಮಾಧ್ಯಮದಲ್ಲಿ ನಡೆಯುವ ರಸಪ್ರಶ್ನೆ ಕಾರ್ಯಕ್ರಮದ ರೀತಿಯಲ್ಲೇ ಸುಮಾರು 26 ವರ್ಷಗಳಿಂದ ನಮ್ಮ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಗಿ ಬೇರೆ ಬೇರೆ ವಿಷಯಗಳನ್ನು ಆಯ್ದ ಪ್ರಶ್ನಾವಳಿಗಳನ್ನು ಲಿಖಿತ ಪ್ರಶ್ನೆಯಲ್ಲಿ ಆಯ್ಕೆಯಾದ ತಂಡಗಳಿಗೆ ಕೇಳಲಾಗುತ್ತದೆ ಎಂದು ಹೇಳಿದರು.

ಸ್ಪಧರ್ೆಯಲ್ಲಿ ಮುಖ್ಯವಾಗಿ 03 ಕ್ವೀಜ್ ಮಾಸ್ಟರ್ಗಳಾದ ಪ್ರೊ.(ಮಿಸ್).ಎ.ಸಿ.ಸವದತ್ತಿ, ಪ್ರೊ.ಆರ್.ಎ.ಬಡಿಗೇರ, ಪ್ರೊ.ಎಸ್.ಎ.ಇನಾಮದಾರ 15 ಸುತ್ತುಗಳಲ್ಲಿ 04 ತಂಡಗಳಿಗೆ ಪ್ರಶ್ನೆಗಳನ್ನು ಕೇಳಿ ವಿದ್ಯಾಥರ್ಿಗಳ ಜ್ಞಾನ ಭಂಡಾರವನ್ನು ಹೊರತೆಗೆದರು. ಸ್ಕೊರರ್ಗಳಾಗಿ ಪ್ರೊ.ಕೆ.ಜೆ.ದೆಸಾಯಿ, ಪ್ರೊ.ಮಂಜುನಾಥ ಕಟ್ಟಿಮನಿ ಕಾರ್ಯನಿರ್ವಹಿಸಿದರು.

ಲಿಖಿತ ರಸಪ್ರಶ್ನೆ ಪರೀಕ್ಷೆಯಲ್ಲಿ ಆಯ್ಕೆಯಾಗಿ ಮೌಖಿಕ ರಸಪ್ರಶ್ನೆ ಎದುರಿಸಿ ಕ್ರಮವಾಗಿ ಪ್ರಥಮ ಸ್ಥಾನವನ್ನು ಪಡೆದ ಕಾವೇರಿ ತಂಡದ ಸುನೀಲ ಐ ಜಂಗಮಶೆಟ್ಟಿ, ಮೇಘಾ ಆರ್ ಜಾಧವ, ಕ್ಷಿತೀಜಾ ಬಿ ಸವದತ್ತಿ, ದ್ವಿತೀಯ ಸ್ಥಾನವನ್ನು ಪಡೆದ ಮಲಪ್ರಭಾ ತಂಡದ ಪ್ರಿಯಂಕಾ ಸಮಾಜ, ರಾಕೇಶ ಕಾಗವಾಡೆ, ಪ್ರವೀಣಕುಮಾರ ಸಾವಂತ, ತೃತೀಯ ಸ್ಥಾನವನ್ನು ಪಡೆದ ಕೃಷ್ಣಾ ತಂಡದ ಮುಸ್ಕಾನ ಝಾರಿ, ಸರಸ್ವತಿ ತಳವಾರ, ಪ್ರತೀಕ್ಷಾ ಶಿಂಗೆ ಹಾಗೂ ಸಮಾಧಾನಕರ ಪಡೆದ ಗೋದಾವರಿ ತಂಡದ ಮಯೂರಿ ಮಾನೆ, ಸುಶಾಂತ ದೆವಮೋರೆ, ಸೋನಾಲಿ ಫಡತರೆ ಇವರು ಅಭಿನಂದನೆಗೆ ಅರ್ಹರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಎಸ್.ಎಸ್.ಬಾಗನೆ, ಪ್ರೊ. ಬಿ.ಎ.ಪಾಟೀಲ, ಡಾ.ಎಸ್.ಪಿ.ತಳವಾರ, ಡಾ. ಡಿ.ಡಿ.ನಗರಕರ, ಡಾ.ಎಂ.ವೈ.ಬೋಸ್ಲೆ, ಡಾ.ಆರ್.ಎಸ್.ಕಲ್ಲೋಳಿಕರ, ಪ್ರೊ.ಬಿ.ಡಿ.ಧಾಮಣ್ಣವರ, ಪ್ರೊ.ವ್ಹಿ.ಬಿ.ಬುಲರ್ೆ, ಪ್ರೊ.ಎ.ಐ.ಜಂಗಮಶೆಟ್ಟಿ ಸೇರಿದಂತೆ ಅನೇಕರು ಇದ್ದರು.