ಸುಗಮ ಸಂಚಾರಕ್ಕೆ ಗ್ರಾಮೀಣ ರಸ್ತೆಗಳ ಡಾಂಬರೀಕರಣ
Asphalting of rural roads for smooth traffic
ರಾಯಬಾಗ, 26 ; ಗ್ರಾಮೀಣ ಭಾಗದ ಜನರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಸುಗಮವಾಗಿ ಸಂಚರಿಸಲು ಅನುಕೂಲವಾಗಲು ಗ್ರಾಮೀಣ ಪ್ರದೇಶದ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಮಂಗಳವಾರ ಜಿ.ಪಂ. ಇಲಾಖೆಯಿಂದ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಮಂಜೂರಾದ 30 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಬೂದಿಹಾಳ ಕ್ರಾಸ್-ದೇವನಕಟ್ಟಿ ರಸ್ತೆಯಿಂದ ಸರ್ಕಾರಿ ಪ್ರೌಢ ಶಾಲೆ ವರೆಗೆ ರಸ್ತೆ ಡಾಂಬರೀಕರಣ ಮತ್ತು 50 ಲಕ್ಷ ರೂ.ವೆಚ್ಚದಲ್ಲಿ ಮಾಡಲಗಿ ಗ್ರಾಮದಿಂದ ಮೀರಾಪೂರಟ್ಟಿ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಳೆಯಿಂದ ಹಾಳಾದ ರಸ್ತೆಗಳನ್ನು ಸುಧಾರಿಸಲು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲಾಗಿದೆ. ಗುತ್ತಿಗೆದಾರರು ಗುಣಮಟ್ಟದಲ್ಲಿ ರಸ್ತೆ ಕಾಮಗಾರಿ ಮಾಡಬೇಕೆಂದು ಸೂಚಿಸಿದರು.
ಜಿ.ಪಂ.ಎಇಇ ಎಸ್.ಎಸ್. ಹೊಸಮನಿ, ಜೆಇ ರಾಕೇಶ ಕಟ್ಟೀಮನಿ, ಅಜೀತ ಮಾಂಗ, ವಿಜಯ ಆಕಳೆ, ಮಾರುತಿ ಉಪ್ಪಾರಟ್ಟಿ, ಅಜೀತ ಚೌಗಲಾ, ಮಹಾದೇವ ಬಿಳಿಕುರಿ, ಸುರೇಶ ಅಜ್ಜನವರ, ಸದಾ ಮಾಂಗ, ಮಲ್ಲಪ್ಪ ಗೌನೋಳಿ, ರವೀಂದ್ರ ದಾವನೆ, ಸುಧಾಕರ ಪಾಟೀಲ, ಸಂತೋಷ ಲಠ್ಠೆ, ಪ್ರಕಾಶ ಆಕಳೆ, ಪವಾಡಿ ಒಡೆಯರ, ನರಸಪ್ಪ ಲಠ್ಠೆ, ಮಲಕಾರಿ ನೂಲಿ, ಸಂತೋಷ ಕಾಂಬಳೆ, ವಿರೂಪಾಕ್ಷ ಪಾಟೀಲ ಸೇರಿ ಅನೇಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 