ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ದಿವ್ಯಗೆ ಕಂಚು


ಜಕಾತರ್ಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನವೂ ಕುಸ್ತಿ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಜರಂಗ್ ಪುನಿಯಾ, ವಿನೀಶಾ ಪೋಗಟ್ ಬಳಿಕ ಇದೀಗ ಭಾರತದ  ಮಹಿಳಾ ಕುಸ್ತಿಪಟು ದಿವ್ಯ ಕಕ್ರನ್ ಕಂಚಿನ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ. 

ಮಹಿಳೆಯರ 68 ಕೆಜಿ ಫ್ರೀಸ್ಟೈಲ್  ವಿಭಾಗದಲ್ಲಿ ದಿವ್ಯ ಸ್ಪಧರ್ಿಸಿದ್ದು ಇಂದಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ರ ಅಂತರದಲ್ಲಿ ಪರಾಭವಗೊಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. 

ಇದೇ ವೇಳೆ ಭಾರತದ ಇನ್ನಿಬ್ಬರು ಕುಸ್ತಿ ಪಟುಗಳಾದ ಗ್ಯಾನೇಂದರ್ ಹಾಗೂ ಮನೀಶ್ ಕಂಚಿನ ಪದಕ ಗಳಿಸುವ ಅವಕಾಶವನ್ನು ಕೈಚೆಲ್ಲಿದ್ದಾರೆ. 

ದಿವ್ಯ ಅವರ ಕಂಚಿನ ಸಾಧನೆಯೊಡನೆ ಭಾರತದ ಒಟ್ಟೂ ಪದಕಗಳ ಸಂಖ್ಯೆ 10ಕ್ಕೆ ತಲುಪಿದ್ದು ಇದರಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿದೆ.