ಕರ್ನಾಟಕ ರಾಜ್ಯ ಸೇವಾ ರತ್ನ ಪ್ರಶಸ್ತಿಗೆ ಅಶೋಕ ಕಾಳೆ ಭಾಜನ

ಕರ್ನಾಟಕ ರಾಜ್ಯ ಸೇವಾ ರತ್ನ ಪ್ರಶಸ್ತಿಗೆ ಅಶೋಕ ಕಾಳೆ ಭಾಜನ  Ashok Kale selected for the Karnataka State Seva Ratna Award


ಶಿಗ್ಗಾವಿ, ಆ. 26: ಶ್ರೇಯಾ ಜನಸೇವಾ ಟ್ರಸ್ಟ್‌ ಕಮಿಟಿ (ರಿ), ಹುಬ್ಬಳ್ಳಿ, ಶ್ರೇಯಾ ಜನಸೇವಾ ಫೌಂಡೇಶನ್ ಕೇಂದ್ರ ಸಮಿತಿ, ಹುಬ್ಬಳ್ಳಿ ಹಾಗೂ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನ (ರಿ), ವಿದ್ಯಾನಗರ, ಹುಬ್ಬಳ್ಳಿ ಇವರ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.  ಈ ಸಂದರ್ಭದಲ್ಲಿ ಶಿಗ್ಗಾವಿ ಪಟ್ಟಣದ ದಲಿತ ಮುಖಂಡ, ಸಮತಾ ಸೈನಿಕ ದಳದ ಹಾವೇರಿ ಸಮಾಜ ಸೇವಕ ಹಾಗೂ ಕನ್ನಡ ನಾಡು-ನುಡಿಗಾಗಿ ಹೋರಾಟಗಾರ ಅಶೋಕ ಜಿ. ಕಾಳೆ ಅವರನ್ನು ಗುರುತಿಸಿ ಕರ್ನಾಟಕ ರಾಜ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಸಮಾಜ ಸೇವೆ ಹಾಗೂ ಕನ್ನಡ ನಾಡು-ನುಡಿಯ ಹಿತಕ್ಕಾಗಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.