ಕರ್ನಾಟಕ ರಕ್ಷಣಾ ವೇದಿಕೆಗೆ ನಗರಾಧ್ಯಕ್ಷ ರಾಗಿ ಅಶ್ಫಾಕ್ ಅಹಮದ್ ನೇಮಕ

ಕರ್ನಾಟಕ ರಕ್ಷಣಾ ವೇದಿಕೆಗೆ ನಗರಾಧ್ಯಕ್ಷ ರಾಗಿ ಅಶ್ಫಾಕ್ ಅಹಮದ್ ನೇಮಕ Ashfaq Ahmed appointed as city president of Karnataka Rakshana Vedike

                        ಕೊಪ್ಪಳ  02: ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ, ಕೊಪ್ಪಳ ನಗರ ಘಟಕಕ್ಕೆ ಅಧ್ಯಕ್ಷರಾಗಿ ಕೊಪ್ಪಳದ ಪ್ರತಿಭಾವಂತ ಯುವ ನಾಯಕ ,ಪತ್ರಕರ್ತ,ಸಮಾಜ ಸೇವಕ ಅಶ್ಫಾಕ್ ಅಹಮದ್ ನೇಮಕಗೊಂಡಿದ್ದಾರೆ, ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ಕನ್ನಡ ನೆಲ ಜಲ ಸಂಸ್ಕೃತಿ ಪರಂಪರೆ ಸಂರಕ್ಷಣೆಗೆ ಮತ್ತು ಮುಂದಿನ ಯುವ ಪೀಳಿಗೆಗೆ ನಮ್ಮ ಕನ್ನಡ ನಾಡಿನ ಇತಿಹಾಸ ಪರಂಪರೆ ಪರಿಚಯಿಸುವಂತಹ ಕೆಲಸ ಜೊತೆಗೆ ಕನ್ನಡಿಗರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಡಲು ಮತ್ತು ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆ ಬೆಳೆಸಲು ನೇಮಕ ಮಾಡಲಾಗಿದ್ದು ಕೂಡಲೇ ತಮ್ಮ ಜವಾಬ್ದಾರಿ ವಹಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಮತ್ತು ಕೊಪ್ಪಳ ನಗರದಲ್ಲಿ ವೇದಿಕೆಯ ಸಂಘಟನೆ ಬಲಿಷ್ಠವಾಗಿ ಬೆಳೆಸುವಂಥ ಕೆಲಸ ಮಾಡಬೇಕು ಎಂದು ನೇಮಕ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಾಜ ಉಳ್ಳಾಗಡ್ಡಿ ಅವರು ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ,

                  ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಶ್ಫಾಕ್ ಅಹಮದ್ ರವರಿಗೆ ಸೋಮವಾರದಂದು ನಗರದ ಪ್ರವಾಸಿ ಮಂದಿರ ದಲ್ಲಿ ನೇಮಕಾತಿ ಆದೇಶ ಪತ್ರ ನೀಡಿದ ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಶಿವರಾಜ್ ಉಳ್ಳಾಗಡ್ಡಿ,  ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಸಿ , ಹೊನಕೇರಿ ಅಲ್ಲದೆ ನೂತನ ತಾಲೂಕ ಅಧ್ಯಕ್ಷ ಅಬ್ದುಲ್ ಸಮದ್ ನದೀಮುಲ್ಲಾ, ಮಹಿಳಾ ಘಟಕದ ಅಧ್ಯಕ್ಷರಾದ ನಾಗರತ್ನ ಅಳವಂಡಿ ಹಾಗೂ ವೇದಿಕೆಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು, ಕೊಪ್ಪಳ ನಗರ ಘಟಕಕ್ಕೆ ಕರ್ನಾಟಕ ರಕ್ಷಣಾ ವೇದಿಕೆಗೆ ನೂತನ ನಗರ ಘಟಕದ ಅಧ್ಯಕ್ಷರಾಗಿ  ಅಶ್ಫಾಕ್ ಅಹಮದ್ ನೇಮಕ ಗೊಂಡಿರುವುದಕ್ಕೆ ಅವರ ಸ್ನೇಹಿತರ ಬಳಗ ಮತ್ತು ಅಭಿಮಾನಿ ಬಳಗ ಹರ್ಷ ವ್ಯಕ್ತಪಡಿಸಿ ಅವರಿಗೆ ಮತ್ತು ಅವರೊಂದಿಗೆ ವಿವಿಧ ಸ್ಥಾನಗಳಿಗೆ ನೇಮಕಗೊಂಡ ನೂತನ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದಿಸಿ ಅವರನ್ನು ನೇಮಕ ಮಾಡಿದ ವೇದಿಕೆಯ ಜಿಲ್ಲಾಧ್ಯಕ್ಷರಿಗೆ ಮತ್ತು ಇತರ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ,