ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿ ಆಷಾಢ ಏಕಾದಶಿ ಸಂಪನ್ನ

ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿ ಆಷಾಢ ಏಕಾದಶಿ ಸಂಪನ್ನ Ashada Ekadashi Sampanna at Nirmala Autism and Learning Disability Education Center in Miraj Town

ಲೋಕದರ್ಶನ ವರದಿ 

ಕಾಗವಾಡ 28 :  ಮಹಾರಾಷ್ಟ್ರದ ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿಯ  ಮಕ್ಕಳಿಗ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರ ಸಾಮಾಜಿಕ ಭಾಗವಹಿಸುವಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಶನಿವಾರ ದಿ. 25 ರಂದು ಆಷಾಢ ಏಕಾದಶಿಯನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಕೇಂದ್ರದ ವಿಶೇಷ ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣಗಳಲ್ಲಿ ಭಾಗವಹಿಸಿ, ಆಷಾಢ ಏಕಾದಶಿಯನ್ನು ಆನಂದಿಸಿದರು. ವಿಠ್ಠಲ-ರುಕ್ಮಿಣಿಯ ವೇಷ-ಭೂಷಣಗಳೊಂದಿಗೆ ಭಕ್ತಿಮಯ ವಾತಾವರಣದಲ್ಲಿ ಮಕ್ಕಳು ಸ್ವಯಂ ಪ್ರೇರಿತವಾಗಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು. 

ಈ ಕಾರ್ಯಕ್ರಮದಲ್ಲಿ ನಿರ್ಮಲ ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರಶೇಖರ ಹಳಿಂಗಲೆ, ಆಟಿಸಂ ಕೇಂದ್ರದ ಪ್ರಾಂಶುಪಾಲ ಡಾ. ಮಾಧುರಿ ವಾಂಗಪತಿ ಹಾಗೂ ಕೇಂದ್ರದ ಶಿಕ್ಷಕರು, ಚಿಕಿತ್ಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 

ಆಷಾಢ ಏಕಾದಶಿಯ ನಿಮಿತ್ಯವಾಗಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಕ್ಕಳ ಉತ್ಸಾಹದೊಂದಿಗೆ ಭಾಗವಹಿಸುವ ಮೂಲಕ ಸಂಪೂರ್ಣ ವಾತಾವರಣವು ಭಕ್ತಿಮಯವಾಗಿದ್ದು, ವಿಶೇಷವಾಗಿತ್ತು.