ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿಯಾಗಿ ಯಾರಿಗೂ ವಂಚಿಸಿಲ್ಲ : ಆರೋಪ ನಿರಾಧಾರ, ಮಾನ ನಷ್ಟ ಮುಖದಮೆ ನಮ್ಮ ನಡೆ- ಸಿದ್ದನಗೌಡ
As the guru of Sri Siddharudha Math, I have not cheated anyone
ರಾಣೇಬೆನ್ನೂರು 1: ತಾವು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಶ್ರೀ ಸಿದ್ಧಾರೂಢ ಸ್ವಾಮಿ ಟ್ರಸ್ಟ್ ಕಮಿಟಿಯ ಧರ್ಮದರ್ಶಿಗಳಾಗಿ, ಈ ಭಾಗದ ಭಕ್ತರ ಅಪಾರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಏಳಿಗೆಯನ್ನು ಸಹಿಸದ ಕೆಲವರು ಅನಾವಶ್ಯಕವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ನನ್ನ ತೇಜೋವದೆಗೆ ಪ್ರಯತ್ನಿಸುತ್ತಿದ್ದಾರೆ.
ಅವರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿವೆ ಎಂದು ಧರ್ಮದರ್ಶಿ ಚನ್ನೇಗೌಡ ಪಾಟೀಲ್ ಸ್ಪಷ್ಟಪಡಿಸಿದರು. ಶುಕ್ರವಾರ, ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಗಳು, ಮತ್ತು ಅವರು ನೀಡುತ್ತಿರುವ ದಾಖಲೆಗಳು ನಕಲಿಯಾಗಿದೆ. ಅವರು ಆರೋಪಿಸಿದಂತೆ, ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿಯ ಆಡಳಿತಾಧಿಕಾರಿಗಳು ಜಿಲ್ಲಾ ಸತ್ರ ನ್ಯಾಯಾಧೀಶರೇ ಆಗಿರುತ್ತಾರೆ, ಆರೋಪ ಸ್ಪಷ್ಟೀಕರಣ ವಿವರಿಸುವಂತೆ ಈಗಾಗಲೇ ಅವರಿಗೆ ನೋಟಿಸ್ ನಿಡಿದ್ದಾರೆ. ಅವರು ಇದುವರೆಗೂ ಅದಕ್ಕೆ ಉತ್ತರಿಸಲ್ಲಿ ತಮ್ಮ ತೇಜೋವಧೆಗೆ ಪ್ರಯತ್ನಿಸುತ್ತಿರುವುದು ಬಹಿರಂಗ ಮತ್ತು ಸ್ಪಷ್ಟವಾಗಿದೆ ತಾವು ಸಹ ಮುಂದೆ ಮಾನನಷ್ಟ ಮುಖದ್ಧಮೆಯನ್ನು ಹೊಡಲು ಮುಂದಾಗಿದ್ದೇನೆ ಎಂದು ಉತ್ತರಿಸಿದರು.
ನ್ಯಾಯಾಧೀಶರುಗಳಿಗೆ ಸಲ್ಲಿಸಿರುವ, ಒಂಬತ್ತು ಜನರ ತಂಡದವರಲ್ಲಿ ಕೆಲವರು ಇದು ನಮ್ಮ ಸಹಿ ಅಲ್ಲ, ಆರೋಪ ಪತ್ರಕ್ಕೆ ನಾವು ಸಹಿ ಮಾಡಿಲ್ಲ ಇದು ಪೋರ್ಜರಿ ಸಹಿ ಮಾಡಿದ್ದಾರೆ. ಎಂದು ಉತ್ತರಿಸಿದ್ದಾರೆ. ನಿಖರ ಮತ್ತು ಸ್ಪಷ್ಟ ಮಾಹಿತಿ ಸಲ್ಲಿಸುವಂತೆ ಆಡಳಿತಾಧಿಕಾರಿಗಳು ಅವರಿಗೆ ನೋಟಿಸ್ ಮಾಡಿದ್ದಾರೆ. ಸಾದರಪಡಿಸಲಿ. ತಾವು ಸಾಕಾದ ನೋಡುತ್ತಿದ್ದೇವೆ ಎಂದು ಮಾಧ್ಯಮದವರ ಹಲವು ಪ್ರಶ್ನೆಗಳಿಗೆ ಸಿದ್ದನಗೌಡ ಪಾಟೀಲ ಅವರು ಉತ್ತರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 