ನಿಸ್ವಾರ್ಥ ಸ್ವಯಂ ಸೇವಕರಾಗಿ : ಡಾ.ಎಲ್‌.ಎಸ್‌.ಚವಡಿ

ನಿಸ್ವಾರ್ಥ ಸ್ವಯಂ ಸೇವಕರಾಗಿ : ಡಾ.ಎಲ್‌.ಎಸ್‌.ಚವಡಿ As a selfless volunteer: Dr. L.S. Chavadi

ನಿಸ್ವಾರ್ಥ ಸ್ವಯಂ ಸೇವಕರಾಗಿ : ಡಾ.ಎಲ್‌.ಎಸ್‌.ಚವಡಿ 

ಬಾಗಲಕೋಟೆ 24: ಭಾರತ ಅಭಿವೃದ್ಧಿ ಗೊಳ್ಳಬೇಕಾದರೆ ಮೊದಲು ಹಳ್ಳಿಗಳು ಬೆಳವಣಿಗೆ ಹೊಂದಬೇಕು. ಎನ್‌ಎಸ್‌ಎಸ್ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಲ್‌.ಎಸ್‌. ಚವಡಿ ಹೇಳಿದರು 

 ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ  ಅತಿಥಿಗಳಾಗಿ ಮಾತನಾಡಿದ  ಅವರು  ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಸ್ಥಾಪಿಸಲಾಗಿದ್ದು, ದೇಶ, ಗ್ರಾಮಗಳು ಸ್ವಚ್ಛವಾಗುವುದರ ಜೊತೆಗೆ ಬದಲಾವಣೆಯ ಕನಸು ಅವರದ್ದಾಗಿತ್ತು. ಎನ್‌ಎಸ್‌ಎಸ್ ದ್ಯೇಯ ನನಗಾಗಿ ಅಲ್ಲ ನಿನಗಾಗಿ ಎಂದರೆ ನಾವು ನಿಸ್ವಾರ್ಥ ಮನೋಭಾವನೆ ಇಂದ ಸೇವೆ ಮಾಡುವುದಾಗಿದೆ ಎಂದರು. ಎನ್‌ಎಸ್‌ಎಸ್ ಲಾಂಛನದಲ್ಲಿ ಇರುವ ಏಳು ಗೆರೆಗಳು ಯುವ ಜನರ ಶಕ್ತಿಯ ಸಂಕೇತವಾಗಿದೆ. ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸಿ ನಿಮ್ಮ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳಿ ಎಂದರು. 

 ಪ್ರಾಚಾರ್ಯಎಸ್ ಆರ್ ಮೂಗನೂರಮಠ ಮಾತನಾಡಿ ಪುನಃ ಪ್ರತಿಫಲ ಬಯಸದೆ ಕೆಲಸ ಮಾಡುವುದೇ ಎನ್‌ಎಸ್‌ಎಸ್ ಉದ್ದೇಶವಾಗಿದ್ದು. ಶಿಬಿರಗಳಲ್ಲಿ ಪಾಲ್ಗೊಳ್ಳುವ ಸ್ವಯಂ ಸೇವಕರು ಅಂತರ ಜಲವನ್ನು ಹೆಚ್ಚಿಸುವ, ಹರಿಯುವ ನೀರನ್ನು ತಡೆಯುವ ಕ್ರಮ ಹಾಗೂ ಅದನ್ನು ಭೂಮಿಯಲ್ಲಿ ಇಂಗಿಸುವ  ಮಾರ್ಗದ ಕುರಿತು ಗ್ರಾಮದವರಿಗೆ ತಿಳಿಸುವ ಕೆಲಸ ಮಾಡಬೇಕು  ನೀರಿನ ಮೂಲವನ್ನು ಸ್ವಚ್ಛ ಮಾಡಬೇಕು, ಆಹಾರವನ್ನು ವ್ಯರ್ಥ ಮಾಡಬಾರದು ಎಂದರು. 

ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ಎನ್‌. ಬಿ. ವಿರೂಪಾಕ್ಷಿ ಡಾ. ಆರ್‌. ಆರ್‌. ಅರಿಶಿಣಗುಡಿ ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ಸ್ವಯಂ ಸೇವಕ-ಸೇವಕಿಯರಿದ್ದರು