ಚಿಮ್ಮಡದಲ್ಲಿ ಅರುಣೋದಯ ಸಂಭ್ರಮ-2025 ಕಾರ್ಯಕ್ರಮ
Arunodaya Sambrham-2025 program in Chimmada
ಚಿಮ್ಮಡದಲ್ಲಿ ಅರುಣೋದಯ ಸಂಭ್ರಮ-2025 ಕಾರ್ಯಕ್ರಮ
ಚಿಮ್ಮಡ 29: ಈ ಹಿಂದೆ ಗ್ರಾಮೀಣ ಭಾಗದಲ್ಲಿ ನಡೆಯುತಿದ್ದ ಬಯಲಾಟ, ಜನಪದ ಕಲೆಗಳಿಗೆ ಜನರು ಅಷ್ಟೊಂದು ಮಹತ್ವ ನೀಡುತ್ತಿರಲಿಲ್ಲ. ಈಗೀಗ ಆಧುನಿಕ ಕಲೆಗಳು ಹೆಚ್ಚಾಗುತಿದ್ದು ಗ್ರಾಮೀಣರನ್ನು ಸೆಳೆಯುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರೆಯ ನಿಮಿತ್ತ ರವಿವಾರ ಹಮ್ಮಿಕೊಳ್ಳಲಾಗಿದ್ದ ಅರುಣೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರುಣೋದಯ ಸಂಭ್ರಮ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ನಗುವಿನಿಂದ ಆಯುಷ್ಯವೃದ್ಧಿಯಾಗುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ನಗುವು ಮಾಯವಾಗಿದ್ದು, ಆರೋಗ್ಯದ ಮೂಲವಾಗಿರುವ ನಗು ತರಿಸುವ ಮನರಂಜನಾ ಕಾರ್ಯಕ್ರಮಗಳು ಇಂದಿನ ಅವಶ್ಯಕವಾಗಿವೆ ಎಂದರು.
ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ ಗ್ರಾಮದಲ್ಲಿ ನಡೆಯುವ ಯಾವೂದೇ ಕಾರ್ಯಕ್ರಮಗಳಲ್ಲಿ ಪಕ್ಷ, ಜಾತಿ, ಬೇಧವಿಲ್ಲದೆ ಎಲ್ಲರೂ ಸೇರಿ ನಡೆಸುತ್ತಿರುವುದು ಮಾದರೀಯ ಕಾರ್ಯವಾಗಿದೆ ಎಂದರು. ಮಲ್ಲು ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನಿಧ್ಯವನ್ನು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಓಂಕಾರ ಮಹಾರಾಜರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಕಲ್ಲುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಲಪ್ಪ ಸಿಂಗಾಡಿ, ಭರಮು ಉಳ್ಳಾಗಡ್ಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಮಹಾಂತೇಶ ಜಾಲಿಕಟ್ಟಿ, ಬಸವರಾಜ ಕುಂಚನೂರ, ಶಿವಪ್ಪಾ ನಾಗನೂರ, ಅಶೋಕ ಮೋಟಗಿ, ನಿಂಗಣ್ಣ ಪೂಜಾರಿ, ಪ್ರಭು ಮುಧೋಳ, ರಾಜು ಬಗನಾಳ, ಮುತ್ತು ಢವಳೇಶ್ವರ, ವಿಜಯಕುಮಾರ ಪೂಜಾರಿ, ರಾಚಯ್ಯ ಮಠಪತಿ, ದುಂಡಪ್ಪ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿಯವರ ಪ್ರಾಸಬದ್ಧ ಪಂಚ್‌ಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ವಿಜೇತೆ ನಯನಾ ಹಾಗೂ ಅಪ್ಪಣ್ಣ ರಾಮದುರ್ಗರವರ ಕಾಮಿಡಿ ಪಂಚ್‌ಗೆ ಪ್ರೇಕ್ಷಕರು ಫಿದಾ ಆದರು. ಯೂಟ್ಯುಬ್ ಕಿಂಗ್ ಖ್ಯಾತಿಯ ಜನಪದ ಗಾಯಕ ಪರಸು ಕೋಲೂರರವರು ಹಾಡಿದ ನಡು ಊರಾಗ ಕಡದರ ಕಡೀಲಿ ಹಾಡು ಸುರೇಶ ಇಂಚಗೇರಿ ಮತ್ತು ಗಾಯಕಿ ರಾಕ್‌ಸ್ಟಾರ್ ಜ್ಯೋತಿರವರ ಜನಪದ ಮತ್ತು ಚಲನಚಿತ್ರ ಗೀತೆಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಅಲ್ಲದೇ ಬೆಳಗಾವಿ ಡಾನ್ಸಗ್ರುಪ್‌ನಿಂದ ನಡೆದ ನೃತ್ಯ ಕಾರ್ಯಕ್ರಮ ವೀಕ್ಷಕರ ಮನ ಗೆಲ್ಲಲು ಯಶಸ್ವಿಯಾದವು. ಇದೇ ಸಂಧರ್ಬದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯೂಸಿ ಪರೀಕ್ಷೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸತ್ಕರಿಸಿ ಗೌರವಿಸಲಾಯಿತು. ಶಿಕ್ಷಕ ಪ್ರಕಾಶ ಪುಜಾರಿ ಸ್ವಾಗತಿಸಿ, ನಿರೂಪಿಸಿದರು, ಉಪನ್ಯಾಸಕ ಪ್ರಕಾಶ ಬಡಿಗೇರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 