ವಿವಿಧ ರಂಗದಲ್ಲಿ ಸಾಧನೆಗೈದ ಕಲಾವಿದರಿಗೆ ಸನ್ಮಾನ
Artists who have achieved success in various fields are honored
ಕಂಪ್ಲಿ 12: ಇಲ್ಲಿನ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 186ನೇ ಮಹಾಮನೆ ಕಾರ್ಯಕ್ರಮ ಶನಿವಾರ ನಡೆಯಿತು. ಮರಿಯಮ್ಮನಹಳ್ಳಿಯ ರಂಗಭೂಮಿ ಕಲಾವಿದೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ ಮಹಾಮನೆಗೆ ಚಾಲನೆ ನೀಡಿ, ರಂಗಭೂಮಿಯಲ್ಲಿ ನಾನು ಯಶಸ್ಸುಹೊಂದಲು ಗ್ರಾಮೀಣ ರೈತರೇ ಕಾರಣರಾಗಿದ್ದಾರೆ. ಕಂಪ್ಲಿ ನನ್ನ ಕಲೆಯ ತವರೂರಾಗಿದ್ದು ಚಿಕ್ಕೇನಕೊಪ್ಪ ಚನ್ನವೀರಶರಣರು, ಸಂಗೀತ ನಿರ್ದೇಶಕ ವಾದಿರಾಜ, ಮಾಸ್ತರರಾದ ಜೀರು ಶಿವಲಿಂಗಪ್ಪ, ಭರಮಲಿಂಗಪ್ಪ ಮೊದಲಾದವರು, ಕನ್ನಡ ಹಿತರಕ್ಷಕ ಸಂಘದ ಕಾರ್ಯಕ್ರಮಗಳಿಂದ ಬೆಳೆದಿದ್ದೇನೆ ಎಂದರು.
ಬಳ್ಳಾರಿಯ ಬಿಐಟಿಎಂ ಕಾಲೇಜಿನ ಬಿಇ ಪದವಿ ವಿದ್ಯಾರ್ಥಿನಿ ಎಚ್.ಎನ್.ಚೈತ್ರಾ ‘ಶರಣ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ’ ಉಪನ್ಯಾಸ ನೀಡಿ, ಕಾಯಕ ನಿಷ್ಠೆ ಕುಂದುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಿರಂತರ ಸಾಗಿದ್ದು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು. ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಾಲ್ಮೀಕಿ ಈರಣ್ಣ, ರಂಗಭೂಮಿ ಕಲಾವಿದೆ ಡಾ.ಕೆ.ನಾಗರತ್ನಮ್ಮ, ಉಪನ್ಯಾಸ ನೀಡಿದ ಎಚ್.ಎನ್.ಚೈತ್ರಾರನ್ನು ಪರಿಷತ್ತು ಮತ್ತು ನಂ.10ಮುದ್ದಾಪುರ ಬಯಲಾಟ ಕಲಾವಿದರಿಂದ ಗೌರವಿಸಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು.
ರಂಗಭೂಮಿ ಕಲಾವಿದರಾದ ಜೀರು ಮಲ್ಲಿಕಾರ್ಜುನ, ಯು.ದೊಡ್ಡಬಸಪ್ಪ, ದಾಸರ ವೆಂಕಟೇಶ, ಎನ್.ದುರುಗಣ್ಣ, ಜಂಗಾ ವೀರೇಶ, ಚನ್ನಬಸಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಕೆ.ಚಂದ್ರಶೇಖರ, ಎಸ್.ಶಾಮಸುಂದರರಾವ್, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಡಾ.ಬಿ.ಸುನೀಲ್, ಎಚ್.ನಾಗರಾಜ, ಸಜ್ಜೇದ ವೀರಭದ್ರ್ಪ, ಬಿ.ಎಂ.ರುದ್ರಯ್ಯ, ಚಂದ್ರಯ್ಯಸೊಪ್ಪಿಮಠ, ಕೆ.ಯಂಕಾರೆಡ್ಡಿ, ಸರೋಜಾ ಸೇರಿ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 