ಕಲಾವಿದರಿಗೆ ಒಂದೇ ಜಾತಿ, ನಾವೆಲ್ಲ ಭಾರತೀಯರು: ಝೈದ್ ಖಾನ್ ಪ್ರೀತಿಯ ಆರಾಧಕ ಈ ಕಲ್ಟ್
Artists have the same caste, we are all Indians: Zaid Khan is a beloved cult figure
ನಾವು ಭಾರತೀಯರು. ನಮ್ಮೆಲ್ಲರ ಜಾತಿ ಒಂದೇ. ನಾನು ಕಲೆಯನ್ನು ಪ್ರೀತಿಸುತ್ತೇನೆ. ನನ್ನ ಮೊದಲ ಚಿತ್ರ 'ಬನಾರಸ' ಹಾಗೂ ಇಂದಿನ 'ಕಲ್ಟ್' ಚಿತ್ರದಲ್ಲಿ ಕನ್ನಡ ಭಾಷೆಗೆ ಮತ್ತು ಕಲೆಗೆ ಆದ್ಯತೆ ನೀಡಿದ್ದೇನೆ' ಎಂದು ನಟ ಝೈದ್ ಖಾನ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ಕಲ್ಟ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
'ಕಲ್ಟ್ ಎಂದರೆ ಆರಾಧಕ ಅಥವಾ ಹೆಚ್ಚು ಪ್ರೀತಿಗೆ ಪಾತ್ರವಾಗುವವ ಎಂದು ಅರ್ಥ. ನಾನು ಈ ಚಿತ್ರದಲ್ಲಿ ಪ್ರೀತಿಯ ಆರಾಧಕ. ಹೆಚ್ಚು ಪ್ರೀತಿ ಮಾಡುವ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ಕಥೆ ಸಾಗುತ್ತದೆ. ಕಳೆದ ಮೂರು ತಿಂಗಳಿನಿಂದ ನಾನು ಪ್ರತಿ ಊರಿಗೂ ಹೋದಾಗ ಜನ ನನ್ನನ್ನು ಇಷ್ಟ ಪಟ್ಟವರು ದರ್ಶನ್ ಅಭಿಮಾನಿಗಳು, ನಮ್ಮ ತಂದೆ ಜಮೀರ್ ಖಾನ್ ಅವರ ಅಭಿಮಾನಿಗಳು ಹಾಗೂ 'ಕಲ್ಟ್' ಚಿತ್ರದ ಸೊಗಸಾದ ಹಾಡುಗಳಿಗೆ ಮನಸೋತ ಅಭಿಮಾನಿಗಳು. ಕಲ್ಟ್ ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಝೈದ್ ಖಾನ್ ತಿಳಿಸಿದ್ದಾರೆ.
ನಂತರ ಚಿತ್ರದ ನಿರ್ದೇಶಕ ಅನಿಲ್ ಕುಮಾರ್, 'ಝೈದ್ ಖಾನ್ ಹಣದಲ್ಲಿ ಮಾತ್ರ ಶ್ರೀಮಂತನಲ್ಲ. ಕಲೆಯಲ್ಲೂ ಶ್ರೀಮಂತ. ಕಲೆಯ ಮೇಲಿನ ಅತಿಯಾದ ಪ್ರೀತಿಯಿಂದಲೇ ಈ ಸಿನಿಮಾದಲ್ಲಿ ಮೂರು ಸೇಡ್ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ರೀಲೀಸ್ ಆದಮೇಲೆ ಝೈದ್ ಖಾನ್ ಒಬ್ಬ ಸ್ಟಾರ್ ನಟನಾಗಿ ಕನ್ನಡಕ್ಕೆ ಸಿಗುತ್ತಾರೆ. ಈ ಚಿತ್ರದ ಕಥೆಯೇ ಕಲ್ಟ್' ಎಂದು ಹೇಳಿದರು. ಅಂದ ಹಾಗೆಗೆ ಕಲ್ಟ್ ಚಿತ್ರತಂಡ ಕಳೆದ ಮೂರು ತಿಂಗಳಿಂದ ಕರ್ನಾಟಕದ 30 ಜಿಲ್ಲೆಗಳು, ತಾಲೂಕು, ಹೋಬಳಿ ಮಟ್ಟದಲ್ಲಿ ಸಂಚರಿಸಿ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದು, ಜನರ ಮನಸಿನಲ್ಲಿ 'ಕಲ್ಟ್' ಸಿನಿಮಾ ನೋಡುವಂತೆ ಮಾಡಿದೆ.
ಚಿತ್ರದ ನಾಯಕಿಯಾಗಿ ದಾವಣಗೆರೆ ಮೂಲದ ಮಲೈಕಾ ವಸುಪಾಲ್ ಅಭಿನಯ ಮಾಡಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ರಚಿತಾ ರಾಮ್ ಸಕ್ಕತ್ ಬೋಲ್ಡ್ ಆಗಿ ಖಡಕ್ ಪಾತ್ರ ನಿರ್ವಯಿಸಿದ್ದಾರೆ. ಇಬ್ಬರಿಗೂ ಚಿತ್ರದಲ್ಲಿ ಒಳ್ಳೆಯ ಸ್ಕ್ರೀನ್ ಪ್ಲೇಸ್ ಇದ್ದು, ಈಗಾಗಲೇ ಈ ನಟಿಯರ ಹಾಡುಗಳು ಜಾಲತಾಣದಲ್ಲಿ ಪ್ರಶಂಸೆ ಪಡೆದಿವೆ. ಲೋಕಿ ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಇದೇ ಜನವರಿ 23ರಂದು ರಾಜ್ಯಾದ್ಯಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಮುಖೇನ ಸುಪ್ರೀತ್ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 