ಸರ್ವಧರ್ಮಿರಲ್ಲಿ ಸಮನ್ವಯತೆ ಸಾರಿದ ಕಲಾವಿದ ಖಾಜಾಸಾಬ್ ಇನ್ನಿಲ್ಲ
Artist Khajasaab, who preached harmony among all religions, is no more
ಯಲಬುರ್ಗಾ 28: ತಾಲೂಕಿನ ಕರಮುಡಿ ಗ್ರಾಮದ ಖಾಜಾಸಾಬ್ ಹುಚ್ಚುಸಾಬ್ ಕಲ್ಲೂರು ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿರುವ ಇವರು ಮತ್ತೊಬ್ಬರನ್ನು ನೋಡಿ, ಕೇಳಿ ಕಲಿತವರು. ಭಾವಗೀತೆ. ಜನಪದ. ಭಜನೆ. ತತ್ವ ಪದ.ಭಕ್ತಿಗೀತೆ.ದೇಶ ಭಕ್ತಿಗೀತೆ. ರಂಗಗೀತೆ.ರಿವಾಯತಿ ಪದ.ಹಂತಿ ಪದ ಹೀಗೆ ನೂರಾರು ಹಾಡುಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡುತ್ತಿದ್ದರು. ಮೃದಂಗ.ತಪ್ಪಡಿ.ಕರಡಿ ಮಜಲು. ಚೌಗಡಾ ದಿಮ್ಮಿ.ವಾದ್ಯಗಳಲ್ಲಿ ಪರಿಣಿತಿಯನ್ನು ಹೊಂದಿದ್ದರು.ಕರಮುಡಿಯ ಶ್ರೀ ಕರವೀರಭದ್ರೇಶ್ವರ ಭಜನಾ ಸಂಘದ ಪದಾಧಿಕಾರಿಗಳಾಗಿ.ಶ್ರಾವಣ ಮಾಸದಲ್ಲಿ ನಿತ್ಯ ಸೂರ್ಯೋದಯಕ್ಕೂ ಮುನ್ನಓಣಿ ಓಣಿಗಳಲ್ಲಿ ತತ್ತ್ವ ಸಾರುವ ಭಜನೆಗಳನ್ನು ಹಾಡುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದರು.
ಇಟಗಿ.ದಮ್ಮೂರು.ನಿಡಗುಂದಿ. ಮುಧೋಳ. ಕರಮುಡಿ ಗ್ರಾಮಗಳಲ್ಲಿ ಆಯೋಜಿಸುವ ಪುರಾಣದಲ್ಲಿ ಪ್ರತಿ ವರ್ಷ ಸಂಗೀತ ಸೇವೆ ನೀಡುವ ಮೂಲಕ ದೈವಾನುಗ್ರಹಕ್ಕೆ ಪಾತ್ರರಾಗಿದ್ದರು. ಸರ್ವಧರ್ಮಗಳಲ್ಲಿ ಭಾಗಿಯಾಗಿ, ಸಮನ್ವಯತೆ ಸಾರಿ ಎಲ್ಲ ಕೋಮಿನವರನ್ನು ತನ್ನಂತೆ ಕಾಣುವ ಜನಮನ್ನಣೆಗೆ ಸಾಕ್ಷಿಯಾಗಿದ್ದರು. ಉತ್ತರ ಕಾರ್ನಾಟಕ ಭಾಗದಲ್ಲಿ ಮಾರುತೇಶ ಮಾಂಡ್ರೆ ರಚಿಸಿದ ’ಹುಚ್ಚಿರೇಶ್ವರ ಮಹಾತ್ಮ’ ನಾಟಕ ಸುಪ್ರಸಿದ್ದವಾಗಿದ್ದು ಇವರಿಂದ ಈ ನಾಟಕದ ಪುಸ್ತಕವನ್ನುಕಂಠ ಪಾಠ ಮಾಡಿ, ಅದರಲ್ಲಿ ಹುಚೀರ್ಪಜ್ಜನ ಪಾತ್ರಕ್ಕೆಜೀವತುಂಬುವ ಮೂಲಕ ಥೇಟ್ ಹುಚ್ಚಿರ್ಪಜ್ಜನ ಪ್ರತಿರೂಪವಾಗಿ ಅಭಿನಯಿಸುವ ಮೂಲಕ ಕೊಪ್ಪಳ, ಯಲಬುರ್ಗಾ, ಗದಗ, ಬಾಗಲಕೋಟೆ, ಇಳಕಲ್, ರೋಣ ಸೇರಿ ಅನೇಕ ತಾಲೂಕಿನಗ್ರಾಮೀಣ ಪ್ರದೇಶಗಳಲ್ಲಿನಾಟಕ ಪ್ರದರ್ಶಿಸಿದ್ದರು. ಪೈಗಂಬರವಾಸಿ. ಸೆ. 27 ರಂದು ತಾಲೂಕಿನಕರಮುಡಿಗ್ರಾಮದ ನಿವಾಸಿ ಹಾಗೂ ಹಿರಿಯ ಕಲಾವಿದ ಖಾಜೇಸಾಬ ಹುಚ್ಚುಸಾಬ ಕಲ್ಲೂರು(60) ಅವರು ಶನಿವಾರ ದಿವಸ ಪೈಗಂಬರವಾಸಿಯಾದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 