ರಾಜ್ಯದಲ್ಲೇ ಮೊದಲಬಾರಿಗೆ ರೈತರಿಗೆ ಕೃತಕ ತಂತ್ರಜ್ಞಾನ ತರಬೇತಿ : ಶಿವನಗೌಡ

ರಾಜ್ಯದಲ್ಲೇ ಮೊದಲಬಾರಿಗೆ ರೈತರಿಗೆ ಕೃತಕ ತಂತ್ರಜ್ಞಾನ ತರಬೇತಿ : ಶಿವನಗೌಡ Artificial Intelligence training for farmers for the first time in the state: Shivanagouda

 ಲೋಕದರ್ಶನ ವರದಿ  

 ಇಂಡಿ 06 : ಕಬ್ಬು ಬೆಳೆಗೆ ಕೃತಕ ತಂತ್ರಜ್ಞಾನ ಬಳಸಿದರೆ ಮಣ್ಣಿನ ತೇವಾಂಶ ಮಳೆಯ ಮುನ್ಸೂಚನೆ, ನೀರು ಬಿಡುವ ಪ್ರಮಾಣ, ಮಣ್ಣಿನಲ್ಲಿರುವ ನ್ಯೂಟ್ರಿಯಂಟ್ಸಗಳು, ನೀರಿನ ಪಿಎಚ್ ಬೆಲೆ, ಕಬ್ಬಿಗೆ ಬರುವ ರೋಗಗಳು, ಕೀಟಗಳು, ಕಳೆ, ಗೊಬ್ಬರ ಎಷ್ಟು ಹಾಕಬೇಕು ಇತ್ಯಾದಿ ಮಾಹಿತಿ ದೊರೆಯುತ್ತದೆ ಹೀಗಾಗಿ ಕಬ್ಬು ಬೆಳೆ ಅಧಿಕ ಬೆಳೆಯಲು ಸಾಧ್ಯ ಎಂದು ವಿಜಯಪೂರ ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು ತಾಲೂಕಿನ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೃಷಿ ಇಲಾಖೆಯಿಂದ 2026-27 ನೇ ಸಾಲಿನ ಪಿಎಂ ಆರ್ ಕೆ ವಿ ವಾಯ್ ಯೋಜನೆ ಅಡಿಯಲ್ಲಿ ಹಿರೇಬೇವನೂರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಕಬ್ಬಿನ ಅರ್ಥಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕೃತಕ ತಂತ್ರಜ್ಞಾನ ಬಳಕೆ ಕುರಿತು ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಎ.ಪಿ.ಬಿರಾದಾರ ಮಾತನಾಡಿ ಕೃತಕ ತಂತ್ರಜ್ಞಾನ ಬಳಕೆಯಿಂದ ಕಬ್ಬು 20 ರಿಂದ 30 ಪ್ರತಿಶತ ಇಳುವರಿ ಹೆಚ್ಚು ಬರುತ್ತದೆ. ಜಗತ್ತಿನಲ್ಲಿ ಬ್ರೇಜಿಲ್ ಕಬ್ಬು ಬೆಳೆಯುವಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಭಾರತ ದ್ವೀತಿಯ ಸ್ಥಾನದಲ್ಲಿದೆ. 

ಭಾರತದಲ್ಲಿ ಉತ್ತರ​‍್ರದೇಶ ಪ್ರಥಮ ಮಹಾರಾಷ್ಟ್ರದ ದ್ವೀತಿಯ ಮತ್ತು ಕರ್ನಾಟಕ ತೃತೀಯ ಸ್ಥಾನದಲ್ಲಿವೆ. ಕಬ್ಬಿನ ರವದಿ ಸುಡದೇ ಮಣ್ಣಿನಲ್ಲಿ ಕೊಳೆಸಬೇಕು, ಡ್ರೀಪ್ ನೀರಾವರಿ ಮಾಡಬೇಕು, ಗಾಳಿಯ ಅಂಶ ನೀರಿನ ಅಂಶ ಸಮಪ್ರಮಾಣದಲ್ಲಿ ಇರಬೇಕು. ಸಾವಯುವ ಇಂಗಾಲ ಪ್ರಮಾಣ 0.5 ಇರಬೇಕು. ನೀರಿನ ನಿರ್ವಹಣೆ, ಗೊಬ್ಬರ ಪೂರೈಕೆ ಪೋಷಕಾಂಶ ನಿರ್ವಹಣೆ ಸರಿಯಾಗಿರಬೇಕಾದರೆ ನಾವು ಸಧಾರಿತ ಕೃತಕ ತಂತ್ರಜ್ಞಾನದಿಂದ ಕಬ್ಬನ್ನು ಹೆಚ್ಚು ಇಳುವರಿ ಪಡೆಯಲು ಸಾದ್ಯ ಎಂದರು.ಇಂಡಿಯ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಮಾಡಿನಾಡಿ ಕೃಷಿ ಇಲಾಕೆಯಿಂದ ಎರಡುವರೆ ಲಕ್ಷ ಮತ್ತು ಹಿರೇಬೇವನೂರ ಇಂಡಿಯನ್ ಸಕ್ಕರೆ ಕಾರ್ಖಾನೆಯಿಂದ ಎರಡು ವರೆ ಲಕ್ಷ ರೂ ನಲ್ಲಿ 600 ರೈತರಿಗೆ ಮೊಬೈಲನಲ್ಲಿ ಕೃತಕ ತಂತ್ರಜ್ಞಾನದ ಆಪ್ ನೀಡಲಾಗುವದು.