ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ ಕಾರ್ಯಕ್ರಮ

ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ ಕಾರ್ಯಕ್ರಮ Artha Loka program of the hymns of Lokguru Kanakadasa

                ಬ್ಯಾಡಗಿ 22 : ತಾಲೂಕಿನ ಕಾಗಿನೆಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ  ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ ಕಾರ್ಯಕ್ರಮ ಜರುಗಿತು.     ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು  ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ ಎನ್ನುವ ವಿನೂತನ ಕೀರ್ತನೆಗಳ ವ್ಯಾಖ್ಯಾನ ಕಾರ್ಯಕ್ರಮ ಪ್ರಾರಂಭಿಸಿದ್ದು,ಪ್ರತಿ  ಕನಕದಾಸರ ಐಕ್ಯ ಮಂಟಪದಲ್ಲಿ ಕನಕದಾಸರ ಸನ್ನಿಧಿಯಲ್ಲಿ ಕನಕದಾಸರ ಒಂದೊಂದು ಕೀರ್ತನೆಗೆ ಅರ್ಥ ವಿವರಣೆ ನೀಡುವ ಕಾರ್ಯಕ್ರಮ ಇದಾಗಿದೆ.ಸ್ವತಃ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರೇ ಕನಕದಾಸರ ಕೀರ್ತನೆಗಳ ವ್ಯಾಖ್ಯಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣತೆ ಹೆಚ್ಚಿದರು.ಕನಕದಾಸರ ಸನ್ನಿಧಿಯಲ್ಲಿ  ವರವ ಕೊಡು ಎನಗೆ ವಾಗ್ದೇವಿ ಕೀರ್ತನೆಯ ಅರ್ಥವಿವರಣೆ  ನಡೆಯಿತು.

                ಪ್ರಾಧಿಕಾರದ ಸಂಶೋಧಕರಾದ ಡಾ. ಜಗನ್ನಾಥ ಗೇನಣ್ಣನವರ ಅವರು ಕೀರ್ತನೆಯನ್ನು ಹಾಡಿದರು.ಲೆಕ್ಕಾಧಿಕ್ಷಕರಾದ ಸಿ.ಬಿ ಸಪ್ಪಿನ ಅವರು ಕನಕದಾಸರ ಕೀರ್ತನೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪ್ರಾಧಿಕಾರದ ಸಿಬ್ಬಂದಿಯವರಾದ ಅಶೋಕ ಗಾಜಿ ಸ್ವಾಗತಿಸಿದರು.ಸಂಗಮೇಶ ವಾಲಿಕಾರ ವಂದಿಸಿದರು. ಆಯುಕ್ತರ ಆಪ್ತಸಹಾಯಕ ನವೀನ್ ಕಾರ್ಯಕ್ರಮ ನಿರೂಪಿಸಿದರೆ ಪ್ರಾಧಿಕಾರದ ಫೋಟೋಗ್ರಾಫರ್ ವಿಜಯ್ ಕಾರ್ಯಕ್ರಮದ ರೆಕಾರ್ಡಿಂಗ್ ಮಾಡಿದರು. ಕಾಗಿನೆಲೆ ಮತ್ತು ಬಾಡದ ಸಿಬ್ಬಂದಿಯವರಿಗೆ ಹಾಗೂ ಪ್ರೇಕ್ಷಕರುಗಳಿಗೆ ಕುಮಾರಸ್ವಾಮಿ ಕುಲಕರ್ಣಿ ಅವರು ಉಪಹಾರದ ವ್ಯವಸ್ಥೆ ಮಾಡಿದ್ದರು.