’ಒಟ್ಟಿಗೆ ಒಂದಾಗಿ’ ಚಿತ್ರಕಲಾ ಸ್ಪರ್ಧೆ: 90ಕ್ಕೂ ಅಧಿಕ ಮಕ್ಕಳು ಭಾಗಿ
Art Competition: Over 90 children participated
ಧಾರವಾಡ 28: ಎಲ್ಲರ ಕೈಯಲ್ಲೂ ಬಿಳಿ ಹಾಳೆ. ಅದರ ಮೇಲೊಂದು ಒಳ್ಳೆಯ ಚಿತ್ರ ಬಿಡಿಸುವ ಆಲೋಚನೆ. ಬಣ್ಣಗಳಿಗೆ ನೀರು ಹಾಕಿ, ಕುಂಚದಿಂದ ಕೆಲವರು ಚಿತ್ರ ರಚಿಸಿದರೆ,ಇನ್ನೂ ಕೆಲವರು ಕ್ರಿಯಾನ್, ಸ್ಕೆಚ್ ಪೆನ್ನುಗಳನ್ನು ಬಳಸಿ ತಮ್ಮ ಪರಿಕಲ್ಪನೆಗಳಿಗೆ ಚಿತ್ರದ ರೂಪ ಕೊಟ್ಟರು. ’ಒಟ್ಟಿಗೆ ಒಂದಾಗಿ’ ಸ್ಪರ್ಧೆಯ ವಿಷಯದ ಅನುಗುಣವಾಗಿ ಚಿತ್ರಗಳನ್ನು ಬಿಡಿಸುವದರಲ್ಲಿ ತಲ್ಲೀನರಾಗಿದ್ದರು.
ಧಾರವಾಡ ಲಯನ್ಸ್ ಸಂಸ್ಥೆವತಿಯಿಂದ ವಿದ್ಯಾಗಿರಿಯ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 90ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಮಕ್ಕಳಿಗೆ ಹೆಚ್ಚು ಚಿತ್ರ ಕಲೆಯನ್ನು ಅಭ್ಯಾಸ ಮಾಡಿಸಬೇಕು. ಮಕ್ಕಳಿಗೆ ಸಾಮಗ್ರಿಗಳನ್ನು ಕೊಟ್ಟು, ಮುಕ್ತ ಅವಕಾಶ ನೀಡಿದರೆ,ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ ಆಗಲಿದೆ ಎಂದು ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಸಲಹೆ ನೀಡಿದರು.
ಇಂದಿನ ಜಗತ್ತಿನಲ್ಲಿ ನಾವೀನ್ಯತೆ ಬೇಕಾಗಿದೆ.ಹೊಸದನ್ನು ಕಲಿಯುವ, ಹೊಸದನ್ನು ಸೃಷ್ಟಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಚಿತ್ರಕಲೆ ಅತಿದೊಡ್ಡ ಮಾಧ್ಯಮವಾಗಿದೆ ಎಂದು ಚಿತ್ರ ಕಲಾವಿದೆ ಅಮೃತಾ ಜೋಶಿ ಹೇಳಿದರು.
ವಲಯ ಅಧ್ಯಕ್ಷೆ ಶೈಲಾ ಕರಗುದರಿ,ಲಯನ್ಸ್ ಕಾರ್ಯದರ್ಶಿ ಸುರೇಶ ಗುದಗನವರ, ಖಜಾಂಚಿ ಶ್ರೀಕಾಂತ ದೇವಗಿರಿ, ಪ್ರಾಂಶುಪಾಲೆ ರೇಣು ಪಾಟೀಲ, ಡಾ.ರಾಜಶ್ರೀ ಗುದಗನವರ,ನೀತಾ ಕೊಪ್ಪಿಕರ, ಕಮಲಾಕ್ಷಿ ಸಣ್ಣಕ್ಕಿ,ಚಿತ್ರ ಕಲಾ ಶಿಕ್ಷಕ ಲಕ್ಷ್ಮೀನಾರಾಯಣ ವೈ,ನಸೀಮ ಜಮಖಂಡಿ, ಗೀತಾಂಜಲಿ ಹಿರೇಮಠ ಇತರರು ಇದ್ದರು.
ಮಕ್ಕಳ ಜೊತೆಗೆ ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದರು.ಒಂದೂವರೆ ಗಂಟೆಗಳ ಅವಧಿಯಲ್ಲಿ ಅದ್ಭುತ ಚಿತ್ರಗಳನ್ನು ಅನಾವರಣ ಮಾಡಿದರು.ವಿಷಯ ಒಂದೇ ಆಗಿದ್ದರೂ,ಪ್ರತಿಯೊಂದು ಚಿತ್ರಗಳು ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು ವಿಶೇಷವಾಗಿತ್ತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 