ಪಾಕ್ ಪಡೆಯಿಂದ ಕದನವಿರಾಮ ಉಲ್ಲಂಘನೆ, ಅಪ್ರೊಚೋದಿತ ಗುಂಡಿನ ದಾಳಿ

ಶ್ರೀನಗರ, ಡಿಸೆಂಬರ್ 18 ಪಾಕಿಸ್ತಾನದ ಸೇನೆ ಕದನ ವಿರಾಮ ಉಲ್ಲಂಘಿಸಿ  ಕುಪ್ವಾರಾದ ಗಡಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡು  ಮತ್ತು ಶೆಲ್ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.ಸೇನಾ ನೆಲೆಗಳು  ಮತ್ತು  ನಾಗರಿಕ ಪ್ರದೇಶಗಳನ್ನು ಪ್ರಮುಖ ಗುರಿಯಾಗಿಟ್ಟುಕೊಂಡು ಪಾಕ್ ಪಡೆಗಳು  ಕರ್ನಾ ಸೆಕ್ಟರ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿವೆ.  ಒಂದು ವಾರದಿಂದ ಹಿಮದ ಕಾರಣ  ಜಿಲ್ಲಾ ಪ್ರಧಾನ ಕಚೇರಿ ಕುಪ್ವಾರಾದಿಂದ ಬೇರ್ಪಟ್ಟಿದೆ.  ಇದಕ್ಕೆ ಪ್ರತಿಯಾಗಿ ಭಾರತಿಯ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿವೆ ನಿಂಯತ್ರಣ ರೇಖೆಯಾದ್ಯಂತ ಪಾಕ್  ನೆಲೆಯನ್ನು ಗುರಿಯಾಗಿಸಿಕೊಂಡು  ಪ್ರತೀಕಾರ ತೀರಿಸಿಕೊಂಡಿವೆ ಎಂದು ಅವರು ಹೇಳಿದರು.ಪಾಕ್ ಶೆಲ್ ದಾಳಿಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು. ಆದರೆ, ಯಾರಿಗೂ ಗಾಯಗಳಾಗಿಲ್ಲ. ಪಾಕಿಸ್ತಾನ-ಆಕ್ರಮಿತ-ಕಾಶ್ಮೀರ (ಪಿಒಕೆ) ಯಿಂದ ದೇಶದ ಒಳಕ್ಕೆ  ನುಸುಳಲು ಉಗ್ರರಿಗೆ ರಕ್ಷಣೆ ನೀಡಲು ಪಾಕ್ ಪಡೆ ಗುಂಡಿನ ದಾಳಿ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ, ಅಲ್ಲಿ ಹೆಚ್ಚಿನ ಸಂಖ್ಯೆಯ ತರಬೇತಿ ಪಡೆದ ಉಗ್ರರು ಒಳನುಸುಳಲು ಅವಕಾಶಕ್ಕಾಗಿ  ಕಾಯುತ್ತಿದ್ದಾರೆ ಎನ್ನಲಾಗಿದೆ.