ರಸ್ತೆ ಬೀದಿಗಳಲ್ಲಿ ಕಸ ಹಾಕುತ್ತೀರಾ ಸಿ ಸಿ ಕ್ಯಾಮರಾದಲ್ಲಿ ಸೆರೆಯಾದರೆ 1000 ದಂಡಕ್ಕೆ ಗುರಿಯಾಗುವಿರಿ ಎಚ್ಚರಿಕೆ
Are you littering on the streets? If caught on CCTV camera, you will be fined 1000, warning
ಲೋಕದರ್ಶನ ವರದಿ
ಗದಗ 12 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 20, 23,ಹಾಗೂ 25 ನೇ ಕೂಡು ವಾರ್ಡಗಳ ಮಧ್ಯವರ್ತಿ ಸ್ಥಳವಾದ ಹನಮನ ಗರಡಿ 3 ನೇ ನಂಬರ್ ಶಾಲೆಯ ಹತ್ತಿರದಲ್ಲಿನ ಸಾರ್ವಜನಿಕ ಮೂತ್ರಾಲಯದ ಪಕ್ಕದಲ್ಲಿಯ ಕುಡಿಯುವ ನೀರಿನ ಸರಬರಾಜು ಮಾಡುವ ವಾಲ್ವ್ ಮೇಲೆಯೇ ಕಸ ಹಾಕುತ್ತಿರುವರು.ಆದರೆ ಕಸ ವಿಲೇವಾರಿಗಾಗಿಯೇ ಎಂದು ಗೌರವಾನ್ವಿತ ಗದಗ ಬೆಟಗೇರಿ ನಗರಸಭೆಯ ವತಿಯಿಂದ ಪೌರ ಕಾರ್ಮಿಕರ ಸಹಕಾರದೊಂದಿಗೆ ಕಸ ವಿಲೇವಾರಿ ವಾಹನದಲ್ಲಿ ಬಡಾವಣೆಯ ಪ್ರತಿಯೊಂದು ಮನೆ ಮನೆಯಿಂದಲೂ ಕಸವನ್ನು ಸಂಗ್ರಹಿಸಿಕೊಂಡು ವಿಲೇವಾರಿ ಮಾಡುವ ಕಾರ್ಯ ನಿರಂತರವಾಗಿ ಜರುಗುತ್ತಿದ್ದರೂ ಪ್ರಜ್ಞಾಹೀನ ನಾಗರಿಕರು ಮಾತ್ರ ಕಸವನ್ನು ಕುಡಿಯುವ ನೀರು ಸರಬರಾಜು ಮಾಡುವ ವಾಲ್ವ್ ಮೇಲೆಯೇ ಕಸವನ್ನು ನಿರಾತಂಕವಾಗಿ ಸುರಿಯುತ್ತಿರುವದನ್ನು ಮನಗಂಡ ಬಡಾವಣೆಯ ಪ್ರಮುಖರಾದ ರಾಘವೇಂದ್ರ ಪಾಲನಕರ ರವರ ನಿರಂತರ ಪರಿಶ್ರಮದ ಮೂಲಕ ಅವೈಜ್ಞಾನಿಕ ಕಸ ವಿಲೇವಾರಿಯನ್ನು ತಡೆಯಲು ಪ್ರಯತ್ನ ಮಾಡಿದರೂ ಕೂಡಾ ಫಲಪ್ರದವಾಗದಿರುವುದನ್ನು ಮನಗಂಡು ಗದಗ ಬೆಟಗೇರಿ ನಗರಸಭೆಯ ಸಹಕಾರದೊಂದಿಗೆ ಬ್ಲಾಕ್ ಸ್ಪಾಟ್ ಗಳಲ್ಲಿ ಮೂರನೇ ಕಣ್ಣು ಎಂದೇ ಖ್ಯಾತವಾಗಿರುವ ಸಿ ಸಿ ಕ್ಯಾಮರಾ ಅಳವಡಿಸುವ ಮೂಲಕ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವವರನ್ನು ಗುರುತಿಸಲು ಮುಂದಾಗಿರುವರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 