ಅರಸು ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಶ್ರಮ: ಶ್ವೇತಾ ಬೀಡಿಕರ

ಅರಸು ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಶ್ರಮ: ಶ್ವೇತಾ ಬೀಡಿಕರ Arasu strives for the development of backward classes: Shweta Beedikar

ಲೋಕದರ್ಶನ ವರದಿ 

ಜಮಖಂಡಿ 21: ಡಿ, ದೇವರಾಜ ಅರಸು ಸಾಮಾಜಿಕವಾಗಿ ಸಮಾಜದ ಸುಧಾರಕರಾಗಿ, ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಹಾಗೂ ಶೈಕ್ಷಣಿಕವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ನಾಡಿಗೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಎಸಿ ಶ್ವೇತಾ ಬೀಡಿಕರ ಹೇಳಿದರು. 

ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ಡಿ, ದೇವರಾಜ ಅರಸು 111ನೇ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,  ನಾವು ನೆಲೆ ಕಂಡುಕೊಳ್ಳಲು ಹಲವಾರು ಮಹನಿಯರು ದೇಶಕ್ಕಾಗಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ, ಅವರನ್ನು ಸ್ಮರಿಸಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ತಹಶೀಲ್ದಾರ ಅನೀಲ ಬಡಿಗೇರ ಮಾತನಾಡಿ, ಅರಸು ಅಂದು ಕೈಗೊಂಡ ಹಲವಾರು ಯೋಜನೆಗಳು ಇಂದು ಅದರ ಫಲ ಸಿಕ್ಕಿದೆ, ಸರ್ಕಾರ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ಮುನ್ನೆಡೆಗೆ ಬರಬೇಕು, ತಾವು ಮಾಡುವ ಕಾರ್ಯಗಳನ್ನು ನಿಷ್ಠೆಯಿಂದ ಮಾಡಬೇಕು ಅದು ದೇಶಕ್ಕೆ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು. 

ಖ, ದೇವರಾಜ ಅರಸು ಭಾವಚಿತ್ರ ಮೆರವಣಿಗೆಯನ್ನು ಸಕಲ ವಾಧ್ಯ ಮೇಳ, ಮಹಿಳೆಯರು ಕುಂಭ ಹೊತ್ತುಕೊಂಡು. ಹಳೆ ತಹಶೀಲ್ದಾರ ಕಾರ್ಯಾಲಯದಿಂದ ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ ತಾಲ್ಲೂಕು ಆಡಳಿತ ಸೌಧದವರೆಗೆ ಬಂದರು. 

ತಾಲೂಕು ಕಲ್ಯಾಣ ಅಧಿಕಾರಿ ಕೆ,ಎನ್,ಮರನೂರ, ವಕೀಲ ನಿಂಗಪ್ಪ ಗಸ್ತಿ, ನಿಲಯ ಪಾಲಕ ಬಸವರಾಜ ಆಲಗೂರ, ಸುಮಿತ್ರಾ ಮಗದುಮ, ಅಶ್ವೀನಿ ರಬಕವಿ, ಅನಿತಾ ಶ್ರೀಗೊಂಡ, ಭ್ಯಾಗ್ಯಶ್ರೀ ಕದಂ, ಅಪ್ಪಾಜಿ ಜಾಧವ, ಸಿತಲ್ ಯಲಗುದ್ರಿ, ಮಹೇಶ ನಾಯಕ, ವೀರೇಶ ಬಡಿಗೇರ ಸೇರಿದಂತೆ ಅನೇಕರು ಇದ್ದರು.