ವಿದ್ಯಾರ್ಥಿಗಳ ಅಡುಗೆ ಕೌಶಲ್ಯಕ್ಕೆ ಮೆಚ್ಚುಗೆ : ಆರೋಗ್ಯಕರ ಆಹಾರದ ಮಹತ್ವದ ಅರಿವು

ವಿದ್ಯಾರ್ಥಿಗಳ ಅಡುಗೆ ಕೌಶಲ್ಯಕ್ಕೆ ಮೆಚ್ಚುಗೆ : ಆರೋಗ್ಯಕರ ಆಹಾರದ ಮಹತ್ವದ ಅರಿವು Appreciation for students' cooking skills: Awareness of the importance of healthy food

ಲೋಕದರ್ಶನ ವರದಿ 

                                                                   ಭಾರತೀಯ ಭಾಷಾ ಶಿಬಿರ ಅಂಗವಾಗಿ ಸರಳ ಅಡುಗೆ ಸ್ಪರ್ಧೆ  

 ಮಹಾಲಿಂಗಪುರ 12: ಭಾರತೀಯ ಭಾಷಾ ಶಿಬಿರದ ಅಂಗವಾಗಿ ಶಾಲೆಯಲ್ಲಿ ಸರಳ ಅಡುಗೆ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.  

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಪೌಷ್ಟಿಕ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಶಾಲೆಗೆ ತಂದು ಪ್ರದರ್ಶಿಸಿದರು. ತಾವು ತಯಾರಿಸಿದ ಪ್ರತಿಯೊಂದು ಆಹಾರದ ವೈಶಿಷ್ಟ್ಯ, ಪೌಷ್ಟಿಕಾಂಶ, ಆರೋಗ್ಯದ ಮೇಲಿನ ಪ್ರಯೋಜನಗಳು ಹಾಗೂ ತಯಾರಿಸುವ ವಿಧಾನವನ್ನು ತೀಪುಗಾರರು ಮತ್ತು ಉಪಸ್ಥಿತರಿದ್ದವರಿಗೆ ವಿವರಿಸಿ ಮೆಚ್ಚುಗೆ ಪಡೆದರು.  

ಸ್ಪರ್ಧೆಯನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ವೀಕ್ಷಿಸಿ ವಿದ್ಯಾರ್ಥಿಗಳ ಅಡುಗೆ ಕೌಶಲ್ಯವನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಸೃಜನಶೀಲತೆ, ಆರೋಗ್ಯಕರ ಆಹಾರದ ಮಹತ್ವ ಹಾಗೂ ಉತ್ತಮ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜೋಡಟ್ಟಿ ಸರ್, ಮುಖ್ಯೋಪಾಧ್ಯಾಯರಾದ ಧನಂಜಯ ಕುಲಕರ್ಣಿ, ಶಿಕ್ಷಕರಾದ ಎನ್‌.ಬಿ. ಬೆಟಗೇರಿ, ಆರ್‌.ಎಸ್‌. ಬೀಳಗಿ, ಎಂ.ಜಿ. ಅಲ್ಲಖಾನ್, ಪಿ.ಎ. ಖಾನವಿಲ್ಕರ್, ಜಿ.ಎಂ. ಅಂಗಡಿ, ಎಂ.ಎಸ್‌. ಮಲಬಾದಿ ಹಾಗೂ ಅತಿಥಿ ಶಿಕ್ಷಕರಾದ ಆರ್‌.ವೈ. ಕರಿಗಾರ, ಎಸ್‌.ಎ. ಬಡಿಗೇರ, ಎಸ್‌.ಎಂ. ಕುಂದರಗಿ, ಕಪರಟ್ಟಿ, ಬಿ.ಎಲ್‌. ಮನ್ನಿಕೇರಿ ಮತ್ತು ರುಕ್ಮವ್ವ ಲಮಾಣಿ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಂಭುಲಿಂಗ ಫಕೀರಪುರ, ಸದಸ್ಯರಾದ ಅಪ್ಪಾಸಾಬ ನಾಲಬಂದ, ಮಹಾದೇವ ಉತ್ನಾಳ, ರಂಗಪ್ಪ ನಾಯಕ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಶಾಲೆಯ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.  

ವಿದ್ಯಾರ್ಥಿಗಳ ಸೃಜನಶೀಲತೆ, ಆರೋಗ್ಯಕರ ಆಹಾರದ ಬಗ್ಗೆ ಹೊಂದಿರುವ ಅರಿವು ಹಾಗೂ ಆತ್ಮವಿಶ್ವಾಸದಿಂದ ಅಡುಗೆ ಪದಾರ್ಥಗಳನ್ನು ಪರಿಚಯಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.