ವಿಜಯನಗರ ಜಿಲ್ಲಾ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ವಿಜಯನಗರ ಜಿಲ್ಲಾ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ  Appointment of new office-bearers for the Vijayanagara District Kuruba Sangha

ಹೊಸಪೇಟೆ 20: ನಗರದ ಶಾಂತಿ ಸಾಗರ ಫಂಕ್ಷನ್ ಹಾಲ್ನಲ್ಲಿ ವಿಜಯನಗರ ಜಿಲ್ಲಾ ಕುರುಬರ ಸಂಘದ ನೂತನ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಸಮಾರಂಭ ನಡೆಯಿತು.  ಜಿಲ್ಲಾ ಅಧ್ಯಕ್ಷರಾಗಿ ಕೆ.ಬಿ. ವೇದಮೂರ್ತಿ ಅವರನ್ನು ನೇಮಕ ಮಾಡಲಾಯಿತು. ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಮಜ್ಜಿಗಿ ನಾಗರಾಜ್, ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಕೆ.ಎನ್‌., ಖಜಾಂಚಿಯಾಗಿ ಎನ್‌. ಜ್ಞಾನಪ್ಪ, ಉಪಾಧ್ಯಕ್ಷರಾಗಿ ಹೆಚ್‌. ಬಸವರಾಜಪ್ಪ ಹಾಗೂ ಕುರಿ ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಮೂಗಪ್ಪ, ಕಾರ್ಯದರ್ಶಿಗಳಾಗಿ ಲೇಪಾಕ್ಷಿ ಮತ್ತು ಡಿ. ಉಮಾಶಂಕರ್, ಸಂಘಟನಾ ಕಾರ್ಯದರ್ಶಿಗಳಾಗಿ ಗಂಟೆ ಸೋಮಶೇಖರ್ ಹಾಗೂ ಪ್ರಕಾಶ್ ನಡುವಿನಹಳ್ಳಿ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.  ಕರ್ನಾಟಕ ಪ್ರದೇಶ ರಾಜ್ಯ ಕುರುಬರ ಸಂಘದ ಆದೇಶದಂತೆ ಎಲ್‌. ಸಿದ್ದನಗೌಡ, ಕೆ.ಎಂ. ಹಾಲಪ್ಪ, ಕಾಲ್ಟಿ ಹನುಮಂತಪ್ಪ, ಪರಶುರಾಮಪ್ಪ, ಮರಿ ರಾಮಣ್ಣ, ಕೆ.ಎಂ. ಕೆಂಚಲಿಂಗಪ್ಪ ಹಾಗೂ ಬಿ. ಭರಮಪ್ಪ ಅವರ ಸಮ್ಮುಖದಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಯಿತು.  ಕಾರ್ಯಕ್ರಮವು ಕೆ.ಎಂ. ಹಾಲಪ್ಪ ಮತ್ತು ಎಲ್‌. ಸಿದ್ದನಗೌಡ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.