ವಿಜಯನಗರ ಜಿಲ್ಲಾ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
Appointment of new office-bearers for the Vijayanagara District Kuruba Sangha
ಹೊಸಪೇಟೆ 20: ನಗರದ ಶಾಂತಿ ಸಾಗರ ಫಂಕ್ಷನ್ ಹಾಲ್ನಲ್ಲಿ ವಿಜಯನಗರ ಜಿಲ್ಲಾ ಕುರುಬರ ಸಂಘದ ನೂತನ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಸಮಾರಂಭ ನಡೆಯಿತು. ಜಿಲ್ಲಾ ಅಧ್ಯಕ್ಷರಾಗಿ ಕೆ.ಬಿ. ವೇದಮೂರ್ತಿ ಅವರನ್ನು ನೇಮಕ ಮಾಡಲಾಯಿತು. ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಮಜ್ಜಿಗಿ ನಾಗರಾಜ್, ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಕೆ.ಎನ್., ಖಜಾಂಚಿಯಾಗಿ ಎನ್. ಜ್ಞಾನಪ್ಪ, ಉಪಾಧ್ಯಕ್ಷರಾಗಿ ಹೆಚ್. ಬಸವರಾಜಪ್ಪ ಹಾಗೂ ಕುರಿ ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಮೂಗಪ್ಪ, ಕಾರ್ಯದರ್ಶಿಗಳಾಗಿ ಲೇಪಾಕ್ಷಿ ಮತ್ತು ಡಿ. ಉಮಾಶಂಕರ್, ಸಂಘಟನಾ ಕಾರ್ಯದರ್ಶಿಗಳಾಗಿ ಗಂಟೆ ಸೋಮಶೇಖರ್ ಹಾಗೂ ಪ್ರಕಾಶ್ ನಡುವಿನಹಳ್ಳಿ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು. ಕರ್ನಾಟಕ ಪ್ರದೇಶ ರಾಜ್ಯ ಕುರುಬರ ಸಂಘದ ಆದೇಶದಂತೆ ಎಲ್. ಸಿದ್ದನಗೌಡ, ಕೆ.ಎಂ. ಹಾಲಪ್ಪ, ಕಾಲ್ಟಿ ಹನುಮಂತಪ್ಪ, ಪರಶುರಾಮಪ್ಪ, ಮರಿ ರಾಮಣ್ಣ, ಕೆ.ಎಂ. ಕೆಂಚಲಿಂಗಪ್ಪ ಹಾಗೂ ಬಿ. ಭರಮಪ್ಪ ಅವರ ಸಮ್ಮುಖದಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಯಿತು. ಕಾರ್ಯಕ್ರಮವು ಕೆ.ಎಂ. ಹಾಲಪ್ಪ ಮತ್ತು ಎಲ್. ಸಿದ್ದನಗೌಡ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 