ನಗರಸಭೆ ಪ್ರೌಢಶಾಲೆಗೆ ನಾಲ್ಕು ಶಿಕ್ಷಕರ ನೇಮಕ : ಪೌರಾಯುಕ್ತರಿಗೆ ಹಿತರಕ್ಷಣಾ ಸಮಿತಿಯಿಂದ ಅಭಿನಂದನಾ ಸನ್ಮಾನ

ನಗರಸಭೆ ಪ್ರೌಢಶಾಲೆಗೆ ನಾಲ್ಕು ಶಿಕ್ಷಕರ ನೇಮಕ : ಪೌರಾಯುಕ್ತರಿಗೆ  ಹಿತರಕ್ಷಣಾ ಸಮಿತಿಯಿಂದ ಅಭಿನಂದನಾ  ಸನ್ಮಾನ Appointment of four teachers to the Municipal High School: The Municipal Commissioner was felicitate

ನಗರಸಭೆ ಪ್ರೌಢಶಾಲೆಗೆ ನಾಲ್ಕು ಶಿಕ್ಷಕರ ನೇಮಕ : ಪೌರಾಯುಕ್ತರಿಗೆ  ಹಿತರಕ್ಷಣಾ ಸಮಿತಿಯಿಂದ ಅಭಿನಂದನಾ  ಸನ್ಮಾನ

ರಾಣೇಬೆನ್ನೂರು 15 :  ಐತಿಹಾಸಿಕ ಇತಿಹಾಸ ಹೊಂದಿರುವ ಇಲ್ಲಿನ ನಗರಸಭಾ ಪ್ರೌಢಶಾಲೆಗೆ, ನಿರಂತರ ಪ್ರಯತ್ನ, ಜನಪರ, ಬಡವರ ಪರ ಕಾಳಜಿ ಇಟ್ಟುಕೊಂಡು, ಈ ಶಾಲೆಗೆ ನಾಲ್ಕು ಶಿಕ್ಷಕರನ್ನು, ಜಿಲ್ಲಾಧಿಕಾರಿಗಳ ಅನುಮತಿ ಆದೇಶದನ್ವಯ ನೇಮಕಾತಿಗೊಳಿಸಿರುವುದನ್ನು ಸ್ವಾಗತಿಸಿದ ಪ್ರೌಢಶಾಲಾ ಹಿತರಕ್ಷಣಾ ಸಮಿತಿಯ ಮುಖಂಡರು  ಪೌರಾಯುಕ್ತ ಫಕೀರ​‍್ಪ ಇಂಗಳಗಿ ಅವರನ್ನು ನಗರದ ನಾಗರಿಕರ ಪರವಾಗಿ  ಅಭಿನಂದಿಸಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಹಿತ ರಕ್ಷಣಾ ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ಪಕೀರ​‍್ಪ ಇಂಗಳಗಿ   ಆವರು, ತಾವು ನಗರಸಭೆ ಪ್ರೌಢಶಾಲೆಯ ಇತಿಹಾಸವನ್ನು ಗಮನಿಸಿದಾಗ ತುಂಬಾ ಸಂತೋಷವೆನಿಸುತ್ತದೆ. ಇಂದಿನ ದೊಡ್ಡ ದೊಡ್ಡ ಕ್ಷೇತ್ರದಲ್ಲಿರುವ ನಗರದ ವಿಧಾನಸಭಾಧ್ಯಕ್ಷರಾಗಿದ್ದ ಕೆ. ಬಿ. ಕೋಳಿವಾಡರು ಸೇರಿದಂತೆ  ನೂರಾರು ಗಣ್ಯರು ಇದೇ ಶಾಲೆಯಲ್ಲಿ ಕಲಿತು ಬಹುದೊಡ್ಡ ಸಾಧನೆ ಮಾಡಿದವರಾಗಿದ್ದಾರೆ.  

ಅಂತಹ ಪ್ರೌಢಶಾಲೆ ಇತಿಹಾಸದ ಪುನರುತ್ಥಾನವಾಗಬೇಕಾಗಿದೆ ಎನ್ನುವುದು ಎಲ್ಲರ ಆಸೆಯಾಗಿದೆ ಅದಕ್ಕಾಗಿ ಅನೇಕ ರೀತಿಯಲ್ಲಿ ಹೋರಾಟಗಳನ್ನು ಮಾಡಿ ನಾಗರಿಕ ಹಿತ ರಕ್ಷಣಾ ಸಮಿತಿಯು ಎಲ್ಲರ ಮನಸ್ಸನ್ನು ಗೆದ್ದಿದೆ. ಈ ಶಾಲೆ ಇಂದಿಗೂ ಈ ಭಾಗದ ಸಾವಿರಾರು ಬಡ  ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತುಂಬಾ ಅನುಕೂಲವಾಗಲಿದೆ. ಶಿಕ್ಷಕರನ್ನು ನೇಮಕಾತಿ ಮಾಡಿ, ಶಾಲೆಯ ಪುನರುತ್ಥಾನಕ್ಕೆ ನಗರಸಭೆ ಆಡಳಿತವು  ಮುಂದಾಗಿದೆ ಎಂದರು. ಸಮಿತಿಯ ಹಿರಿಯರಾದ ಡಾ ಎಸ್‌. ಎಲ್‌. ಪವಾರ ಅವರು, ಮಾತನಾಡಿ ಇಲ್ಲಿನ ಮಕ್ಕಳಿಗೆ ಪಾಠ ಪ್ರವಚನ ನಡೆಯಲು ಅನೇಕ ಸಮಸ್ಯೆಗಳು ಇದ್ದವು ಸಮಸ್ಯೆಗಳ ಪರಿಹಾರ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅನೇಕ ಭಾರಿ ಶಿಕ್ಷಕರನ್ನು ನೇಮಿಸುವಂತೆ ಮನವಿ ಸಲ್ಲಿಸಲಾಗಿತ್ತು.  ಮನವಿಗೆ ಸ್ಪಂದಿಸಿರುವ ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಆಡಳಿತ ಸದಸ್ಯರು ಅತೀ ಅಗತ್ಯವಿರುವ  ಕನ್ನಡ, ಗಣಿತ, ವಿಜ್ಞಾನ ಮತ್ತು ದೈಹಿಕ ಶಿಕ್ಷಣ ಸಂಬಂಧಿಸಿದಂತೆ ಶಿಕ್ಷಕರನ್ನು ನಿಯೋಜನೆಗೊಳಿಸಿದ್ದಾರೆ, ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಸಹ ಬೇಕಾಗಿದೆ ಕಲ್ಪಿಸಲು ಮನವಿ ಮಾಡಲಾಗಿದೆ ಪೌರಾಯುಕ್ತರು ಅದನ್ನು ಸಹ ದೊರಕಿಸುವ ಭರವಸೆ ನೀಡಿದ್ದಾರೆ ಎಂದರು. ಪೌರಾಯುಕ್ತರ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಿತಿಯ ಗಣ್ಯರಾದ  ವಿ.ವ್ಹಿ ಹರಪನಹಳ್ಳಿ, ಈಶ್ವರ ಹಾವನೂರ, ಅಮರನಾಥ ಭೂತೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಂ.ಎಸ್ ಮಳೀಮಠ, ಗಂಗಮ್ಮ ಹಾವನೂರ, ಮನೋಹರ, ನಾಗರಾಜ ಹಾರೋಗೊಪ್ಪ ರುದ್ರ​‍್ಪ ಮಾಳೇನಹಳ್ಳಿ, ಚಂದ್ರಣ್ಣ ರಾಮಾಳದ ಸೇರಿದಂತೆ ಸಮಿತಿಯ ಮತ್ತಿತರ ಗಣ್ಯರು, ಪ್ರೌಢಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.