ಬೆಂಗಳೂರು, ಏ.14,ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಬಿರುಪಾಕ್ಷ ಮಿಶ್ರಾ ನೇಮಕಗೊಂಡಿದ್ದಾರೆ. ಇದಕ್ಕಿಂತ ಮೊದಲು ಇವರು ಕಾರ್ಪೋರೇಷನ್ ಬ್ಯಾಂಕ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು.ಇವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಇವರು ಅಸೋಸಿಯೇಟ್ ಆಫ್ ಇಂಡಿಯಾನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ (CAIIB) ದಿಂದ ಪ್ರಮಾಣಿಕರಿಸಲ್ಪಟ್ಟಿದ್ದಾರೆ. ಇವರು ಪ್ರೊಬೆಷನರಿ ಆಫಿಸರ್ ಆಗಿ 1984 ರಲ್ಲಿ ನಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ವಿವಿಧ ಬ್ರ್ಯಾಂಚ್, ಸ್ಥಳೀಯ ಮತ್ತು ಮುಖ್ಯ ಕಚೇರಿಯಲ್ಲಿ ಸುಮಾರು 35 ವರ್ಷಗಳ ಆಡಳಿತಾತ್ಮಕ ಮತ್ತು ಕ್ರಿಯಾತ್ಮಕ ಅನುಭವವನ್ನು ಹೊಂದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಬ್ಯಾಂಕಿನ ಕ್ರೆಡಿಟ್ ಮತ್ತು ಕ್ರೆಡಿಟ್ ಮಾನಿಟರಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಮತ್ತು ಬ್ಯಾಂಕಿನ ಐಟಿ ವಿಭಾಗದ ಮುಖ್ಯಸ್ಥರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.