ನಾಟಕದ ಒಳಿತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಡಾ.ಪ್ರಭುಗೌಡ
Apply the benefits of drama in your life: Dr. Prabhugowda
ತಾಳಿಕೋಟೆ 10: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ರಂಗಭೂಮಿಯ ಶ್ರೇಷ್ಠ ನಾಟಕ ಕಲೆ ಕಣ್ಮರೆ ಯಾಗುತ್ತಿದೆ ಅದನ್ನು ರಕ್ಷಿಸಿ ಬೆಳೆಸುವ ಅಗತ್ಯ ಇದೆ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಪುರಾಣ ಮಹಾಮಂಗಲೋತ್ಸವದ ಅಂಗವಾಗಿ ಹಮ್ಮಿಕೊಂಡ "ಅನ್ನ ಕೊಟ್ಟ ರೈತನಿಗೆ ಸಾವು ಕೊಟ್ಟ ಸರಕಾರ" ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಮನೋರಂಜನೆಗಾಗಿ ನಾಟಕಗಳನ್ನು ನೋಡದೆ ಅದರಲ್ಲಿರುವ ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.
ಈ ಗ್ರಾಮದ ರಂಗಭೂಮಿ ಹವ್ಯಾಸಿ ಕಲಾವಿದರೇ ಈ ನಾಟಕವನ್ನು ಮಾಡುತ್ತಿರುವುದು ಸಂತೋಷದ ವಿಷಯವಾಗಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು. ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಅವರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಗೊಂದಲಗಳು ನಡೆಯದಂತೆ ನೋಡಿಕೊಂಡು ಶಾಂತ ರೀತಿಯಿಂದ ಯಶಸ್ವಿಗೊಳಿಸಲು ಎಲ್ಲರೂ ಪ್ರಯತ್ನಿಸಿ ನಾಟಕ ಒಂದು ಪ್ರಭಾವ ಪೂರ್ಣವಾದ ಮಾಧ್ಯಮವಾಗಿದ್ದು ನಮ್ಮ ಬದುಕನ್ನು ಬದಲಿಸಬಲ್ಲ ಶಕ್ತಿ ಅದಕ್ಕಿದೆ ಆದ್ದರಿಂದ ನಾಟಕದ ಹಿಂದಿರುವ ತಿರಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದರು. ಗುಂಡಕನಾಳ ಬ್ರಹನ್ಮಠದ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ, ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪಗೌಡ ಪಾಟೀಲ, ಅಶೋಕ ವಡವಡಗಿ, ನಿವೃತ್ತ ಶಿಕ್ಷಕ ಎಸ್.ಎಂ.ಬೇನಾಳಮಠ, ಸಿದ್ದನಗೌಡ ಬಿರಾದಾರ(ಜಲಪೂರ), ರಾಯಪ್ಪಗೌಡ ಬಿರಾದಾರ, ಮಹದೇವಪ್ಪ ಮೋಪುಗಾರ,ಡಾ.ಸುಭಾಸ ಉಟಕೂರ,ಮಲ್ಲಿಕಾರ್ಜುನ ಮಠ, ಮಲ್ಲಣ್ಣ ಟಕ್ಕಳಕಿ, ಮಡಿವಾಳಪ್ಪ ತಳವಾರ, ಬಸವರಾಜ ವಾಲೀಕಾರ, ಪರಶುರಾಮ ವಾಲಿಕಾರ, ಪ್ರಭುಗೌಡ ಶಂ.ಪಾಟೀಲ,ಬಾಬುಗೌಡ ಕರಕಳ್ಳಿ, ರಮೇಶಗೌಡ ವಡ್ಡೋಡಗಿ, ಶ್ರೀಶೈಲ್ ವಾಲಿಕಾರ, ಈರಯ್ಯ ಆಲ್ಯಾಳಮಠ, ಭೀಮಣ್ಣ ಸಜ್ಜನ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 