ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ಸದಸ್ಯರ ಆಯ್ಕೆಗಾಗಿ ಅರ್ಜಿ ಆಹ್ವಾನ
Applications invited for selection of ward members of Vijayapura Municipal Corporation
ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ಸದಸ್ಯರ ಆಯ್ಕೆಗಾಗಿ ಅರ್ಜಿ ಆಹ್ವಾನ
ವಿಜಯಪುರ 25 : ನಮ್ಮ ನಗರ ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ಸದಸ್ಯರ ಆಯ್ಕೆಗಾಗಿ ಸಾರ್ವಜನಿಕರಿಂದ 29-09-2025ರ ದಿನ ಪತ್ರಿಕೆಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿ 35 ವಾರ್ಡ್‌ನಲ್ಲಿ ಸಾರ್ವಜನಿಕರು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಭಾಗವಹಿಸಿ ವಾರ್ಡ್ ಸಮಸ್ಯೆಗಳನ್ನು ವಾರ್ಡ್ ನಲ್ಲಿಯೇ ಬಗೆಹರಿಸಿಕೊಳ್ಳಲು ಸಾರ್ವಜನಿಕರು ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಬೇಕಾಗಿದೆ. ವಾರ್ಡ್ ಸಮಿತಿಯ ರಚನೆ ಕಡ್ಡಾಯ ಮತ್ತು ಕಾನೂನು ಬದ್ಧವಾಗಿದ್ದು ಪ್ರತಿವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅರ್ಜಿಯನ್ನು ಬಾಗಲಕೋಟ ರಸ್ತೆಯಲ್ಲಿನ ಮಹಾನಗರ ಪಾಲಿಕೆ ಯಲ್ಲಿ ಅರ್ಜಿ ಪಡೆದು ಕೂಡಲೇ ಸಲ್ಲಿಸಬಹುದು. ಸಮಿತಿ ಒಟ್ಟು 10 ಸದಸ್ಯರಿದ್ದು, ಸದಸ್ಯರ ಹಂಚಿಕೆ ಕೆಳಗಿನಂತಿದೆ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಜಾತಿ ವರ್ಗಗಳಿಗೆ 2 ಸ್ಥಾನಗಳು, ಮಹಿಳೆಯರಿಗೆ 3 ಸ್ಥಾನಗಳು, ಸಾಮಾನ್ಯ ವರ್ಗಕ್ಕೆ 3 ಸ್ಥಾನಗಳು ಹಾಗೂ ನಿವಾಸಿ ಕಲ್ಯಾಣ ಸಂಘಗಳು ಮತ್ತು ಸರಕಾರೇತರ ಅಂಗಸಂಸ್ಥೆಗಳ ಪ್ರವೇಶಕ್ಕಾಗಿ 2 ಸ್ಥಾನಗಳು ಮೀಸಲಿಟ್ಟಿವೆ.
ಅರ್ಜಿ ಸಲ್ಲಿಸುವವರು ನಗರ ವ್ಯಾಪ್ತಿಯ ನಿವಾಸಿಯಾಗಿರಬೇಕು ಮತ್ತು ವಾರ್ಡ್ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರಬೇಕು. ಹಾಗೂ ಅರ್ಜಿ ಸಲ್ಲಿಸುವವರು ಯಾವುದೇ ರಾಜಕೀಯ ಪಕ್ಷದ ಸಕ್ರಿಯ ಸದಸ್ಯರಾಗಿರಬಾರದು ಮತ್ತು ಅವರ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕ್ಕದ್ದಮ್ಮೆಗಳು ದಾಖಲಾಗಿರಬಾರದು. ಈ ಮೀಸಲಾತಿ ಹಂಚಿಕೆ ನಗರ ಆಡಳಿತ ನಿಯಮಾವಳಿಗಳಂತೆ ಜಾರಿ ಮಾಡಲಾಗಿದೆ ಮತ್ತು ಪಾರದರ್ಶಕ, ಸಮತೋಲನದ ಹಾಗೂ ಸಮುದಾಯಗಳಿಗೆ ಸಮಾನ ಅವಕಾಶ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದಾನೇಶ್ ಅವಟಿ ವಕೀಲರು, ಸಂಚಾಲಕರು ವಾರ್ಡ್ ಸಮಿತಿ ಬಳಗ ವಿಜಯಪುರ (ಮೊ: 95353 90588)ರನ್ನು ಸಂಪರ್ಕಿಸಬಹುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 