ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ Applications invited for pre-matric and post-matric hostels

ಸಂಬರಗಿ 23: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 8 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು. ಎಂದು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಥಣಿ ತಾಲೂಕು ಅಧಿಕಾರಿ ವೆಂಕಟೇಶ್ ಕುಲಕರ್ಣಿ ಈ ಮಾಹಿತಿ ನೀಡಿದ್ದಾರೆ. 

ಜೂನ್ ಒಂದರಂದು ಶಾಲಾ ಕಾಲೇಜು ಪ್ರಾರಂಭವಾಗಲಿದ್ದು ವಸ್ತಿ ನಿಲಯ ಪ್ರಾರಂಭವಾಗುತ್ತಿದ್ದಾವೆ ಹಲವಾರು ವಸ್ತಿ ನಿಲ್ಲದೆ ಭೇಟಿ ನೀಡಿ ,  ಅವರು ಮಾದಭಾವಿ  ಹಾಸ್ಟೆಲ್ ಪರೀಶೀಲಿಸಿದ ನಂತರ ಮಾತನಾಡುತ್ತಿದ್ದರು.  ಮಾದಭಾವಿ ಖಿಲೇಗಾಂವ್ ಆನಂದಪುರ ಶಿವನೂರ್ ಮೋಳೆ , ವಸ್ತಿ  ನಿಲಯ ಪ್ರಾರಂಭವಾಗುವ ಮೊದಲು, ಅವರು ಈ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅವುಗಳಲ್ಲಿ ಯಾವುದೇ ಸಮಸ್ಯೆಗಳಿವೆಯೇ ಮತ್ತು ಅವು ಕ್ರಮಬದ್ಧವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಶೀಲಿಸಿದ್ದಾರೆ.  

ಸಂಬಂಧಪಟ್ಟ ವಸ್ತಿ ನಿಲಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಜೂನ್ 1 ರಿಂದ ಹಾಸ್ಟೆಲ್ ಪ್ರಾರಂಭವಾಗುತ್ತಿದೆ. ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ನಿಯಮಿತವಾಗಿ ಹಾಜರಿರಬೇಕು ಮತ್ತು ಯಾವುದೇ ವ್ಯಕ್ತಿಗೆ ಯಾವುದೇ ಸಂದೇಹಗಳಿದ್ದರೆ, ತಕ್ಷಣ ಕಚೇರಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.