ಕರವೇ ಕಾರ್ಯಕರ್ತರ ಕೇಸು ವಾಪಸ್‌ಗೆ ಮನವಿ
Appeal to withdraw Karave activists' case
ದೇವರಹಿಪ್ಪರಗಿ 25: ಕಲಬುರ್ಗಿ ಪಟ್ಟಣದ ಸರ್ಕಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನ್ನಡದ ನಾಮಫಲಕ ಇಲ್ಲದ ಕಾರಣ ಕರವೇ ಕಾರ್ಯಕರ್ತರು ಪ್ರತಿಭಟಿಸಿ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿದ್ದ ಪರಿಣಾಮ 11 ಜನರ ಮೇಲೆ ಪ್ರಕರಣ ದಾಖಲಾಗಿತ್ತು.ಕರವೇ ಕಾರ್ಯಕರ್ತರ ಕೇಸು ವಾಪಸ್‌ಗೆ ಪಡೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ವತಿಯಿಂದ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಡಿ.ಬಿ.ಭೋವಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.ಕರವೇ ತಾಲೂಕು ಘಟಕದ ವತಿಯಿಂದ ಹಲವಾರು ಮುಖಂಡರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಕೆಲವು ಕನ್ನಡ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ.
ಕನ್ನಡ ನಾಮಫಲಕ ಕಡ್ಡಾಯ ಎಂಬ ನಿಯಮವಿದ್ದರೂ ನಿಯಮಗಳನ್ನು ಪಾಲಿಸದೆ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಕರವೇ ಮುಖಂಡರು ಪ್ರತಿಭಟನೆ ಮಾಡಿದ್ದರು. ಕನ್ನಡ ವಿರೋಧಿಗಳನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕು ಹಾಗೂ ಕರವೇ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಆಗ್ರಹಿಸಿದರು. ನಂತರ ಕಂದಾಯ ಶಿರಸ್ತೇದಾರ ಡಿ.ಬಿ.ಭೋವಿ ಅವರು ಮನವಿ ಪತ್ರ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷರಾದ ವಿಜಯಕುಮಾರ ಯಂಭತ್ನಾಳ, ಪದಾಧಿಕಾರಿಗಳಾದ ಸಾಹೇಬಗೌಡ ದಾನಗೊಂಡ, ಮುನೀರ್ ಅಹ್ಮದ್ ಮಳಖೇಡ, ಪ್ರಕಾಶ ಡೋಣೂರಮಠ, ಶಿವು ತಳವಾರ, ಅನೀಲ ಅಗಸರ, ರಾಚಯ್ಯ ಹಿರೇಮಠ, ರಾಮು ದೇಸಾಯಿ, ಮಡಿವಾಳಪ್ಪ ದಿಂಡವಾರ, ಚೆನ್ನಪ್ಪ ಮಾವಿನ ಗಿಡದ, ರಮೇಶ ಮುತ್ತಗಿ, ಮಾಂತೇಶ್ ಪಾಟೀಲ, ಕುಮಾರ ಮುತ್ತಗಿ, ನಜೀರಸಾಬ ಬೀಳಗಿ, ಇಕ್ಬಾಲ್ ಬಿಜಾಪುರ, ಅಮರೇಶ ಮಾಶಾನವರ, ಚಂದ್ರು ಧರಿ, ಚಂದ್ರಶೇಖರ ದಾನಗೊಂಡ, ರಾಘವೇಂದ್ರ ಸಬ್ಬಸಗಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 