ಜಿಲ್ಲೆಯಲ್ಲಿ ಖನಿಜ ಸಂಪತ್ತಿನ ಗಣಿಗಾರಿಕೆ ಪರಿಣಾಮಭೂತ ಪ್ರದೇಶಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿ ಬಳಸುವಂತೆ ಮನವಿ
Appeal to use district mineral fund for development of areas affected by mining of mineral wealth in
ವಿಜಯನಗರ ಜಿಲ್ಲೆ 14: ವಿಜಯನಗರ ಜಿಲ್ಲೆ ಪ್ರಜಾಜಾಗೃತಿ ವೇದಿಕೆಯ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳನ್ನು ಬೇಟಿಯಾಗಿ ಜಿಲ್ಲಾ ಖನಿಜ ನಿಧಿಯ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಮಾತನಾಡಿ ಜಿಲ್ಲಾ ಖನಿಜ ನಿಧಿ ಎಂಬುವುದು ಖನಿಜ ಸಂಪತ್ತಿನ ಗಣಿಗಾರಿಕೆಯಿಂದ ಪರಿಣಾಮಕ್ಕೊಳಗಾಗುವ ಪ್ರದೇಶಗಳ ಅಭಿವೃದ್ಧಿಗಾಗಿ ರಚಿಸಲಾದ ವಿಶೇಷ ನಿಧಿಯಾಗಿದೆ. ಗಣಿಗಾರಿಕೆ ಲೀಸ್ ಹೊಂದಿರುವ ಕಂಪನಿಗಳು ಹಾಗೂ ಮಾಲೀಕರು ಸರ್ಕಾರಕ್ಕೆ ಪಾವತಿಸುವ ರಾಯಲ್ಟಿ (ರಾಜಸ್ವ)ದ ಮೇಲೆ ವಿಧಿಸುವ ಹೆಚ್ಚುವರಿ ತೆರಿಗೆಯಿಂದ ಜಿಲ್ಲಾ ಖನಿಜ ನಿಧಿಯನ್ನು ಸೃಷ್ಠಿಸಲಾಗಿದ್ದು, ನಮ್ಮ ದೇಶದಲ್ಲಿ 2015 ರಿಂದ ಈ ಯೋಜನೆ ಜಾರಿಗೆ ಬಂತು.
ಹಾಗೂ ಅದೇ ವರ್ಷ ರಾಜ್ಯ ಸರ್ಕಾರವು ತನ್ನದೇ ಆದ ನಿಯಮಗಳನ್ನು ರೂಪಿಸಿ ಜಿಲ್ಲಾ ಖನಿಜ ನಿಧಿಗೆ ಚಾಲನೆ ನೀಡಿತು. ಖನಿಜ ನಿಧಿ ಹಂಚಿಕೆಯಲ್ಲಿ ವಿಜಯನಗರ ಜಿಲ್ಲೆ ಬಗ್ಗೆ ಸರ್ಕಾರವು ಮಲತಾಯಿ ದೋರಣೆ ತಳೆದಿದ್ದು, ನೂತನ ಜಿಲ್ಲೆ ರಚನೆಯಾಗಿ 5 ವರ್ಷಗಳಾದರೂ ಜಿಲ್ಲೆಗೆ ಅತ್ಯಲ್ಪ ಪ್ರಮಾಣದ ನಿಧಿ ಹಂಚಿಕೆಯಾಗುತ್ತದೆ. ಬೌಗೋಳಿಕವಾಗಿ ಸಂಡೂರು ತಾಲೂಕಿನ ಗಣಿ ಅಧಿರನ ಬೆಟ್ಟಗಳು ಹಾಗೂ ಹೊಸಪೇಟೆ ತಾಲೂಕಿನ ಬೆಟ್ಟಗಳು ಪರಸ್ಪರ ಬೆಸದುಕೊಂಡಿರುವುದರಿಂದ ವಿಜಯನಗರ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಜಿಲ್ಲಾ ಖನಿಜ ನಿಧಿಯ ಅನುದಾನವನ್ನು ರಸ್ತೆ ನಿರ್ಮಾಣಗಳ ಜೊತೆಗೆ ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ವಸತಿ, ಹಾಸ್ಟಲ್‌ಗಳ ನಿರ್ಮಾಣ, ಹೀಗೆ ಮಾನವ ಸಂಪನ್ಮೂಲದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಉದ್ಯೋಗ ಸೃಷ್ಠಿ ಹಾಗೂ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಖನಿಜ ನಿಧಿಯನ್ನು ಬಳಸಬೇಕೆಂದು ಆಗ್ರಹಿಸಿದರು.
ನಂತರ ವೇದಿಕೆಯ ಅಧ್ಯಕ್ಷರಾದ ಯು.ಆಂಜನೇಯಲು ಮಾತನಾಡಿ ಪ್ರಸ್ತುತ ಹೊಸಪೇಟೆ ನಗರದ ವಾರ್ಡ್‌ಗಳಲ್ಲಿ ಜಿಲ್ಲಾ ಖನಿಜ ನಿಧಿಯಿಂದ ರಸ್ತೆ ಮತ್ತು ವಿದ್ಯುತ್ ಕಾಮಗಾರಿಗಳ ಅಭಿವೃದ್ಧಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಈ ಹಿಂದೆ ಸದ್ರಿ ನಿಧಿಯಿಂದ ನಗರದ ಕೆಲವು ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳು ನಿಷ್ಕ್ರೀಯ ಹಾಗೂ ಕಳಪೆಯಾಗಿದ್ದು, ಗುತ್ತಿಗೆದಾರರು, ಅಧಿಕಾರಿಗಳು, ಹಾಗೂ ಮಧ್ಯವರ್ತಿಗಳೇ ಜಿಲ್ಲಾ ಖನಿಜ ನಿಧಿಯ ನಿಜವಾದ ಫಲಾನುಭವಿಗಳಾಗಿ, ಖನಿಜ ನಿಧಿಯ ಮೂಲ ಉದ್ದೇಶವೇ ಬುಡಮೇಲುಗೊಳಿಸಲಾಗಿದೆ. ಆದುದರಿಂದ ನಗರದ ವಾರ್ಡ್‌ಗಳಲ್ಲಿ ಚಾಲನೆ ನೀಡಿರುವ ಕಾಮಗಾರಿಗಳು ಗುಣಮಟ್ಟವಾಗಿರಬೇಕು ಹಾಗೂ ಅನುದಾನದಲ್ಲಿ ದುರ್ಬಳಕೆ ಆಗದಂತೆ ತಡೆಗಟ್ಟಬೇಕು. ಸರ್ಕಾರದ ಆದೇಶದಂತೆ ಆಯಾ ವಾರ್ಡ್‌ಗಳಲ್ಲಿ ಕಾಮಗಾರಿಯ ಸಂಪೂರ್ಣ ವಿವರ, ಗುತ್ತಿಗೆದಾರರ ಹೆಸರು, ಅನುದಾನದ ಮೊತ್ತ ಗುಣಮಟ್ಟದ ಕಾಲಾವಧಿ ಮತ್ತಿತರ ವಿವರಗಳನ್ನೊಳಗೊಂಡ ಖಾಯಂ ನಾಮಫಲಕವನ್ನು ಕಡ್ಡಾಯವಾಗಿ ಕಾಮಗಾರಿ ಸ್ಥಳದಲ್ಲಿ ಅಳವಡಿಸಬೇಕು.
ಆಯಾ ವಾರ್ಡಿನ ಜನರು ಸಂಘ ಸಂಸ್ಥೆಗಳು ತಮ್ಮ ವಾರ್ಡಿನಲ್ಲಿ ಕಾಮಗಾರಿಗಳು ಗುಣಮಟ್ಟವಾಗಿರುವಂತೆ ಎಚ್ಚರವಹಿಸಬೇಕು. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಕಳಪೆ ಕಾಮಗಾರಿಯ ಪುನರಾವರ್ತನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದ್ದು ಹಾಗೂ ಖನಿಜ ನಿಧಿಯ ದುರ್ಬಳಕೆಯಾದರೆ ಗುತ್ತಿಗೆದಾರರು ಮತ್ತು ಅಧಿಕಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಈ.ಪ್ರಶಾಂತ್, ನಜೀರ್‌ಸಾಬ್, ಪಿ.ನಾಗರಾಜ್, ಎನ್.ವಾಸುದೇವಪ್ಪ, ಡಿ.ವಿಶ್ವನಾಥ, ಕಾಶಿನಾಥ ಕುಲ್ಕರ್ಣಿ, ಎ.ಭೀಮಪ್ಪ, ಎಂ.ಶಂಕ್ರ್ಪ, ಕೆ.ವಿ.ರಾಮಲಿ, ಟಿ.ನಾಗೇಂದ್ರ್ಪ, ಎಂ.ರಾಜಶೇಖರ, ಶಾಂತಪ್ಪ, ಮಲ್ಲಿಕಾರ್ಜುನ, ಬಿ.ವಿರುಪಾಕ್ಷಪ್ಪ, ಶೇಖ್‌ಮೆಹಬೂಬ್‌ಬಾಷ, ರಂಗಣ್ಣ, ಜಿ.ರಾಘವೇಂದ್ರ, ಜಿ.ರಾಮಚಂದ್ರ, ಜೆ.ಪಿ.ಬೆನ್ನೂರು, ಇನ್ನು ಮುಂತಾದವರು ಉಪಸ್ಥಿತರಿದ್ದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 