ಆಂಧ್ರದ ಹೊರನಾಡ ಕನ್ನಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಮನವಿ

ಆಂಧ್ರದ ಹೊರನಾಡ ಕನ್ನಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಮನವಿ Appeal to the government to provide educational facilities to Kannada children from Horanadu, Andhra

ಬಳ್ಳಾರಿ 29:  ನಗರದಲ್ಲಿ ಆಂಧ್ರ​‍್ರದೇಶದ ಗಡಿ ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರನಾಡ ಕನ್ನಡ ಮಕ್ಕಳಿಗೆ ಸಮರ​‍್ಕ ಶಿಕ್ಷಣ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಆಂಧ್ರ​‍್ರದೇಶ ಕನ್ನಡ ಶಿಕ್ಷಕರ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಕನ್ನಡ ಪಠ್ಯಪುಸ್ತಕಗಳನ್ನು ವಿತರಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು. ಅಲ್ಲದೆ, ಕರ್ನಾಟಕ ಸರ್ಕಾರದ ಶಿಕ್ಷಕರಿಗೆ ನೀಡಲಾಗುವ ಸೇವಾ ನಿರತಿ ಶಿಕ್ಷಣ ತರಬೇತಿಯಲ್ಲಿ ಆಂಧ್ರ ಭಾಗದ ಹೊರನಾಡ ಕನ್ನಡ ಶಿಕ್ಷಕರಿಗೂ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ, ಸರ್ಕಾರಿ ಶಾಲಾ ಶಿಕ್ಷಕರಿಗೆ ವಿತರಿಸುವ ಶಿಕ್ಷಣ ಸಾಮಗ್ರಿಗಳನ್ನು ಹೊರನಾಡ ಕನ್ನಡ ಶಿಕ್ಷಕರಿಗೂ ನೀಡಬೇಕು ಹಾಗೂ ಕರ್ನಾಟಕದಲ್ಲಿ ಪ್ರತಿ ವರ್ಷ ಪ್ರದಾನ ಮಾಡಲಾಗುವ ಉತ್ತಮ ಶಿಕ್ಷಕರ ಪುರಸ್ಕಾರಕ್ಕೆ ಆಂಧ್ರ ಭಾಗದ ಕನ್ನಡ ಶಿಕ್ಷಕರನ್ನೂ ಪರಿಗಣಿಸಬೇಕೆಂದು ಸಂಘದ ಮುಖಂಡರು ಆಗ್ರಹಿಸಿದರು.ಹೊರನಾಡ ಕನ್ನಡಿಗರ ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಅಧ್ಯಕ್ಷರಾದ ಎನ್‌. ಮರಿಸ್ವಾಮಿ ರೆಡ್ಡಿ, ಆಂಧ್ರ​‍್ರದೇಶ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಗಿರಿಜಾಪತಿ, ಉಪಾಧ್ಯಕ್ಷ ಬಿ. ಇರಳಪ್ಪ, ಖಜಾಂಚಿ ಜಿ. ತಿಪ್ಪೇಸ್ವಾಮಿ, ಎಲ್‌. ಶ್ರೀನಾಥ್, ಬಿ. ಹೊನ್ನೂರ​‍್ಪ ಹಾಗೂ ರಿಯಾಜ್, ರಂಜಾನ್ ಮತ್ತು ಎಂ. ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.